ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿ ವಿಠಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ವಿ.ಡಿ ಹರೀಶ್, ಉಪಾಧ್ಯಕ್ಷರಾಗಿ ದೊದ್ದನಕಟ್ಟೆ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಎಂ.ಡಿ.ಸಿ.ಸಿ ಮಾಜಿ ಅಧ್ಯಕ್ಷ ವಿ.ಡಿ ಹರೀಶ್ ಹಾಗೂ ಉಪಾಧ್ಯಕ್ಷ ಸ್ಥಾನ ಬಯಸಿ ದೊದ್ದನಕಟ್ಟೆ ಸುರೇಶ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದ ಸಿ.ಡಿ.ಓ ಭರತ್ ಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.ಸಹ ಚುನಾವಣಾಧಿಕಾರಿ ಸಂಘದ ಕಾರ್ಯದರ್ಶಿ ಪ್ರಶಾಂತ್ ಎಂ.ಆರ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ವಿ.ಡಿ ಹರೀಶ್ ಮಾತನಾಡಿ ಜಿಲ್ಲಾ ಸಹಕಾರ ಸಂಘದಲ್ಲಿ ನನಗೆ ಸಿಕ್ಕ ಉನ್ನತ ಜವಾಬ್ದಾರಿ ಸ್ಥಾನವನ್ನು ಪಕ್ಷ ಭೇದ ಮರೆತು ಸಮರ್ಪಕವಾಗಿ ನಿಭಾಯಿಸಿದನ್ನು ಪರಿಗಣಿಸಿದ ನಮ್ಮ ಮತದಾರರು ಚುನಾವಣೆಯಲ್ಲಿ ನಮ್ಮ ತಂಡ ಅಬೂತಪೂರ್ವ ಗೆಲುವು ಸಾಕ್ಷಿಯಾಗಿದೆ. ಹಾಗೆ ನಮ್ಮ ತಂದೆ ವಿ.ಡಿ ದೇವೇಗೌಡರ ಶ್ರೀರಕ್ಷೆ, ನಮ್ಮ ಸೊಸೈಟಿ ವ್ಯಾಪ್ತಿಯ ರೈತ ಮತದಾರರ ಆಶೀರ್ವಾದಿಂದ ಮೂರನೇ ಸತತ ಬಾರಿ ರೈತರ ಸೇವೆ ಮಾಡಲು ಅವಿರೋಧವಾಗಿ ಅಧ್ಯಕ್ಷರಾಗಲು ಅವಕಾಶ ಮಾಡಿಕೊಟ್ಟಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಸಹಕಾರ ನೀಡಿದ ನಿರ್ದೇಶಕರು ಹಾಗೂ ಸದಸ್ಯರ ಸಹಕಾರ ಹಿರಿಯರ ಸಹಕಾರ ಪಡೆದು ಸಂಘದ ವ್ಯಾಪ್ತಿಯ ಪ್ರತಿ ಗ್ರಾಮಗಳ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ,ಸಾಲ ಸೌಲಭ್ಯ ಒದಗಿಸುವ ಮೂಲಕ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯಮಾಲೆ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾಸ್ಟರ್ ಶಿವಣ್ಣ, ವಿ.ಡಿ ಮೋಹನ್,ಶೈಲೆಂದ್ರ, ಡಿ.ಸಿ ನಾರಾಯಣ, ಡಿ.ಪಿ ಕಿರಣ್, ವಿ.ಸಿ ಗೋವಿಂದೇಗೌಡ,ವಿ.ಸಿ ವೆಂಕಟೇಶ್,ಪಟೇಲ್ ವಿ.ಡಿ ಶಂಕರ್,ಸೊಸೈಟಿ ಪ್ರಕಾಶ್, ಗ್ರಾ.ಪಂ ಸದಸ್ಯರಾದ ಹರೀಶ್,ರಾಜಶೇಖರ್, ಶಿವಶಂಕರೇಗೌಡ, ಜವರಪ್ಪ ಯೋಗೇಶ್, ಕೂಡಲಕುಪ್ಪೆ ಪಾಪೇಗೌಡ,ಲೋಕಿ, ವಿ.ಡಿ ಜಗದೀಶ್,ಸೊಸೈಟಿ ಪ್ರಶಾಂತ್,ಎ.ಪಿ ವಾಸು, ಪಲ್ಲವಿ ಬಿ.ಎಸ್ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
