ಮನಸು ಮೃದಂಗ
(ಲೇಖನಗಳ ಸಂಕಲನ)
ಡಾ|| ಹುಚ್ಚುರಾವ್
ಅನೇಕ ದಿನಗಳಿಂದ ಒಂದೇ ಒಂದು ಯೋಚನೆ ನನ್ನನ್ನು ಕಾಡುತ್ತಿತ್ತು, ಯಾವುದಂದರೆ ಡಾ|| ರಾಮ ರಾವ್ ಹೇಗೆ ಡಾ|| ಹುಚ್ಚು ರಾವ್ ಆದರೆಂಬುದು. ಅವರಿಗೆ ತುಂಬಾ ಸ್ನೆಹಿತರು ಇಲ್ಲದಿದ್ದರೂ ಕೆಲವೇ ಆಪ್ತರು ಹತ್ತಿರದಿಂದ ಅವರನ್ನು ಕಂಡಿರುವರಾಗಿರುತ್ತಾರೆ. ವಯಸ್ಸಿನ ಅಂತರವಿದ್ದಿದ್ದರಿಂದ ಅವರನ್ನು ಈ ವಿಷಯವಾಗಿ ವಿಚಾರಿಸುವ ಗೋಜಿಗೆ ಹೋಗಿರಲಿಲ್ಲ, ಧೈರ್ಯವು ಸಾಲುತ್ತಿರಿಲಿಲ್ಲ.
ಕೊನೆಗೂ ಅವರ ಮನಸ್ಸನ್ನು ಅರಿತು ಏನೇ ಆದರು ಆಗಲಿ ಎನ್ನುವ ಧೈರ್ಯದಿಂದ ಒಂದು ಪ್ರಶ್ನೆಯನ್ನು ಕೆಳೇಬಿಟ್ಟೆ. “ಸಾರ್, ನಿಮಗೆ ನಿಮ್ಮ ಕೆಲವೇ ಸ್ನೆಹಿತರು ನಿಮ್ಮನ್ನು ಡಾ|| ಹುಚ್ಚುರಾವ್ ಎಂದು ಯಾಕೆ ಕರೆಯುವರು”? ಎಂದೆ, “ಹೋ…. ಅದಾ, ಅದೊಂದು ದೊಡ್ಡ ಕತೆ ಬಿಡಿ” ಅಂದರು. ನನ್ನ ಪ್ರಶ್ನೆಗೆ ಉತ್ತರವನ್ನು ನೀಡಲೇ ಬೇಕೆನ್ನುವ ಪಟ್ಟಿಗೆ ವಿಧಿ ಇಲ್ಲದೆ ಅವರ ಆತ್ಮ ಕತೆಯನ್ನು ತೋಡಿಕೊಂಡರು.
“ನೋಡಿ ಡಾಕ್ಟ್ರೇ ನನಗೆ ವೈದ್ಯ ವೃತ್ತಿ ಬಯಸದೇ ಬಂದ ಭಾಗ್ಯ. ಮೊದಲಿಂದಲು ನನಗೆ ತಾಂತ್ರಿಕ ವಿಜ್ಞಾನದಲ್ಲಿ ವಿಶೇಷ ಆಸಕ್ತಿ ಇತ್ತು. ಅದರಲ್ಲು ರಸಾಯನ ತಂತ್ರ ವಿಜ್ಞಾನ ಮತ್ತು ಖನಿಜ ಸ್ನಾತಕ್ಕೋತರ ವಿಭಾಗದಲ್ಲಿ ವಿಶೇಷ ಆಸಕ್ತಿ ಇತ್ತು. ಆದರೆ ನನ್ನ ಅಂಕಗಳನ್ನು ಗಮನಿಸಿಸದ ನನ್ನ ಮಾವ ಅವರ ಅಪೇಕ್ಷೆಯಂತೆ ವೈದ್ಯ ವೃತ್ತಿಗೆ ಜಮಾ ಆದೆ. ಆದರೂ ನನಗೆ ಯಾವುದೆ ಬೇಜಾರು ಇಲ್ಲ. ಈ ವೃತ್ತಿ ನನಗೆ ಎಲ್ಲವನ್ನು ತಂದು ಕೊಟ್ಟಿದೆ. ನನಗೆ ಅತೀವ ಸಂತೋಷವನ್ನು ಉಂಟು ಮಾಡಿದೆ. ನಾನು ವೈದ್ಯಕೀಯ ಕಾಲೇಜಿಗೆ ಸೇರಿದ ಕ್ಷಣ ಪಿ ಯು ಸಿ ಸ್ನೇಹಿತರಿಗೆ ಪರಮಾಶ್ಚರ್ಯ. ನಾನು ಉತ್ತರ ಕರ್ನಾಟಕದಲ್ಲಿ ಪಿ ಯು ಸಿ ಮಾಡಿದ್ದರಿಂದ ಸುಡುವ ನಾಡಿನ ವೈಧ್ಯಕೀಯ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕಿತು.
