ಕೆ.ಆರ್. ಪೇಟೆ (ಮಂಡ್ಯ ಜಿಲ್ಲೆ), ಮೇ 5: ರಾಜ್ಯದಲ್ಲಿ ಸೋಮವಾರ ಸಂಜೆ ಏಕಾಏಕಿ ಸುರಿದ ಬಾರಿ ಗಾಳಿ ಮಳೆಗೆ ಮೈಸೂರು – ಅರಸಿಕೆರೆ ರಾಜ್ಯ ಹೆದ್ದಾರಿಯಲ್ಲಿ ಭಾರಿ ಅವಾಂತರ ಉಂಟಾಯಿತು. ಕೆ.ಆರ್.ಪೇಟೆ ತಾಲೂಕಿನ ಹಾದನೂರು ಗ್ರಾಮದ ಬಳಿ, ಬೃಹತ್ ಮರದೊಂದು ಹೆದ್ದಾರಿಗೆ ಉರುಳಿದ ಪರಿಣಾಮ, ವಾಹನ ಸಂಚಾರಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ಅಡ್ಡಿಪಡಿತು.
ಬಿರುಗಾಳಿ ಸಹಿತ ಮಳೆಗೆ ಮರ ಹಿರಿಯುಳಿ ಬಿದ್ದು, ರಸ್ತೆ ಸಂಪೂರ್ಣ ತಡೆಗಟ್ಟಲಾಗಿದ್ದು, ವಾಹನ ಸವಾರರು ದೀರ್ಘ ಕಾಲ ರಸ್ತೆ ಮಧ್ಯೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೆಲ ಕಾಲ ನಿರಂತರವಾಗಿ ವಾಹನಗಳ ಸಾಲು ಉಂಟಾದದ್ದು ಕಂಡುಬಂದಿತು.

ಘಟನೆಯ ತಕ್ಷಣವೇ ಸ್ಥಳೀಯರು ಚುರುಕು ತೋರಿಸಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಲು ಸಹಾಯ ಮಾಡಿದರು. ಈ ವೇಳೆ ಯಾವುದೇ ಮಾನವೀಯ ಹಾನಿ ವರದಿಯಾಗಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.
ತುರ್ತು ಪ್ರತಿಕ್ರಿಯೆಯಿಂದ ತೆರವು ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿದ್ದಂತೆಯೇ ವಾಹನ ಸಂಚಾರ ಪುನಃ ಪ್ರಾರಂಭವಾಯಿತು. ಸಾರ್ವಜನಿಕರು ಸಹಕಾರ ನೀಡಿದ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಪೊಲೀಸರಿಂದ ಕೃತಜ್ಞತೆ ವ್ಯಕ್ತವಾಯಿತು.
– ಮನು, ಕೆ.ಆರ್.ಪೇಟೆ

[…] […]