ಚನ್ನರಾಯಪಟ್ಟಣ: ತಾಲೂಕಿನ ಕಾರೆಕೆರೆ ಕೃಷಿ ಕಾಲೇಜಿನ ವಿದ್ಯಾರ್ಥಿಗಳಿಂದ ಬರಗೂರು ಗ್ರಾಮದಲ್ಲಿ ಗ್ರಾಮೀಣ ಮೌಲ್ಯಮಾಪನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು.
ಸಹಾಯಕ ಸಂಯೋಜಕ ಶಿವಬಸಪ್ಪ ಹಾಗೂ ಗೌರವಾನ್ವಿತ ಸಹಾಯಕ ಡೀನ್ ಭೈರಪ್ಪನವರ್ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಗ್ರಾಮಸ್ಥರು ಹಾಗೂ ವಿದ್ಯಾರ್ಥಿ ತಂಡದ ವತಿಯಿಂದ ಸಾಂಪ್ರದಾಯಿಕವಾಗಿ ಎತ್ತಿನಗಾಡಿ ಸವಾರಿ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಗ್ರಾಮೀಣ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಈ ಸ್ವಾಗತವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಇದರಿಂದ ಗಣ್ಯರು ಹಾಗೂ ಗ್ರಾಮಸ್ಥರ ನಡುವೆ ಆತ್ಮೀಯ ವಾತಾವರಣ ನಿರ್ಮಾಣವಾಯಿತು.

ನಂತರ ಸಹಾಯಕ ಡೀನ್ ಭೈರಪ್ಪನವರ್ ಅವರಿಂದ ನಮ್ಮ ಗ್ರಾಮದ ಹೆಸರನ್ನು ಪ್ರತಿನಿಧಿಸುವ “ಅದಮ್ಯ ಕೃಷಿ” ಎಂಬ ಹೆಸರಿನ ಉದ್ಘಾಟನೆಯನ್ನು ನೆರವೇರಿಸಲಾಯಿತು. ಗ್ರಾಮೀಣ ಕೃಷಿಯ ಶಕ್ತಿ, ರೈತರ ಪರಿಶ್ರಮ ಮತ್ತು ಕೃಷಿಯಲ್ಲಿನ ನಿರಂತರ ಪ್ರಯತ್ನವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಈ ಹೆಸರನ್ನು ಪರಿಚಯಿಸಲಾಯಿತು.
ಗ್ರಾಮದ ಹಿರಿಯ ನಾಗರಿಕರಾದ ಶ್ರೀ ಗಣಗಧರ ಅವರು ಗ್ರಾಮಸ್ಥರ ಸಹಕಾರದೊಂದಿಗೆ ಸಿದ್ದಪಡಿಸಲಾದ ಗ್ರಾಮ ನಕ್ಷೆ ಯನ್ನು ಪರಿಚಯಿಸಿದರು.
ವಿವರವಾಗಿ ಗ್ರಾಮದ ಪ್ರಮುಖ ಪ್ರದೇಶಗಳು, ಮನೆಗಳು, ಕೃಷಿ ಭೂಮಿಗಳು, ರಸ್ತೆ, ನೀರಿನ ಮೂಲಗಳು, ಸಾರ್ವಜನಿಕ ಸಂಸ್ಥೆಗಳು ಹಾಗೂ ಇತರ ಪ್ರಮುಖ ಸ್ಥಳಗಳ ಕುರಿತು ಅವರು ವಿವರಿಸಿದರು. ಗ್ರಾಮಸ್ಥರಿಗೆ ತಮ್ಮದೇ ಗ್ರಾಮದ ಸಂಪನ್ಮೂಲಗಳು ಮತ್ತು ಭೌಗೋಳಿಕ ವಿನ್ಯಾಸವನ್ನು ಒಟ್ಟಾಗಿ ಗುರುತಿಸಲು ಈ ಚಟುವಟಿಕೆ ಸಹಕಾರಿಯಾಯಿತು.
ಈ ಕಾರ್ಯಕ್ರಮದಲ್ಲಿ ಕುವೆಂಪು ಶಾಲೆಯ ವಿದ್ಯಾರ್ಥಿಗಳು ಸಹ ನಮ್ಮೊಂದಿಗೆ ಭಾಗವಹಿಸಿ ವಿವಿಧ ಚಟುವಟಿಕೆಗಳಿಗೆ ಸಹಕಾರ ನೀಡಿದರು. ಮಕ್ಕಳ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಇನ್ನಷ್ಟು ಉತ್ಸಾಹಭರಿತವಾಗಿ ನಡೆಯಿತು.
ಗ್ರಾಮಸ್ಥರು, ವಿದ್ಯಾರ್ಥಿಗಳು ಮತ್ತು ನಮ್ಮ ತಂಡದ ಸದಸ್ಯರ ನಡುವಿನ ಪರಸ್ಪರ ಸಂವಹನವು ಕಖಂಯ ಪ್ರಮುಖ ಉದ್ದೇಶವಾದ “ಜನರ ಭಾಗವಹಿಸುವಿಕೆಯ ಮೂಲಕ ಗ್ರಾಮದ ಸ್ಥಿತಿಗತಿಗಳನ್ನು ಅಥ-ರ್’ಮಾಡಿಕೊಳ್ಳುವುದು ಮತ್ತು ಸ್ಥಳೀಯ ಜ್ಞಾನವನ್ನು ದಾಖಲಿಸುವುದು” ಎಂಬುದನ್ನು ಸಾಧಿಸಲು ಸಹಕಾ ರಿಯಾಯಿತು.
ಗ್ರಾಮದ ಸಂಪನ್ಮೂಲಗಳು, ಸಮಸ್ಯೆಗಳು, ಕೃಷಿ ಪರಿಸ್ಥಿತಿಗಳು ಹಾಗೂ ಗ್ರಾಮಸ್ಥರ ಅಭಿಪ್ರಾಯಗಳನ್ನು ಅವರದೇ ಭಾಗವಹಿಸುವಿಕೆಯ ಮೂಲಕ ಅರ್ಥಮಾಡಿಕೊಳ್ಳಲು ಈ ಕಾರ್ಯಕ್ರಮವು ಉತ್ತಮ ವೇದಿಕೆಯನ್ನು ಒದಗಿಸಿತು.
ಗಣ್ಯರ ಮಾರ್ಗದರ್ಶನ, ಗ್ರಾಮಸ್ಥರ ಸಹಕಾರ ಮತ್ತು ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
– ಮಂಜುನಾಥ್ ಐ.ಕೆ.