ನಾನೊಬ್ಬ ಸಾಮನ್ಯ ವರ್ಗದ ಅತೀ ಹಳ್ಳಿಯು ಅಲ್ಲದ ಅಥವ ಪಟ್ಟಣವು ಅಲ್ಲದ ಊರಿನ, ವ್ಯಾಪಾರಿ ಕುಟುಂಬದಿಂದ ಬಂದಿರುವನಾದ್ದರಿಂದ ಸಹಜವಾಗಿಯೇ ಆರ್ಥಿಕ ಹಿನ್ನಡೆ. ಆ ಹಿನ್ನಡೆಯನ್ನು ಮೆಟ್ಟಿದ್ದು ನನ್ನ ದೊಡ್ಡಮ್ಮನವರು. ಎಮ್.ಬಿ.ಬಿ.ಎಸ್ ಮುಗಿಸಿದ ನಂತರ ಸ್ನಾತಕೋತ್ತರ ಪದವಿಯನ್ನು ಯಾವುದಾದರು ಪ್ರತಿಷ್ಠಿತ ಕೇಂದ್ರಿಯ ವೈದ್ಯಕಾಲೇಜಿನಲ್ಲೆ ಮಾಡಬೇಕುನ್ನೆವ ಉದ್ದೇಶವಿತ್ತು. ಹಾಗಾಗಿ ರಾಷ್ಟ್ರೀಯ ಮಾನಸಿಕ ವೈದ್ಯ ಸಂಸ್ಥೆ ಕೇಂದ್ರದಲ್ಲಿ ಡಿ.ಪಿ.ಎಮ್ ಕೋರ್ಸಗೆ ಸೇರಿದೆ. ತರವಾಯ ಸ್ನೇಹಿತರು ಶಹಾಬಾಷ್ ಕೊಟ್ಟದ್ದಿಕ್ಕಿಂತ ಆಡಿಕೊಂಡಿದ್ದೇ ಹೆಚ್ಚು.
