ಕೆ.ಆರ್.ಪೇಟೆ:ತಾಲ್ಲೂಕಿನ ಗೋವಿಂದೇಗೌಡನ ಕೊಪ್ಪಲು ಗ್ರಾಮದ ಬಳಿ ಹಾದು ಹೋಗಿರುವ ಹೇಮಾವತಿ ಎಡದಂಡೆ ಉಪನಾಲೆಯನ್ನು ಮುಚ್ಚಿ ಅಕ್ರಮವಾಗಿ ಗೋದಾಮು ನಿರ್ಮಾಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ರೈತರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸರ್ವೆ ನಂ.92 ರಲ್ಲಿ ಹಾದು ಹೋಗಿರುವ ಉಪನಾಲೆಯನ್ನು ವೆಂಕಟರಾಮು ಎಂಬುವವರು ಸಂಪೂರ್ಣವಾಗಿ ಮುಚ್ಚಿ, ನಾಲೆಯ ಮೇಲೆಯೇ ಬೃಹತ್ ಗೋದಾಮು ನಿರ್ಮಾಣ ಮಾಡುತ್ತಿದ್ದಾರೆ ಎಂದು ಸ್ಥಳೀಯ ರೈತರು ಆರೋಪಿಸಿದ ಹಿನ್ನೆಲೆ ಗೋವಿಂದೇಗೌಡನ ಕೊಪ್ಪಲು ಸುತ್ತಮುತ್ತಲಿನ ಹೆತ್ತಾರು ಎಕರೆ ಭೂ ಪ್ರದೇಶಕ್ಕೆ ಪ್ರಮುಖ ವಾಗಿದ್ದ ಇತ್ತೀಚೆ ನೀರನ್ನು ಕೊರತೆಯಿಂದ ಇದ್ದ ನಾಲೆಯನ್ನೇ ಮುಚ್ಚಿರುವುದರಿಂದ ಅದನ್ನೇ ಬಂಡವಾಳ ಮಾಡಿಕೊಂಡು ಅವರು ಸಂಪೂರ್ಣವಾಗಿ ನಾಳೆ ಮುಚ್ಚಿ ಗೋದಾಮು ನಿರ್ಮಿಸುತ್ತಿದ್ದಾರೆ ಅಧಿಕಾರಿಗಳು ಕೂಡಲೇ ನಾಲೆ ತೆರವುಗೊಳಿಸಬೇಕು ಎಂದು ಗ್ರಾಮದ ರೈತರು ಆಗ್ರಹ ಕೇಳಿಬರುತ್ತದೆ.
ರೈತರಿಂದ ದೂರು ಬಂದ ಹಿನ್ನೆಲೆಯಲ್ಲಿ ಹೇಮಾವತಿ ನೀರಾವರಿ ಇಲಾಖೆ ಸಹಾಯಕ ಕಾರ್ಯ ಪಾಲಕ ಅಭಿಯಂತರ ವಿಶ್ವನಾಥ್,ಮೋಹನ್ ಹಾಗೂ ಕಂದಾಯ ಇಲಾಖೆ ಕಸಬಾ ವಿಭಾಗದ ಆರ್.ಐ ಜ್ಞಾನೇಶ್,ತಾಲ್ಲೂಕು ಭೂಮಾಪಕಧಿಕಾರಿ ರವೀಂದ್ರ ಹಾಗೂ ಗ್ರಾಮ ಲೆಕ್ಕಾಧಿಕಾರಿ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಾಲೆಯ ಮೂಲ ನಕ್ಷೆ, ಪಹಣಿ ಮತ್ತು ಸ್ಥಳೀಯರ ಹೇಳಿಕೆ ದಾಖಲಿಸಿಕೊಂಡ ಅವರು ಪರಿಶೀಲನೆ ವೇಳೆ ನಾಲೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಒತ್ತುವರಿ ಆಗಿರುವ ಬಗ್ಗೆ ವರದಿ ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿ ನಾಲೆಯನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
– ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
