ಮುಂಬೈ ಮೂಲದ ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುವ ಸೇಶಸಾಯಿ ಟೆಕ್ನಾಲಜಿ ಲಿಮಿಟೆಡ್ ಷೇರು ಮಾರುಕಟ್ಟೆ ಪ್ರವೇಶಕ್ಕೆ ಸೆಕ್ಯೂರಿಟಿ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಹಸಿರು ನಿಶಾನೆ ತೋರಿದೆ.
ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಹೂಡಿಕೆ ಸಂಗ್ರಹಕ್ಕೆ ಸೇಶಸಾಯಿ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆ ಮುಂದಾಗಿದ್ದು ಡಿಸೆಂಬರ್ 27, 2024ರಂದು ಐಪಿಒಗಾಗಿಿ ಕರಡು ದಾಖಲೆಗಳನ್ನು ಸಲ್ಲಿಕೆ ಮಾಡಿತ್ತು.ಈ ಐಪಿಒ ಸಂಚಿಕೆಯು 600 ಕೋಟಿ ರೂ ಹೊಸ ಸಂಚಿಕೆ ಷೇರುಗಳು ಹಾಗೂ ಆಫರ್ ಫಾರ್ ಸೇಲ್ನಲ್ಲಿ (ಒಎಫ್ಎಸ್) ಪ್ರಗ್ನ್ಯಾತ್ ಪ್ರವೀಣ್ ಲಲ್ವಾಣಿಯಿಂದ 39,37,008 ಇಕ್ವಿಟಿ ಷೇರುಗಳು ಮತ್ತು ಗೌತಮ್ ಸಂಪತ್ರಾಜ್ ಜೈನ್ ಅವರ 39,37,007 ಇಕ್ವಿಟಿ ಷೇರುಗಳು ಒಳಗೊಂಡಿವೆ.
ಕಂಪನಿ ಬಿಆರ್ಎಲ್ಎಮ್ಎಸ್ ನೊಂದಿಗೆ ಸಮಾಲೋಚಿಸಿ 120 ಕೋಟಿ ರೂ ಸಂಗ್ರಹಕ್ಕೆ ಐಪಿಒ ಪೂರ್ವ ಹಂಚಿಕೆಯನ್ನೂ ಆಯ್ಕೆ ಮಾಡುವ ಸಾಧ್ಯತೆ ಇದೆ. ಪೂರ್ವ ಐಪಿಒ ನಿಯೋಜನೆ ಪೂರ್ಣಗೊಂಡರೆ, ಪೂರ್ವ ಐಪಿಒ ನಿಯೋಜನೆಯ ಅಡಿಯಲ್ಲಿ ಸಂಗ್ರಹಿಸಲಾದ ಮೊತ್ತವನ್ನು ಹೊಸ ವಿತರಣೆಯಿಂದ ಕಡಿಮೆ ಮಾಡಲಾಗುತ್ತದೆ. ಹೊಸ ಸಂಚಿಕೆ ಮೂಲಕ ಸಂಗ್ರಹಿಸಲಾದ ಬಂಡವಾಳದಲ್ಲಿ 195.33 ಕೋಟಿ ರೂ ಹಣವನ್ನು ಅಸ್ಥಿತ್ವದಲ್ಲಿರುವ ಉತ್ಪಾದನಾ ಘಟಕಗಳ ವಿಸ್ತರಣೆಗೆ ಬಂಡವಾಳ ವೆಚ್ಚಕ್ಕೆ ಬಳಸಲಾಗುವುದು. 300 ಕೋಟಿ ರೂ ಹಣವನ್ನು ಕಂಪನಿಯ ಬಾಕಿ ಸಾಲದ ಮರುಪಾವತಿಗೆ ಹಾಗೂ ಸಾಮಾನ್ಯ ಕಾರ್ಪೋರೇಟ್ ಉದ್ದೇಶಕ್ಕೆ ಬಳಸಲಾಗುವುದು.

[…] https://vicharavisthara.com/seshasai-technologies-sebi-green-signal-for-market-entry-with-rs-600-cro… […]