ಬೆಂಗಳೂರು: ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಬೇಡಿಕೆ ಜಾಸ್ತಿಯಾಗಿದ್ದು, ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಮಾರಾಟ ಮಾಡುವ ಉದ್ದೇಶದಿಂದ ಕೆಎಂಎಫ್ ಇದೀಗ ಇ-ಕಾಮರ್ಸ್ ಸೈಟ್ಗೆ ಲಗ್ಗೆಯಿಟ್ಟಿದೆ.
ಇತ್ತೀಚಿನ ದಿನಗಳಲ್ಲಿ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟಿನ ಉತ್ಪಾದನೆಗಿಂತ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಕೆಎಂಎಫ್ ಸಂಸ್ಥೆಯು ಉತ್ಪಾದನೆ ಜೊತೆಗೆ ಮಾರಾಟವನ್ನು ಹೆಚ್ಚಿಸಲು ಪ್ಲ್ಯಾನ್ ಮಾಡಿದೆ. ಇದೀಗ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಆನ್ಲೈನ್ನಲ್ಲಿಯೂ ಸಿಗಲಿದ್ದು, ನಿಮ್ಮ ಮನೆಗೆ ಬಂದು ತಲುಪಲಿದೆ.
ಇಷ್ಟು ದಿನ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ನಂದಿನಿ ಪಾರ್ಲರ್ನಲ್ಲಿ ಮಾತ್ರ ಸಿಗುತ್ತಿತ್ತು. ಇದೀಗ ನಂದಿನಿ ಪ್ರಾಡಕ್ಟ್ ಇ-ಕಾಮರ್ಸ್ಗೆ ಲಗ್ಗೆಯಿಟ್ಟಿದ್ದು, ಆನ್ಲೈನ್ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳಬಹುದಾಗಿದೆ. ಇ-ಕಾಮರ್ಸ್ ವೆಬ್ಸೈಟ್ ಅಥವಾ ಆಪ್ ಮೂಲಕ ಆರ್ಡರ್ ಮಾಡಬಹುದು. ಸದ್ಯ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಉತ್ಪಾದನೆ ಹೆಚ್ಚಿಸಿ, ಇ-ಕಾಮರ್ಸ್ ಮೂಲಕ ಮಾರಾಟ ಮಾಡಲು ಕೆಎಂಎಫ್ ಮುಂದಾಗಿದೆ.
