ಹಾಸನ: ನಗರದ ರಿಂಗ್ ರಸ್ತೆಯ ಪುಷ್ಪಗಿರಿ ಬಡಾವಣೆಯ 7ನೇ ಅಡ್ಡರಸ್ತೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕನಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಸ್ಥಳೀಯ ಶಾಸಕ
ಹೆಚ್.ಪಿ.ಸ್ವರೂಪ್ ಪ್ರಕಾಶ್ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.

ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ, ಉಪಾಧ್ಯಕ್ಷ ಲಿಂಗರಾಜು, ನಿರ್ದೇಶಕರಾದ ಗೀತಾ-ತಾರೇಶ್ ದಂಪತಿ ಶಂಕುಸ್ಥಾಪನೆ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವರಾಜು ಅರಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಬಿ.ಕೇಶವಮೂರ್ತಿ, ಕನಕ ಪತ್ತಿನ (CEO) ಮುಖ್ಯ ಕಾರ್ಯನಿರ್ವಣಧಿಕಾರಿ ಮಾಜಿ ಸೈನಿಕರು ಆನಂದ ಕುಮಾರ್ ಡಿ, ಮಂಗಳಾಪುರ ನಾಗರಾಜು, ದಿವಾಕರ ಗೌಡ, ಚೋಳೇನಳ್ಳಿ ಸುರೇಶ್, ಕೋಮಲೇಶ್, ವಕೀಲರಾದ ಪುಟ್ಟರಾಜು, ನವಿಲೆ ಅಣ್ಣಪ್ಪ ಹಾಗೂ ಬನವಾಸೆ ಸತೀಶ್, ಮಕಾನ್ ಸತೀಶ್, ವಿನೋದ್ ಹಾಗೂ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ನೌಕರ ವರ್ಗ ಹಾಗೂ ಸಮಾಜದ ಬಂಧುಗಳು, ಜೆ.ಸಿ.ಬಿ ಚಂದ್ರು ಹಾಗೂ ಇತರೆ ಸಮಾಜದ ಬಂಧುಗಳು ಭಾಗವಹಿಸಿದ್ದರು.
