ಚಾಮರಾಜನಗರ: ತಾಲೂಕಿನ ಇರಸವಾಡಿ ಗ್ರಾಮದ ಎನ್.ಪ್ರದೀಪ್ ರಾಜ್ ಅವರು ಭೂವಿಜ್ಞಾನ ವಿಷಯದಲ್ಲಿ ಮಂಡಿಸಿರುವ “ಐಡೆಂಟಿಫಿಕೇಶನ್ ಆಫ್ ಗ್ರೌಂಡ್ ವಾಟರ್ ರಿಚಾರ್ಜ್ ಸೈಟ್ ಅಂಡ್ ಸೂಟೇಬಲ್ ರಿಚಾರ್ಜ್ ಸ್ಟ್ರಕ್ಚರ್ಸ್ ಫಾರ್ ಬಂಡಳ್ಳಿ ವಾಟರ್ ಶೆಡ್ ಹನೂರು ತಾಲೂಕ್, ಚಾಮರಾಜನಗರ ಡಿಸ್ಟ್ರಿಕ್ಟ್, ಕರ್ನಾಟಕ, ಇಂಡಿಯಾ ಯೂಸಿಂಗ್ ರಿಮೋಟ್ ಸೆನ್ಸಿಂಗ್ ಅಂಡ್ ಜಿಐಎಸ್ ಟೆಕ್ನಿಕ್ಸ್.” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿಗೆ ಅಂಗೀಕರಿಸಿದೆ.
ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯ ಭೂ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಡಿ.ನಾಗರಾಜು ಅವರ ಮಾರ್ಗದರ್ಶನದಲ್ಲಿ ಪ್ರದೀಪ್ ರಾಜ್.ಎನ್ ಅವರು ಈ ಮಹಾಪ್ರಬಂಧವನ್ನು ಮಂಡಿಸಿದ್ದು, ಮುಂಬರುವ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪಿಎಚ್ಡಿ ಪದವಿಯನ್ನು ಪಡೆಯಲಿದ್ದಾರೆ.
