ಕೆ.ಆರ್.ಪೇಟೆ: ತಾಲೂಕಿನ ಹೇಮಗಿರಿ ಸಮೀಪ ಬಂಡಿಹೊಳೆ ರಸ್ತೆಯಲ್ಲಿದ್ದ ಸಾವಿರಾರು ಬೆಲೆ ಬಾಳುವ ಎರಡು ಮರಗಳ ಬುಡಕ್ಕೆ ಕಿಡಿಗೇಡಿಗಳ ಬೆಂಕಿಗೆ ಓತ್ತಿ ಉರಿಯುತ್ತಿದ್ದ ಮರ ಕಂಡು ಬಂಡಿಹೊಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಡ್ಡರಹಳ್ಳಿ ಶಿವಕುಮಾರ್ ಸ್ಥಳೀಯ ಅಗ್ನಿಶಾಮಕಕ್ಕೆ ಮಾಹಿತಿ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದರು.
ಬಳಿಕ ಮಾತನಾಡಿ ಬಂಡಿಹೊಳೆ ಪಿಡಿಓ ವಡ್ಡರಹಳ್ಳಿ ಶಿವಕುಮಾರ್ ಎಂದಿನಂತೆ ಪ್ರತಿನಿತ್ಯವೂ ಈ ರಸ್ತೆಯಲ್ಲಿ ಕಾರ್ಯನಿರ್ವಹಿಸಲು ತೆರಳುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಅಂದರೆ ಹೇಮಗಿರಿ ಸಮೀಪದಲ್ಲಿರುವ ಸಾವಿರರೂ ಬೆಳೆ ಬಾಳು ಆಲದ ಮರಗಳ ಬುಡದಲ್ಲಿ ಬೆಂಕಿ ಕಂಡು ತಕ್ಷಣ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿ ತಕ್ಷಣಕ್ಕೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಯಾರೇ ಆಗಲಿ ಇಂತಹ ಕೆಲಸ ಮಾಡುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು. ಅಭಿಪ್ರಾಯಪಟ್ಟು ಅರ್ಧ ಸುಟ್ಟು ಕರುಕಲಾದ ಮರವನ್ನ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ತಿಳಿಸಿ ತೆರವುಗೊಳಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಪ್ರದೀಪ್, ಚಂದ್ರಶೇಖರ್, ಚಂದನ್ ಕುಮಾರ್,ರಘು ಕುಪ್ಪಹಳ್ಳಿ, ಸೇರಿದಂತೆ ಉಪಸ್ಥಿತರಿದ್ದರು.
– ಮನು ಮಾಕವಳ್ಳಿ ಕೆ. ಆರ್ ಪೇಟೆ
