ಕೆ.ಆರ್.ಪೇಟೆ: ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ(ರಿ.) ದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ ಎಸ್ ಚಂದ್ರು ಅವರನ್ನು ಸಂಘದ ಹಿರಿಯ ಸಲಹೆಗಾರರಾದ ಬಳ್ಳೇಕೆರೆ ಮಂಜುನಾಥ್,ಹರಿಚರಣ ತಿಲಕ್, ಗೌರವಾಧ್ಯಕ್ಷ ಕೆ.ಆರ್ ನೀಲಕಂಠ,ಕಾರ್ಯಾಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್ ಅಭಿನಂದಿಸಿದರು.
ಬಳಿಕ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕೆ.ಆರ್ ನೀಲಕಂಠ ಮಾತನಾಡಿ. ಸಮಾಜದಲ್ಲಿ ಪತ್ರಕರ್ತರಿಗೆ ಅತಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಶಾಸಕಾಂಗ ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗ ಮಾದ್ಯಮ ಅಂಗವಾಗಿ ಕೆಲಸವನ್ನು ಪ್ರಾಮಾಣಿಕವಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬರುತ್ತಾ ಇದೆ.ಪತ್ರಕರ್ತರು ಯಾವುದೇ ಒತ್ತಡಕ್ಕೆ ಮಣಿಯದೇ ಪಾರದರ್ಶಕವಾಗಿ ಸಮಾಜದಲ್ಲಿ ನೊಂದ,ಬಡವರ, ರೈತರ, ಮಹಿಳೆಯರ ಪರವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.

ನೂತನ ಸಂಘದ ಉಪಾಧ್ಯಕ್ಷ ವೆಂಕಟರಾಮು, ಪ್ರಧಾನ ಕಾರ್ಯದರ್ಶಿ ಗಂಜೀಗೆರೆ ಮಹೇಶ್, ಖಜಾಂಚಿ ಎಂ.ಆರ್ ದಿನೇಶ್,ಕಾನೂನು ಸಲಹೆಗಾರ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕಾಮನಹಳ್ಳಿ ಕೆ.ಪಿ ಮಂಜುನಾಥ್,ಕಾರ್ಯಕಾರಿ ಮಂಡಳಿ ಸದಸ್ಯರಾದ ಹೆಚ್.ಬಿ ಮಂಜುನಾಥ್,ಮನು ಮಾಕವಳ್ಳಿ,ದೊಡ್ಡಹಾರಹಳ್ಳಿ ಮಲ್ಲೇಶ್,ಸಹ ಸದಸ್ಯರಾದ ರಘು ಹೊಸಹೊಳಲು, ಸಯ್ಯದ್ ಖಲೀಲ್ ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
