ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಮಂಜುಳ ಸತೀಶ್, ಉಪಾಧ್ಯಕ್ಷರಾಗಿ ಗೀತಾ ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾದರು .
ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನ ಬಯಸಿ ಮಂಜುಳ ಸತೀಶ್,ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಶಿವಕುಮಾರ್ ಹೊರತುಪಡಿಸಿ ಉಳಿದ ಯಾವ ಸಂಘದ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಹಿರಿಯ ಮುಖಂಡ ಎ.ಟಿ ರಾಮೇಗೌಡ ಸಂಘದ ನಿರ್ದೇಶಕರ ಸ್ಥಾನಕ್ಕೆ ಪ್ರತಿಷ್ಠೆ ಚುನಾವಣೆಯಾಗಿ ನಡೆದರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಮ್ಮ ಶಾಸಕರಾದ ಹೆಚ್.ಟಿ ಮಂಜು ಅವರ ಮಾರ್ಗದರ್ಶನದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲು ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಅದರಂತೆ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು.ನೂತನ ಆಡಳಿತ ಮಂಡಳಿಯವರು ಸಂಘದ ಮತ್ತು ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ,ಎಲ್ಲಾ ಸದಸ್ಯರಿಗೆ ಯಶಸ್ವಿನಿ ಯೋಜನೆಯನ್ನು ಮಾಡಿಸಿ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಅರಿವು ಮೂಡಿಸಿಬೇಕು ಪ್ರತಿ ರೈತರು ಗುಣಮಟ್ಟದ ಹಾಲು ಪೂರೈಸಿ ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ನೂತನ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಸಲಹೆ ನೀಡಿದರು.

ಸಂಘದ ನೂತನ ಅಧ್ಯಕ್ಷೆ ಮಂಜುಳ ಸತೀಶ್ ಮಾತನಾಡಿ, ಸಂಘದ ನಮ್ಮ ಜೆಡಿಎಸ್ ಬೆಂಬಲಿತ ಜೆಡಿಎಸ್ ನಿರ್ದೇಶಕರ ವಿಶ್ವಾಸ ಪಡೆದು ಶಾಸಕರಾದ ಹೆಚ್.ಟಿ ಮಂಜು ಅವರ ಮಾರ್ಗದರ್ಶನದಲ್ಲಿ ಜವಾಬ್ದಾರಿತನವಾದ ಅಧ್ಯಕ್ಷ ಸ್ಥಾನಕ್ಕೆ ಅಲಂಕರಿಸಿದ್ದೇನೆ ಅದಕ್ಕೆ ಚುತ್ತಿ ಬಾರದಂತೆ ಪ್ರಾಮಾಣಿಕವಾಗಿ ಸಂಘದ ಸಮಗ್ರ ಅಭಿವೃದ್ಧಿಗೆ ಹಾಗೂ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಲು ಶ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯಮಾಲೆ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಗೀತಾ ಶಿವಕುಮಾರ್,ನಿರ್ದೇಶಕರಾದ ಶೋಭಾ ಶಶಿಧರ್,ರಾಧ ಸತೀಶ್, ತಾಯಮ್ಮ ಉದಯ ಕುಮಾರ್, ಪಾರ್ವತಿ ಪ್ರಭಾಕರ್, ವಸಂತ ಪುಟ್ಟೇಗೌಡ,ಪವಿತ್ರ ನಂದೀಶ್,ಗ್ರಾಮದ ಹಿರಿಯ ಮುಖಂಡರಾದ ಎ.ಜೆ ನಾಗರಾಜೇಗೌಡ, ಅಂಚಿ ಸುರೇಶ್, ಕಾಂತರಜೆಗೌಡ, ಎ. ಸಿ ಕುಮಾರ್,ವೆಂಕಟೇಶ್, ಜಗದೀಶ್, ಎ.ಎಸ್ ರಮೇಶ್,ನಾಗಶೇಟ್ಟಿ, ಹೇಮತ್ ಕುಮಾರ್, ಜಯಶೀಲಾ, ಬಸವರಾಜ್, ನವೀನ್ ಕುಮಾರ್, ಅಶ್ವಥ್, ಎ.ಎಲ್ ರವಿಕುಮಾರ್, ಜವರಶೆಟ್ಟಿ,ರಾಜಕುಮಾರ, ಜ್ಞಾನೇದ್ರ, ಪಾರ್ಥಸಾರಥಿ, ಎ.ವಿ ಸೊಮಶೇಖರ್,ಹರೀಶ್, ವೆಂಕಟೇಶ, ಸೇರಿದಂತೆ ಉಪಸ್ಥಿತರಿದ್ದರು.
– ಮನು ಮಾಕವಳ್ಳಿ ಕೆ ಆರ್ ಪೇಟೆ

[…] […]