ಹಾಸನ- ಅಭಿವೃದ್ಧಿಗೆ ಜನರ ತೆರಿಗೆ ಪಾಲನ್ನು ಸಮರ್ಪಕವಾಗಿ ವಿತರಿಸದ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಪ್ರತಿಭಟಿಸಿದರು .
ನಗರದ ಆದಾಯ ತೆರಿಗೆ ಇಲಾಖೆ ಮುತ್ತಿಗೆ ಯತ್ನಿಸಿದ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಎತ್ತಿನಗಾಡಿ ಹಾಗೂ ಸಿಲಿಂಡರ್ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್.ಡಿ ರಂಗಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಮೇಲೆ ಮಲತಾಯಿ ಧೋರಣೆ ಅನುಸರಿಸು ತ್ತಿದೆ.ರಾಜ್ಯದ ಜನರು ಪಾವತಿಸಿದ ತೆರಿಗೆಯನ್ನು ನೀಡುವಲ್ಲಿಯೂ ಮೋಸವೆಸಗು ತ್ತಿದೆ ಇದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ದಿನನಿತ್ಯ ಬಳಕೆಯ ವಸ್ತುಗಳು ಸೇರಿದಂತೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಯು ಏರಿಕೆ ಕಂಡಿದ್ದು ಮಧ್ಯಮ ಹಾಗೂ ಬಡ ಜನರ ಲೂಟಿಯಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ .ಇದನ್ನು ಬಲವಾಗಿ ಖಂಡಿಸುತ್ತೇವೆ ಎಂದರು.
ಕೇಂದ್ರ ಸರ್ಕಾರ ಬೆಳೆ ಏರಿಕೆ ನೀತಿಯನ್ನು ಕೈಬಿಡಬೇಕು ಹಾಗೂ ಕರ್ನಾಟಕ ರಾಜ್ಯದ ತೆರಿಗೆ ಪಾಲನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾ ಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿ.ಈ ಪುನೀತ್ ,ಸಮೀರ್ ಪಾಷಾ, ಎಚ್.ಎನ್ ಶರತ್, ರವಿಕಿರಣ್ ಇತರರು ಇದ್ದರು

[…] ರಾಜ್ಯದ ತೆರಿಗೆಯನ್ನು ವಿತರಿಸದ ಕೇಂದ್ರದ ವ… […]