ಬೆಂಗಳೂರು, ಸೆಪ್ಟೆಂಬರ್ 8: ಶ್ರೀರಾಮ್ ಜನರಲ್ ಇನ್ಶೂರೆನ್ಸ್ (SGI) ಮತ್ತು 31 ವರ್ಷಗಳ ಅನುಭವ ಹೊಂದಿರುವ ಭಾರತದ ಪ್ರಮುಖ ಎನ್ಬಿಎಫ್ಸಿಗಳಲ್ಲಿ ಒಂದಾದ ಎಸ್ಕೆ ಫೈನಾನ್ಸ್ ಲಿಮಿಟೆಡ್ ನಡುವೆ ಕಾರ್ಯತಂತ್ರದ ಕಾರ್ಪೊರೇಟ್ ಏಜೆನ್ಸಿ ಪಾಲುದಾರಿಕೆ ಘೋಷಿಸಲಾಗಿದೆ.
ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ವಿವಿಧ ವಿಮಾ ಪರಿಹಾರಗಳ ಲಭ್ಯತೆಯನ್ನು ಹೆಚ್ಚಿಸುವುದು ಹಾಗೂ ವಿಮಾ ರಕ್ಷಣೆಯನ್ನು ಮತ್ತಷ್ಟು ಸುಲಭವಾಗಿ ಜನರಿಗೆ ತಲುಪಿಸುವುದು ಈ ಪಾಲುದಾರಿಕೆಯ ಪ್ರಮುಖ ಉದ್ದೇಶವಾಗಿದೆ.
ಈ ಸಹಭಾಗಿತ್ವದ ಮೂಲಕ ಎಸ್ಕೆ ಫೈನಾನ್ಸ್ನ 700ಕ್ಕೂ ಹೆಚ್ಚು ಶಾಖೆಗಳು ಹಾಗೂ ಇತರ ನಿಯೋಜಿತ ವಿತರಣಾ ಜಾಲಗಳ ಮೂಲಕ ಶ್ರೀರಾಮ್ ಜನರಲ್ ಇನ್ಶೂರೆನ್ಸ್ನ ವಿವಿಧ ಸಾಮಾನ್ಯ ವಿಮಾ ಪರಿಹಾರಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಎಸ್ಕೆ ಫೈನಾನ್ಸ್ನ ವ್ಯಾಪಕ ವಿತರಣಾ ಜಾಲದ ಮೂಲಕ ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ವಿಮಾ ಪರಿಹಾರಗಳನ್ನು ಪಡೆದುಕೊಳ್ಳಬಹುದಾಗಿದೆ.
ವಿಮಾ ಕ್ಲೇಮ್ಗಳು ಹಾಗೂ ಗ್ರಾಹಕ ಸೇವೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು SGI ತನ್ನ ಸ್ಥಾಪಿತ ಸೇವಾ ವ್ಯವಸ್ಥೆಯ ಮೂಲಕ ನಿರ್ವಹಿಸಲಿದೆ.
ಈ ಪಾಲುದಾರಿಕೆ ಕುರಿತು ಮಾತನಾಡಿದ ಎಸ್ಕೆ ಫೈನಾನ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಜೇಂದ್ರ ಕುಮಾರ್ ಸೇತಿಯಾ ಮಾತನಾಡಿ, “ವಿಶೇಷವಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ವಿಮೆ ಪ್ರಮುಖ ಪಾತ್ರ ವಹಿಸುತ್ತದೆ. ಶ್ರೀರಾಮ್ ಜನರಲ್ ಇನ್ಶೂರೆನ್ಸ್ನೊಂದಿಗಿನ ನಮ್ಮ ಪಾಲುದಾರಿಕೆಯು ಸೂಕ್ತ ವಿಮಾ ಪರಿಹಾರಗಳನ್ನು ಗ್ರಾಹಕರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ತಂತ್ರಜ್ಞಾನದಲ್ಲಿ ನಿರಂತರ ಹೂಡಿಕೆ ಮಾಡುವ ಮೂಲಕ ಗ್ರಾಹಕರ ಅನುಭವವನ್ನು ಸರಳಗೊಳಿಸುವತ್ತ ನಾವು ಗಮನಹರಿಸುತ್ತಿದ್ದೇವೆ. ನಾವು ಸೇವೆ ನೀಡುತ್ತಿರುವ ಮಾರುಕಟ್ಟೆಗಳಲ್ಲಿ ವಿಮಾ ರಕ್ಷಣೆಯ ಕುರಿತು ಜಾಗೃತಿ ಮತ್ತು ಲಭ್ಯತೆಯನ್ನು ವಿಸ್ತರಿಸಲು SGIಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ,” ಎಂದರು.
ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಎಂಒ ಅಫ್ತಾಬ್ ಅಲ್ವಿ ಮಾತನಾಡಿ, “ಎಸ್ಕೆ ಫೈನಾನ್ಸ್ನ ವ್ಯಾಪಕ ಮಾರುಕಟ್ಟೆ ಉಪಸ್ಥಿತಿ ಹಾಗೂ SGIಯ ಗ್ರಾಹಕ ಕೇಂದ್ರಿತ ವಿಧಾನ ಮತ್ತು ಸಾಮಾನ್ಯ ವಿಮಾ ಕ್ಷೇತ್ರದಲ್ಲಿನ ದೀರ್ಘಕಾಲದ ಅನುಭವವನ್ನು ಒಗ್ಗೂಡಿಸುವ ಮೂಲಕ ಹೆಚ್ಚಿನ ಗ್ರಾಹಕರಿಗೆ ವಿಮಾ ರಕ್ಷಣೆಯನ್ನು ತಲುಪಿಸುವ ಗುರಿ ಹೊಂದಿದ್ದೇವೆ.
ಈ ಪಾಲುದಾರಿಕೆಯು ವಿಮೆಯ ಕುರಿತು ಜಾಗೃತಿ ಹೆಚ್ಚಿಸುವುದರ ಜೊತೆಗೆ ದೇಶದ ವಿವಿಧ ಮಾರುಕಟ್ಟೆಗಳಲ್ಲಿ ನಮ್ಮ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸಲು ಸಹಕಾರಿಯಾಗಲಿದೆ,” ಎಂದು ಹೇಳಿದರು.
