ಕೆ ಆರ್ ಪೇಟೆ – ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಗ್ರಾಮದಲ್ಲಿ ಶ್ರೀ ಕೋಡಿಯಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ ಏಪ್ರಿಲ್ 29 ಮಂಗಳವಾರದಿಂದ ಮೇ 2 ಗುರುವಾರದವರೆಗೆ ಮೂರು ದಿನಗಳು ನೆಡೆಯುವ ಹಲವಾರು ಸಾಂಸ್ಕ ತಿಕ ಕಾರ್ಯಕ್ರಮಗಳೊಂದಿಗೆ ನೆಡೆಯಲಿದೆ ಎಂದು ಗ್ರಾಮ ಪಂಚಾಯತಿ ಸದಸ್ಯಎನ್ ರಮೇಶ್ ತಿಳಿಸಿದರು.
ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 29 ನೇ ಮಂಗಳವಾರ ಅಮ್ಮನವರನ್ನು ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿ ಹೊಳೆಯಿಂದ ಹೋಮ ಹವನದೊಂದಿಗೆ ಕರೆ ತರುವುದು ನಂತರ ದೇವಿಯ ವಿಗ್ರಹವನ್ನು ರಂಗ ಸ್ಥಳದಲ್ಲಿರಿಸಿ ಈಶ್ವರ ದೇವಾಲಯದಿಂದ ರಂಗಸ್ಥಳದಲ್ಲಿ ಕಳಸ ಪ್ರತಿಷ್ಠಾಪನೆ ರಾತ್ರಿ 8 ಘಂಟೆಯಿಂದ ವಿವಿಧ ಗ್ರಾಮಗಳಿಂದ ಆಗಮಿಸುವ.ಕಲಾ ತಂಡಗಳಿಂದ ರಂಗ ಕುಣಿಯುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ 10000 ಸಾವಿರ ರೂ ಬಹುಮಾನ
ದ್ವಿತೀಯ ಸ್ಥಾನಗಳಿಸಿದ ತಂಡಕ್ಕೆ 6000 ರೂ ಬಹುಮಾನ, ತೃತೀಯ ಬಹುಮಾನ 4000ಸಾವಿರ, ನಾಲ್ಕನೇ ಸ್ಥಾನ ಗಳಿಸಿದ ತಂಡಕ್ಕೆ 3000 ರೂ, ಐದನೇ ಸ್ಥಾನಗಳಿಸಿದ ತಂಡಕ್ಕೆ 2000 ಸಾವಿರ ರೂ ಬಹುಮಾನ ನೀಡಲಾಗುವುದು ನೊಂದಾಯಿಸುವ ಪ್ರತಿತಂಡಕ್ಕೆ ತಲಾ 1000 ರೂಗಳನ್ನು ಸಮಾಧಾನಕರ ಬಹುಮಾನ ನೀಡಲಾಗುವುದು ರಂಗ ಕುಣಿತ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ತಮ್ಮ ಹೆಸರನ್ನು ನೊಂದಾಯಿಸಬೇಕು ಮೊದಲು ನೊಂದಾಯಿಸಿದವರಿಗೆ ಮೊದಲು ರಂಗ ಕುಣಿಯುವ ಅವಕಾಶ ನೀಡಲಾಗುವುದು ಎಂದರು.
ಏ.30 ಬುಧವಾರ ಹುಣಸೂರು ಗುಡ್ಡರಿಂದ ದೇವಿಯನ್ನು ಓಲೈಸುವುದು ಮಡೆ,ಸಿಡಿಮದ್ದುಗುಂಡುಗಳು,ಬಾಯಿಬೀಗ,ಕನ್ನಾಂಕಾಡಿ,ಮೇ 1 ಗುರುವಾರದಂದು ಓಕಳಿ,ಜಾತ್ರ ಮಹೋತ್ಸವ ಹಾಗೂ ದೇವರುಗಳನ್ನು ಗ್ರಾಮದ ರಾಜಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಗ್ರಾ,ಪಂ ಸದಸ್ಯ ಎನ್ ರಮೇಶ್, ಈಶ ಪಾಪೇಗೌಡ,ನಾಗರಾಜು,ಕೃಷ್ಣೇಗೌಡ,ಕಮಲಮ್ಮ ಉಪಸ್ಥಿತರಿದ್ದರು.
ರಂಗಕುಣಿತಸ್ಪರ್ಧೆ ಗೆ ಭಾಗವಹಿಸುವವರು ಕೆಳಕಂಡ ಆಯೋಜಕರನ್ನು ಸಂಪರ್ಕಿಸಿ ನೊಂದಾಯಿಸುವುದು:-
ಎಸ್ಡಿ ಸತೀಶ್ 9901242619, ಶೇಖರ್ 9353221744, ರಮೇಶ್ 9481302851, ರಮೇಶ್ ಎನ್ ಗ್ರಾ,ಪಂ ಸದಸ್ಯರು 9743998733 , ಈಶ 97438 74505 , ಮನು ಸೋಸೈಟಿ ನಿರ್ದೇಶಕ 77607 74246, ಕೃಷ್ಣ ಟ್ರಾವೆಲ್ ಗಿರೀಶ್ 8971 667219, ರಂಗ ಕುಣಿತ ಸ್ಪರ್ಧೆಯ ಹೆಚ್ಚಿನ ಮಾಹಿತಿಗೆ- ಗೋವಿಂದರಾಜು ಶ್ಯಾರಹಳ್ಳಿ ಪತ್ರಕರ್ತರು 9980464754
– ಮನು ಮಾಕವಳ್ಳಿ ಕೆ.ಆರ್ ಪೇಟೆ
