????????????????????????????????????????????????????????????
ಶಿವರಾಮ ಕಾರಂತ
~~~~~~~~~
1. ಶಿವರಾಮ ಕಾರಂತರ ಜನ್ಮಸ್ಥಳ ಯಾವುದು?
1) ಕೋಟ. 2) ಸಾಲಿಗ್ರಾಮ. 3) ಉಡುಪಿ
2. ಶಿವರಾಮ ಕಾರಂತರ ಜನ್ಮ ದಿನಾಂಕ ಯಾವುದು?
1) 30 ಅಕ್ಟೋಬರ್ 1902 2)20 ಅಕ್ಟೋಬರ್ 1902 3)10 ಅಕ್ಟೋಬರ್ 1902
3. ಶಿವರಾಮ ಕಾರಂತರ ತಂದೆಯ ಹೆಸರೇನು?
1) ಶೇಷ ಕಾರಂತ. 2) ರಾಮ ಕಾರಂತ. 3)ಅನಂತರಾಜು ಕಾರಂತ
4. ಶಿವರಾಮ ಕಾರಂತರ ತಾಯಿಯ ಹೆಸರೇನು?
1) ಅನುಸೂಯ ಕಾರಂತ. 2) ಲಕ್ಷ್ಮೀ ಕಾರಂತ. 3)ಸುಮತಿ ಕಾರಂತ
5. ಶಿವರಾಮ ಕಾರಂತರ ಮೊದಲ ಶಾಲಾ ಗುರುಗಳು ಯಾರು?
1) ತಿರುಮಲಾಚಾರ್ಯರು. 2) ಕಾಳಿಂಗರಾಯರು. 3)ರಂಗರಾಯರು
6. ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ ಯಾವುದು?
1) ಮೂಕಜ್ಜಿಯ ಕನಸುಗಳು. 2) ಚೋಮನದುಡಿ. 3)ಬೆಟ್ಟದ ಜೀವ
7. ಶಿವರಾಮ ಕಾರಂತರನ್ನು “ಕಡಲತೀರದ ___” ಎಂದು ಕರೆಯುತ್ತಾರೆ. ಈ ಸಾಲಿನಲ್ಲಿ ಬಿಟ್ಟ ಪದ ಯಾವುದು?
1) ಪರಶುರಾಮ. 2) ಭಾರ್ಗವ. 3)ವಿಶ್ವಾಮಿತ್ರ
8. ನಟ ಶಿವರಾಜ್ ಕುಮಾರ್ ಅಭಿನಯದಲ್ಲಿ ತೆರೆಕಂಡ ಶಿವರಾಮ ಕಾರಂತರ ಕಾದಂಬರಿ ಯಾವುದು?
1) ಮೂಕಜ್ಜಿಯ ಕನಸುಗಳು. 2) ಕುಡಿಯರ ಕೂಸು. 3)ಚಿಗುರಿದ ಕನಸು
9. ಶಿವರಾಮ ಕಾರಂತರ “ಹುಚ್ಚು ಮನಸ್ಸಿನ ಹತ್ತು ಮುಖಗಳು” ಈ ಪ್ರಕಾರದ ಸಾಹಿತ್ಯ ಕೃತಿ ಯಾವುದು?
1) ಆತ್ಮಕಥನ. 2) ಪ್ರವಾಸ ಕಥನ. 3)ಕಾದಂಬರಿ
10. ಶಿವರಾಮ ಕಾರಂತರು ಮಕ್ಕಳ ಪ್ರತಿಭೆಯನ್ನು ಪೋಷಿಸಲು ಸ್ಥಾಪಿಸಿದ ಶೈಕ್ಷಣಿಕ ಕೇಂದ್ರ ಯಾವುದು?
1)ನಂದನವನ. 2) ಉದ್ಯಾನವನ. 3)ಬಾಲವನ
11. ಶಿವರಾಮ ಕಾರಂತರು ತಾವೇ ನಟಿಸಿ, ನಿರ್ಮಿಸಿ ನಿರ್ದೇಶಿಸಿದ ಮೂಕಿ ಚಿತ್ರಯಾವುದು?
1) ಭೂತ ರಾಜ್ಯ. 2) ಮಕ್ಕಳ ರಾಜ್ಯ. 3)ಒಂಟಿಧ್ವನಿ
12. ಶಿವರಾಮ ಕಾರಂತರಿಗೆ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದವರು ಯಾರು?
1) ವೆಂಕಟರಮಣ. 2) ಚನ್ನಕೇಶವರಾಯ. 3)ಮಳಲಿ ಸುಬ್ಬರಾಯರು
13. ಇವುಗಳಲ್ಲಿ ಶಿವರಾಮ ಕಾರಂತರ ಪ್ರವಾಸ ಕಥನ ಯಾವುದು?
1) ತೆರೆಯ ಮರೆಯಲ್ಲಿ. 2) ಅಪೂರ್ವ ಪಶ್ಚಿಮ. 3)ಬೌದ್ಧ ಯಾತ್ರಾ
14. ಇವುಗಳಲ್ಲಿ ಶಿವರಾಮ ಕಾರಂತರ ಮಕ್ಕಳ ಕೃತಿ ಯಾವುದು?
1) ಪಾತಾಳಕ್ಕೆ ಪಯಣ. 2) ಪ್ರಾಣಿ ಪ್ರಪಂಚ. 3)ಮಂಗನ ಮದುವೆ
15. ಶಿವರಾಮ ಕಾರಂತರು ವಿಧಿವಶರಾದ ದಿನಾಂಕ ಯಾವುದು?
1) 09 ಫೆಬ್ರವರಿ 1997 2) 09 ಡಿಸೆಂಬರ್ 1997 3)09 ಜನವರಿ 1997
~~~~~~~~~~
★ಉತ್ತರಗಳು:-
1) ಸಾಲಿಗ್ರಾಮ 2) 10 ಅಕ್ಟೋಬರ್ -1902 3) ಶೇಷ ಕಾರಂತ 4) ಲಕ್ಷ್ಮೀ ಕಾರಂತ 5) ಗಂಗರಾಯರು 6)ಮೂಕಜ್ಜಿಯ ಕನಸುಗಳು 7) ಭಾರ್ಗವ 8) ಚಿಗುರಿದ ಕನಸು 9) ಆತ್ಮಕಥನ 10) ಬಾಲವನ 11) ಭೂತರಾಜ್ಯ 12) ಮಳಲಿ ಸುಬ್ಬರಾಯರು 13) ಅಪೂರ್ವ ಪಶ್ಚಿಮ 14) ಮಂಗನ ಮದುವೆ 15) 9 ಡಿಸೆಂಬರ್ 1997
***
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಕನ್ನಡ ಕವಿ ಪರಿಚಯ ಮಾಲಿಕೆ […]