ಈ ರಾಷ್ಟ್ರೀಯ ಮಾನಿಸಿಕ ಕಾಲೇಜಿಗೆ ಸೇರಿದ ನಂತರ ನನ್ನಲ್ಲಿ ಕೀಳರಿಮೆ ಆವರಿಸಿತ್ತು. ಕಾರಣ ಈ ಮಾನಿಸಿಕ ವಿದ್ಯಾಕೇಂದ್ರದಲ್ಲಿ ಇಡೀ ಭಾರತ ದೇಶದ ಮೂಲೆ ಮೂಲೆಗಳಿಂದ ಉನ್ನತ ಮಟ್ಟದ ವಿಧ್ಯಾರ್ಥಿಗಳು ಬಂದಿದ್ದರಿಂದ ಅವರ ಮುಂದೆ ಭಯ ಹಾಗು ಅರ್ದಂಬರ್ದ ಇಂಗ್ಲಿಷ್ ಇದ್ದಿದ್ದರಿಂದ ಒಂಟಿಯಾಗಿಯೇ ಕಾಲ ಕಳೆದೆ. ಸೇರಿದ ಹೊಸದರಲ್ಲಿ ಅನ್ಯ ಲೋಕದ ಒಳಗೆ ಸೇರಿದೆನೆಂಬ ಭ್ರಮೆ ನನ್ನಲ್ಲಿ ಆವಿರಿಸಿತ್ತು. ಕಾಲ ಕ್ರಮೇಣ ಹೇಗೊ ವಿಧಿಯಿಲ್ಲದೆ ಹೊಂದಿಕೊಂಡೆ. ನನ್ನ ಪ್ರೊಫೆರ್ಗಳು ನನ್ನನ್ನು ನಾಲಾಯಕೆಂದೆ ಭಾವಿಸಿದ್ದರು. ಪುಸ್ತಕಗಳನ್ನು ಹಾಗು ಪ್ರತಿನಿತ್ಯ ಇಂಗ್ಲಿಷ್ ದಿನ ಪತ್ರಿಕೆಗಳನ್ನು ಓದಲು ಸಲಹೆ ನೀಡಿದ್ದರು. ಹೇಗೊ ಏನೋ ಅಂತು ಇಂತು ಕೆಲವರು ನನ್ನ ನೆಚ್ಚಿನ ಪ್ರಾಧ್ಯಾಪಕದ್ದರಿಂದ ಪಾಸ್ ಆದೆ. ಎಂ.ಡಿ ಸಿಗದೆ ಇದ್ದ ಕಾರಣಕ್ಕೆ ನನ್ನ ಈ ಖಾಸಗಿ ವೃತ್ತಿಗೆ ಹಾಸನ ಜಿಲ್ಲೆಯನ್ನು ಆರಿಸಿಕೊಂಡೆ. ಈ ಜಿಲ್ಲೆಯ ಹಸಿರು ವಾತಾವರಣ ಹಾಗು ನಲ್ಮೆಯ ಸ್ನೆಹಿತರ ಸಹಾಯದಿಂದ ಇಲ್ಲೆ ನೆಲಿಸಿಬಿಟ್ಟೆ. ನನ್ನ ಹೊಸ ವೃತ್ತಿ ಜೀವನದ ಕೆಲವು ತಿಂಗಳಲ್ಲೆ ಮದುವೆ ಆಯಿತು, ವರ್ಷದ ನಂತರ ಮಗುವು ಆಯಿತು. ಮೊದಲ ಕೆಲವು ವರ್ಷಗಳಲ್ಲಿ ನಾನು ಆಟವನ್ನು ಪ್ರವೃತ್ತಿಯಾಗಿಸಿ ಕೊಂಡು ಖುಷಿಯಾಗಿ ಕಾಲ ಕಳಯುತ್ತಿದ್ದೆ.

