ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ವಡ್ಡರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 8 ಅಭ್ಯರ್ಥಿಗಳು ಹಾಗೂ ಮನ್ಮುಲ್ ನಿರ್ದೇಶಕ ಡಾಲು ರವಿ ಬಣದ 3 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಗೆಲುವು ಸಾಧಿಸಿದ ಮಂಜುಳಾ ಶ್ರೀನಿವಾಸ್, ರತ್ನಮ್ಮ ಮಹಾದೇವಪ್ಪ, ಸೋಮಪ್ರಭ, ರತ್ನಮ್ಮ ನಾಗೇಗೌಡ, ರೇವಮ್ಮ ಸುಬ್ರಹ್ಮಣ್ಯ, ಭಾಗ್ಯಮ್ಮ ಬಸವೇಗೌಡ, ಆಶಾ ಯೋಗೇಶ್, ಸುಮ ಶಿವಕುಮಾರ್, ಪ್ರಮೀಳಾ ರಾಜೇಗೌಡ, ಲೀಲಾವತಿ ಮಂಜುನಾಥ್ ಹಾಗೂ ರತ್ನಮ್ಮ ರಂಗಸ್ವಾಮಿ ಅವರನ್ನು ಚುನಾವಣಾಧಿಕಾರಿ ಸಂತೋಷ್ ಕುಮಾರ್ ಘೋಷಿಸಿದರು.
ನೂತನ ನಿರ್ದೇಶಕರಿಗೆ ಶಾಸಕ ಹೆಚ್.ಟಿ. ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಎಂ. ಮೋಹನ್, ಯುವ ಜೆಡಿಎಸ್ ಅಧ್ಯಕ್ಷ ಮಹಾದೇವೇಗೌಡ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾದೇವೇಗೌಡ, 8 ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ ವಡ್ಡರಹಳ್ಳಿ ಗ್ರಾಮದ ಎಲ್ಲಾ ಷೇರುದಾರರು ಹಾಗೂ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ಇದು ಪಕ್ಷದ ಗೆಲುವಲ್ಲ, ಇಡೀ ಗ್ರಾಮದ ಜನತೆಯ ಗೆಲುವಾಗಿದೆ ಎಂದು ತಿಳಿಸಿದರು.
– ಶ್ರೀನಿವಾಸ್ ಆರ್.
