ಚನ್ನರಾಯಪಟ್ಟಣ: ಬಿ.ಜಿ.ವಿಸ್. ಸೌಹಾರ್ದ ಸಹಕಾರಿ ಸಂಘ ನಿಯಮಿತದ 2025-26ನೇ ಸಾಲಿನ 5ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸೆ.20ರಂದು ಆಯೋಜಿಸಲಾಗಿದೆ.
ಸಂಘದ ಅಧ್ಯಕ್ಷ ಜೆ.ಎನ್. ಮಧುಸೂಧನ್ ಅವರ ಅಧ್ಯಕ್ಷತೆಯಲ್ಲಿ ಸೆ.20ರ ಭಾನುವಾರ ಬೆಳಗ್ಗೆ 11 ಗಂಟೆಗೆ ಚನ್ನರಾಯಪಟ್ಟಣದ ಶ್ರೀದೇವಿ ಮಕ್ಕಳ ಆಸ್ಪತ್ರೆ ಸಮೀಪ, ನವೋದಯ ಶಾಲೆಯ ಹಿಂಭಾಗದಲ್ಲಿರುವ ಎಸ್.ಬಿ.ಜಿ. ಕನ್ವೆನ್ಷನ್ ಹಾಲ್ನಲ್ಲಿ ಸಭೆ ನಡೆಯಲಿದೆ.
ಈ ಸಂಬಂಧ ಅರ್ಹ ಸದಸ್ಯರಿಗೆ ಈಗಾಗಲೇ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಕಾರಣಾಂತರಗಳಿಂದ ನೋಟಿಸ್ ತಲುಪದೇ ಇರುವ ಅರ್ಹ ಸದಸ್ಯರು ಈ ಪ್ರಕಟಣೆಯನ್ನೇ ನೋಟಿಸ್ ಎಂದು ಪರಿಗಣಿಸಿ, ಸಭೆಗೆ ತಪ್ಪದೇ ಹಾಜರಾಗುವಂತೆ ಸಂಘದ ಮುಖ್ಯ ಕಾರ್ಯನಿರ್ವಾಹಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಜಿ.ವಿಸ್. ಆಡಳಿತ ಮಂಡಳಿಯ ಆದೇಶದ ಮೇರೆಗೆ ಈ ಪತ್ರಿಕಾ ಹೇಳಿಕೆ ನೀಡಲಾಗಿದೆ.
– ಮಂಜುನಾಥ್ ಐ.ಕೆ.