ಮಾನಿಸಿಕ ವಿದ್ಯಾ ಸಂಸ್ಥೆಯಲ್ಲಿ ಮೊದಲ ದಿನವೆ ನನ್ನನ್ನು ಖೈದಿಗಳು ಇರುವ ವಾರ್ಡಗೆ ದಬ್ಬಿದರು. ಅಲ್ಲಿಯ ರೋಗಿಗಳ ವರ್ತನೆ ಮತ್ತು ನೋಟ ದಿಗಲು ಹುಟ್ಟಿಸುವಂತ್ತಿತ್ತು. ನನಗೆ ಕನ್ನಡ ಮತ್ತು ತೆಲಗು ಭಾಷೆ ಗೊತ್ತಿದ್ದರಿಂದ ರೋಗಿಗಳ ಸಂಖ್ಯೆ ಹೆಚ್ಚು. ಒಮ್ಮೆ ವಾರ್ಡ್ನಲ್ಲಿ ನಾನು ರೋಗಿಗಳ ಲಕ್ಷಣಗಳನ್ನು ಕೇಸ್ ಶೀಟ್ನಲ್ಲಿ ಬರೆಯುತಿದ್ದಾಗ, ಸುಮಾರು ಎರಡು ಘಂಟೆ ಮಧ್ಯಾನ್ಹದ ಸಮಯ, ಅಲ್ಲಿಯೇ ಅಡ್ಮಿಟ್ ಆಗಿದ್ದ ರೋಗಿ ಒಂದು ಪೇಪರ್ ಪಟ್ಟಣವನ್ನ ನನ್ನ ಕೈಗೆ ನೀಡಿದ. ಮೂರು ದಿವಸಗಳ ಹಿಂದೆ ಆತನು ಪೆರೋಲ್ನಲ್ಲಿ ಹೊರ ಹೋಗಿದ್ದರಿಂದ ಮಿಠಾಯಿ ತಂದಿರಬಹುದೆಂಂದು ಓಪನ್ ಮಾಡಿ ನೊಡಿದಾಗ ಅವಕ್ಕಾದೆ, ವಿಸ್ಮಿತನಾದೆ ಹಾಗು ನಿಶ್ಚಲಿತನಾದೆ. ಕಾರಣ ಆ ಪೊಟ್ಟಣದೊಳಗೆ ಕಂಡಿದ್ದು ತನ್ನ ಎರೆಡು ವೃಷಣ ಹಾಗು ಅವುಗಳ ಚೀಲ ಸಮೇತ ಕತ್ತಿರಿಸಿ ಕೊಂಡು ತಂದಿದ್ದ.
ಹೊಸಬನಾದ್ದರಿಂದ ನನ್ನ ಸೀನಿಯರ್ ರೆಸಿಡೆಂಟ್ಗೆ ತಿಳಿಸಿ ಸಮಯವಾದ್ದರಿಂದ ವಾರ್ಡನಿಂದ ಹೊರ ನೆಡದಿದ್ದೆ. ಕೊನಗೆ ಅವನನ್ನು ಏನು ಮಾಡಿದರೆಂಬುದರ ಮಾಹಿತಿ ನನ್ನ ಜ್ಞಾಪಕದಲ್ಲಿ ಇಲ್ಲ. ಆ ಕ್ಷಣದಿಂದ ಅನುಕಂಪ ಉಂಟಾಗಿ, ಖಿನ್ನತೆ ದೂರವಾಗಿ ಮನಸ್ಸಿನ ಬಗ್ಗೆ ತಿಳಿಯುವ ಆಸೆ ರೂಢಿಸಿಕೊಂಡೆ. ಆದರೂ ನನಗೆ ಈ ಮನಸ್ಸಿಗೆ ಸಂಬಂಧ ಪಟ್ಟ ವಿಷಯಗಳು ಅವೈಜ್ಞಾನಿಕ ಮತ್ತು ಫಿಲಾಸಫಿ ಎಂದು ನನ್ನ ಮನದ ಆಳದಲ್ಲಿ ತಳ ಊರಿಬಿಟ್ಟಿದೆ. ಈಗಷ್ಠೆ ಈ ಮನೋಭಾವದಿಂದ ಹೊರ ಬಂದಿರುವೆನು. ಹೊರ ಬರಲು ಇಪ್ಪತ್ತೆಂಟು ಸುಧೀರ್ಘ ವರ್ಷಗಳೇ ಬೇಕಾಯಿತು ನೋಡಿ. ನನ್ನ ಆಧ್ಯಾತ್ಮದ ಒಲವಿನಿಂದ ಈ ಮನಸ್ಸೆ ಎಲ್ಲದಕ್ಕಿಂತಲು ಶ್ರೇಷ್ಠವೆಂದು ತಿಳಿಯಿತು.
ಸಾವಿಗೆ ಶರಣಾದನು, ದೇವರಲ್ಲಿ ಲೀನನಾದನು……ದೇವರಲ್ಲಿ ಲೀನನಾದನು.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

