ಮನಸು ಮೃದಂಗ
(ಲೇಖನಗಳ ಸಂಕಲನ)
ಪರಿವರ್ಥನೆ
ಒಂದು ವಾರ ಪತ್ರಿಕೆಯಲ್ಲಿ ವಿಧವೆಯೊಬ್ಬಳಿಂದ ಲೈಂಗಿಕ ತಜ್ಞರಿಗೆ ಪ್ರಶ್ನೆ ಹೇಗಿತ್ತೆಂದರೆ; ಅಸಹಜ ಲೈಂಗಿಕ ಆಸಕ್ತಿ, ಸಪಿಂಡ ಕಾಮಕೇಳಿ, ಅಪ್ರಾಪ ಮೊಮ್ಮಕಳ ಮೇಲೆಯೇ ಲೈಂಗಿಕ ದೌರ್ಜನ್ಯ, ಬಣ್ಣ ಬಣ್ಣಗಳಿಂದ ಕೂಡಿರುವಂತಹ ಕಾಮ ವೈಭವೀಕರಣಗಳಿಂದ ರಾರಜಿಸುತಿದ್ದ ಆಕೆಯ ಪ್ರಶ್ನೆಯನ್ನು ಓದಿ ನನಗೆ ಖೇದವಾಯಿತು. ಈ ರೀತಿಯ ಪ್ರಶ್ನೆಗಳನ್ನ ಓದಿದ ಯುವಕರು ಏನಾಗಬಾರದು ಹೇಳಿ?
ಮಾನವನ ವಿಚಾರ, ವಿಶೇಷ, ನಡತೆಗಳೆಲ್ಲವು ನರ ರಚನಾ, ನರ ರಸಾಯನ, ನರ ಭೌತಿಕ, ನರ ಸಂಙ್ಞ ವಿಧಾನಗಳಿಂದ ಕೂಡಿದ್ದಾಗಿರುತ್ತೆ. ಈ ಕಾರಣದಿಂದಲೇನೊ “ಯಥಾ ಅಲೋಚನಃ ತಥಾಃ ಸಂಪನಃ” ಅಂದರೆ “ತನ್ನ ಯೋಚನೆಯು ಯಾವಾಗಲು ತನ್ನ ನೆಡಗೆ ಸಮಾನವಾಗಿರಬೇಕು” ಎಂಬ ನಾಣ್ಣುಡಿ ಇಂದಿಗು ಪ್ರಸ್ಥುತ.
ಯೋಚನೆ ಮತ್ತು ನಾಲಿಗೆ ಸಮನ್ವಯತೆಯ ಕೊರತೆ ಕಂಡಾಗ ಮನ ವಿಭಜನೆಗೊಂಡು ಚಂಚಲತೆಗಳು ತಲೆದೋರುವುದು. ನರ ಭೌತವಿಜ್ಞಾನ ಸಂಶೋಧನೆಗಳಿಂದ ತಿಳಿಯುವ ವಿಷಯ ನಮ್ಮ ಸಂಚನಾಶೀಲ ಸ್ಥಿತಿ ಮೆದುಳಿನ ಘನ ನರ ರಚನಾ ವ್ಯವಸ್ಥಗೆ ನೇರ ಸಂಬಂಧವನ್ನು ಹೊಂದಿರುತ್ತೆ.
