ಕೆ.ಆರ್.ಪೇಟೆ: ತಾಲ್ಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಗಂಜಿಗೆರೆ ಮಹೇಶ್ ಅವರನ್ನು ಪಟ್ಟಣದ ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಆತ್ಮೀಯ ಸ್ನೇಹ ಬಳಗದ ವತಿಯಿಂದ ನೂತನ ಅಧ್ಯಕ್ಷ ಗಂಜಿಗೆರೆ ಮಹೇಶ್ ಅವರಿಗೆ ಪೇಟ ತೊಡಿಸಿ, ಶಾಲು ಹೊದಿಸಿ, ಹೂಮಾಲೆ ಹಾಕಿ ಗೌರವಿಸಲಾಯಿತು. ಬಳಿಕ ತಿರುಪತಿ ಲಡ್ಡು ಪ್ರಸಾದ ತಿನ್ನಿಸಿ ಶುಭ ಕೋರಲಾಯಿತು.
ಭಿನಂದಿಸಿ ಮಾತನಾಡಿದ ಕ್ರೈಸ್ಟ್ ದ ಕಿಂಗ್ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಶಿವರಾಜು ಗಂಜಿಗೆರೆ ಮಹೇಶ್ ಅವರು ಅತಿ ಚಿಕ್ಕ ವಯಸ್ಸಿಗೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ಹಲವು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮ ಪ್ರಾಮಾಣಿಕತೆ, ನಿಷ್ಪಕ್ಷಪಾತ ಮತ್ತು ಸಾಮಾಜಿಕ ಕಳಕಳಿಯಿಂದ ಗುರುತಿಸಿಕೊಂಡಿದ್ದಾರೆ. ಇಂತಹ ಯುವ ಪ್ರತಿಭೆಗೆ ಜವಾಬ್ದಾರಿ ಸಿಕ್ಕಿರುವುದು ಇಡೀ ತಾಲ್ಲೂಕಿನ ಪತ್ರಕರ್ತರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಜಿಗೆರೆ ಮಹೇಶ್ ಅವರು, ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೂ ವಿವಿಧ ಸಂಘ-ಸಂಸ್ಥೆಗಳು ಹಾಗೂ ಆತ್ಮೀಯ ಸ್ನೇಹ ಬಳಗ ನಿರಂತರವಾಗಿ ಅಭಿನಂದನೆ ಸಲ್ಲಿಸುತ್ತಿರುವುದು ಸಂತಸ ತಂದಿದೆ. ನಿಮ್ಮೆಲ್ಲರ ಪ್ರೀತಿಯೇ ನನ್ನ ಶಕ್ತಿ ಎಂದು ಭಾವುಕರಾದರು.
ಈ ಸಂದರ್ಭದಲ್ಲಿ ಕಾಮನಹಳ್ಳಿ ಚಂದ್ರೇಗೌಡ,ಡೈರಿ ಮಾಜಿ ಅಧ್ಯಕ್ಷ ಗೀರಿಗೌಡ, ಜೆ.ಸಿ.ಬಿ ಚೌಡೇನಹಳ್ಳಿ ರವಿ, ರಂಗೇಗೌಡ, ಶಿವು, ಕುಮಾರ್, ಲೋಕೇಶ್, ವೆಂಕಟೇಶ್, ಮನು, ಪತ್ರಕರ್ತರಾದ ಕಾಮನಹಳ್ಳಿ ಮಂಜುನಾಥ್, ಹೊಸಹೊಳಲು ರಘು, ಲಿಂಗಾಪುರ ಯಶು,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ, ಕೆ.ಆರ್.ಪೇಟೆ
