ಚನ್ನರಾಯಪಟ್ಟಣ: ತಿಪಟೂರಿನಲ್ಲಿ ಈಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಟ್ಟಣದ ಸ್ನೇಹಮಯಿ ವಿವೇಕಾನಂದ ಯೋಗ ಮಂದಿರದ ಯೋಗಾಸನ ಪಟುಗಳ ತಂಡ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

7 ವರ್ಷದೊಳಗಿನ ವಿಭಾಗದಲ್ಲಿ ಗಾನವಿ ಅಡಗೂರು, ಮೋನಿಷಾ (ಪ್ರಥಮ) ಸ್ಥಾನ. 8-10 ವರ್ಷದೊಳಗಿನ ವಿಭಾಗ: ಡಿ. ಕೀರ್ತನಾ (ದ್ವಿತೀಯ), ವಂಶಿತಾ (ತೃತೀಯ), 11-14 ವರ್ಷ: ವಿಸ್ಮಿತಾ (). 25-35 : (). 35-50 : ನೇತ್ರಾವತಿ (ಪ್ರಥಮ) ಸ್ಥಾನಗಳಿಸಿದ್ದಾರೆ ಎಂದು ಯೋಗ ಮಂದಿರದ ಅಧ್ಯಕ್ಷ ಮಂಜುನಾಥ್ ಹಾಗೂ ವ್ಯವಸ್ಥಾಪಕ ಕೆ. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ನಮ್ಮ ತಂಡದ ವತಿಯಿಂದ ಉಗ್ರ ನರಸಿಂಹ ಯೋಗನೃತ್ಯ ರೂಪಕ ಈಗಾಗಲೇ 22 ಪ್ರದರ್ಶನ ಕಂಡಿದೆ. ಮುಂಬರುವ ಮೈಸೂರಿನ ಯುವ ದಸರಾದಲ್ಲಿ ಈ ರೂಪಕವನ್ನು ಪ್ರದರ್ಶಿಸಲು ಭರದ ಸಿದ್ಧತೆ ನಡೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಯೋಗಪಟುಗಳಾದ ಚೇತನ್, ಉಮೇಶ್, ನೇತ್ರಾವತಿ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ.