ಉದಾಹರಣಗೆ, ಮನುಷ್ಯನು ಘೋರ ವಾಹನ ಅಪಘಾತ ಅಥವ ಯಾವುದೆ ಅನಾಹುತಗಳಿಗೆ ತನ್ನ ಮೆದುಳಿಗೆ ಪೆಟ್ಟಾದ ಪಕ್ಷದಲ್ಲಿ, ಪೆಟ್ಟಾದ ನರ ರಚನಾ ಅವ್ಯವಸ್ಥೆಯಿಂದ ಉಂಟಾದ ಮಾಂಸ ಖಂಡ ಹಾಗು ಮಾತಿನ ನಿರ್ವಾಹಣ ತೊಂದರೆಗಳನ್ನು ನೋಡಬಹುದು. ಈ ರೀತಿಯ ಅಪಘಾತಗಳಿಂದ ಬದುಕಿ ಉಳಿದು ಮೇಲೆ ತಿಳಿಸಿದ ತೊಂದರೆಗಳಿಂದ ಅನುಭವಿಸುವ ವ್ಯಕ್ತಿಯನ್ನು “post traumatic sequelae” ಗೆ ಒಳಪಟ್ಟಿರವನು ಎಂದು ಕರೆಯುತ್ತಾರೆ. ಅಂದರೆ ನಮ್ಮ ಮಾನಸಿಕ ನಿರ್ವಾಹಣ ಕಾರ್ಯ ಹಾಗೂ ಶರೀರ ಸಂಚಲನಾ ಕಾರ್ಯಗಳು ಮೆದುಳಿನಿಂದಲೇ ಎಂದಂತಾಯಿತು.
ಮನುಷ್ಯನ ಅರಿವು, ನಿದ್ರೆ, ಗಮನ, ಏಕಾಗ್ರತೆ, ಬುದ್ದಿ, ನಡೆ, ನುಡಿ, ವ್ಯಕ್ತಿತ್ವ, ವಿಕಾಸಗಳೆಲ್ಲವು ಸರಿಯಾದ, ಸಾಮಾನ್ಯವಾದ ಮೆದುಳನ್ನು ಅವಲಂಬಿಸುರುತ್ತದೆ. ಸೃಷ್ಠಿಕರ್ತನು ಎಲ್ಲರಿಗೂ ಸಮನಾದ ಅಂದರೆ ಶೇಕಡ ನೂರರಷ್ಟು ಸರಿಯಾದ ಮಿದುಳನ್ನು ಕೊಡಲು ಸಾಧ್ಯವಿಲ್ಲ. ಕೊಟ್ಟಿದ್ದರೆ ಪ್ರಪಂಚದಲ್ಲಿ ಪೈಪೋಟಿಯೇ ಇರುತ್ತಿರಲಿಲ್ಲ. ಪೈಪೋಟಿ ಇರುವುದರಿಂದಲೆ ಪ್ರಪಂಚ ವೈವಿಧ್ಯಮಯ, ಆಶಾದಾಯಕ, ಆಕರ್ಷಣೆ ಮತ್ತು ಮಾನವನಲ್ಲಿ ಛಲವಿರುವದು. ಪೈಪೋಟಿ ಇಲ್ಲದೆ ಇದ್ದಲ್ಲಿ ಪ್ರಪಂಚ ನೀರಸ ಅನ್ನಿಸುತಿತ್ತು. ಇದರಿಂದಲೇ ಆಸೆ ನಿರಾಸೆಯಂತಹ ವೈರುತ್ಯಗಳನ್ನು ನಾವು ಕಾಣುವುದು. ಹೇಳಬೇಕೆಂದರೆ ಇಡೀ ವಿಶ್ವವು ಕಂಡ ಮತ್ತು ಕಂಡರಿಯದ ವೈರುತ್ಯಗಳಿಂದ ಘನ ದ್ರವ್ಯಾವಸ್ಥೆಗಳನ್ನು ಹೊಂದಿರುತ್ತದೆ.

