ಹಾಸನ: ನಗರದ ಬಿ. ಕಾಟೀಹಳ್ಳಿಯ ದೂರವಾಣಿ ನಗರದಲ್ಲಿ ನೂತನವಾಗಿ ಹಾಗೂ ಉನ್ನತ ರೀತಿಯಲ್ಲಿ ನಿರ್ಮಾಣವಾಗಿರುವ ಪಂಚಮುಖಿ ಉದ್ಯಾನವನವನ್ನು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಟೇಪ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ `ಬಿ.ಕಾಟೀಹಳ್ಳಿ ಹಾಗೂ ದೂರವಾಣಿ ನಗರದ ಕಾರ್ಯಕರ್ತರು, ಮುಖಂಡರು, ಸ್ಥಳೀಯರು ಆತ್ಮೀಯವಾಗಿ ಬರಮಾಡಿಕೊಂಡರು.ನಂತರ ಉದ್ಯಾನವನ ಉದ್ಘಾಟಿಸಿ ವೀಕ್ಷಿಸಿ ಸ್ಥಳೀಯರು ಹಾಗೂ ಸಾರ್ವಜನಿಕರನ್ನು ಕುರಿತು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
