ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ಬಿ.ಸಿ.ಟ್ರಸ್ಟ್ ತುಮಕೂರು ತಾಲ್ಲೋಕು ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಡಾ.ಹೇಮಾವತಿ.ವಿ.ಹೆಗ್ಗಡೆಯವರಆಸೀರ್ವಾದದಿಂದ ತುಮಕೂರು ಬಿ ವಲಯದ ssಎಸ್.ಎಸ್.ಪುರಂ ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಬ್ಯೂಟಿಷಿಯನ್ ತರಬೇತಿ ಮಧು ಮಗಳ ಸಿಂಗಾರ ಇದರ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ತುಮಕೂರು-1 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಅವರು ಹಾಗೂ ಒಕ್ಕೂಟದ ಅಧ್ಯಕ್ಷರಾದ ಅಕ್ತರ್ ಉನ್ನಿಸ ಅವರು ಬ್ಯುಟಿಶಿಯನ್ ತರಬೇತಿ ನೀಡಿದ ಪವಿತ್ರ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಎಲ್ಲರೂ ಸ್ವ ಉದ್ಯೋಗ ಪೂರಕ ವಾದ ಬ್ಯುಟಿಶಿಯನ್ ತರಬೇತಿ ಪಡೆದಿದ್ದು ಇದನ್ನು ಇಲ್ಲಿಗೆ ನಿಲ್ಲಿಸದೆ ದೊಡ್ಡಮಟ್ಟದಲ್ಲಿ ಇದರಿಂದ ಆದಾಯಗಳಿಸಬೇಕು ಮತ್ತು ಅಭಿವೃದ್ಧಿ ಆಗಬೇಕು ಎಂದು ತಿಳಿಸುತ್ತ ಯೋಜನೆಯ ಕಾರ್ಯಕ್ರಮಗಳು ಹಾಗೂ ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು ಈ ಸಂದರ್ಭದಲ್ಲಿ ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರೀಮತಿ ರೇಖಾ, ಸೇವಾಪ್ರತಿನಿಧಿ ಅಮ್ರಿನ್ ಬಾನು ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