ಬುದ್ದಿಮಾಂಧ್ಯತೆಯನ್ನು ಹೊರತುಪಡಸಿ ಮಿದಳಿನ ಸರಿಸಮನ್ವಯತೆಯು ಅಲ್ಪ ಸ್ವಲ್ಪ ಕೊರತೆಯಿಂದ ಕೂಡಿರುತ್ತೆ. ಎಲ್ಲರು ಒಂದೇ ತರಹ ಇರವುದಿಲ್ಲ. ಈ ಏರು ಪೇರಿನಿಂದ ಕೆಲವರು ವಾಗ್ಮಿಳಾಗುತ್ತಾರೆ, ಮತ್ತೆ ಕೆಲವರು ಒಳ್ಳ್ಳೆಯ ಬರಹಗಾರರಾಗುತ್ತಾರೆ. ವಾಗ್ಮಿಗಳಿಗೆ ಮಾತೆ ಬಂಡವಾಳ, ಬರಹಗಾರರಿಗೆ ಲೇಖನವೆ ಬಂಡವಾಳ. ಇಂದಿನ ದಡ್ಡ ಮುಂದೆ ವಿಜ್ಞಾನಿಯಾಗಬಹುದು, ಹಾಗೆಯೇ ಇಂದಿನ ಬುದ್ದಿವಂತಾ ಮುಂದೆ ದಡ್ಡನಾಗಬಹುದು.
ಇವತ್ತಿನ ಯಾಂತ್ರಿಕ ಜಂಜಾಟ ಹಾಗು ಅತೀವ ಪೈಪೋಟಿಯ ಲೋಕದಲ್ಲಿ ಲಿಂಗ ನಿಷ್ಠೆಗಳು ಮಣ್ಣು ಪಾಲಾಗಿವೆ. ಅದರ ಕಾರಣಕರ್ತರು ನಾವೇ, ನಾವು ಕಂಡುಕೊಂಡ ನಿರಂತರ ಆಸೆಗಳ ಮತ್ತು ಮಾಯೆಯ ಆಡಂಬರಗಳು ಸ್ವಯಂಕೃತ ಅಪರಾಧಗಳೆಂದೇ ಕರಯಬಹುದು. ಇವೆಲ್ಲದಕ್ಕೂ ಚಿಕಿತ್ಸೆ ಇಲ್ಲವೆಂದಲ್ಲ, ಇದೆ, ಅದನ್ನು “ಪರಿವರ್ಥನೆ” ಎಂದು ಕರೆಯಬಹುದು.
ಈ ಪರಿವರ್ಥನೆಯ ಪದವನ್ನು ಬಿಡಸಿ ನೋಡಿದಾಗ ” ಪರಿ ಪರಿಯಾಗಿ ಕಾಡುವ ಅಥವ ಇರುವ ವರ್ಥನೆಯನ್ನ ಜ್ಞಾನದ ಆಯಾಮಗಳ ಒಳಗೆ ನಕಾರಾತ್ಮ ನಡುವಳಿಕೆ ಹಾಗು ಚಿಂತನೆಗಳನ್ನ ಸಕಾರತ್ಮಕ ಗುಣಗಳಿಗೆ ತರುವ ಪ್ರಯತ್ನವೇ ಪರಿವರ್ಥನೆ”. ಪರಿವರ್ಥನೆಯಾಗುವುದು ಸುಲಭದ ಮಾತಲ್ಲ.
ಮೊದಲನೆಯದಾಗಿ ಅರಿವು, ಅಮೇಲೆ ಜ್ಞಾನ, ಮತ್ತೆ ತಿಳುವಳಿಕೆ, ಇದರಿಂದ ಆತ್ಮ ಶೋಧನೆ, ಅಹಂಕಾರವನ್ನು ನಿರಹಂಕರಿಸಿವುದು, ವಿಷಯಗಳನ್ನ ವಿವೇಕಿಸುವುದು, ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು. ಸಂಯಮ ಚಿತ್ತನಾಗಿ ಆಲಿಸಿದಂತಹ ವ್ಯಕ್ತಿ ಪರಿವರ್ಥನೆಯಾಗಬಹುದೆನ್ನುವ ನಂಬಿಕೆ ನನ್ನದು. ಇವೆಲ್ಲಕ್ಕಿಂತಲು ಶ್ರೇಷ್ಟವಾದ ಮಾನದಂಡ “ಜ್ಞಾನೋದಯ”
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ


[…] 3.https://vicharavisthara.com/manasu-mrudhanga-dr-a-m-nagesh-5/ […]