ಟಿ.ನರಸೀಪುರ : ಪ್ರಸಕ್ತ ಮುಂಗಾರು ಮಳೆ ಆರಂಭವಾಗಿದ್ದು ಕೃಷಿ ಚಟುವಟಿಕೆ ಕೈಗೊಳ್ಳಬೇಕಿರುವುದರಿಂದ ಸಿವಿಲ್ ಸ್ಕೋರ್ ಪರಿಗಣಿಸದೆ ಬ್ಯಾಂಕಿನವರು ಬಡ್ಡಿ ಕಟ್ಟಿಸಿಕೊಂಡು ಮರು ಸಾಲ ನೀಡುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಕೆನರಾ ಬ್ಯಾಂಕ್ ಮುಂದೆ ಪ್ರತಿಭಟನೆ ನಡಸಿದರು.
ಪಟ್ಟಣದ ಕೆನರಾ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ ರೈತರು ದಿಕ್ಕಾರ,ಘೋಷಣೆಗಳನ್ನು ಕೂಗಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಕಾರ್ಯದ್ಯಕ್ಷ ಕಿರಗಸೂರು ಶಂಕರ್ ಬ್ಯಾಂಕ್ ಮ್ಯಾನೇಜರ್ ಜೊತೆ ಮಾತನಾಡಿ ಈ ಹಿಂದೆ ತಮ್ಮ ಬ್ಯಾಂಕಿನಲ್ಲಿ ರೈತರು ತಮ್ಮ ಚಿನ್ನಾಭರಣಗಳನ್ನು ಅಡವಿಟ್ಚು ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯುತ್ತಿದ್ದರು. ಪುನಃ ಬೇಕೆಂದಾಗ ಬಡ್ಡಿ ಕಟ್ಟಿ ನವೀಕರಿಸಿ ಅದರ ಮೇಲೆಯೇ ಸಾಲ ಪಡೆಯುತ್ತಿದ್ದು ಈಗ ಏಕಾಏಕಿ ಲಿಬಿಲ್ ಸ್ಕೋರ್ ಕೇಳುತ್ತಿರುವುದಾದರು ಏಕೆ ಎಂದು ಪ್ರಶ್ನಿಸಿದರು.
ರೈತರಿಗೆ ಕೃಷಿ ಆದಾಯ ಬಿಟ್ಚು ಬೇರೆ ಯಾವ ಆದಾಯವೂ ಬರುವುದಿಲ್ಲ.ಕೆಲವು ಸಂದರ್ಭಗಳಲ್ಲಿ ಅತಿವೃಷ್ಠಿ,ಅನಾವೃಷ್ಠಿ,ಬರಗಾಲದಿಂದ ಕೈಗೆ ಬಂಗ ತುತ್ತು ಬಾಯಿಗೆ ಬಂದಿಲ್ಲವಂತ್ತಾಗುತ್ತಿದೆ.ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಕೃಷಿ ಚಟುವಟಿಕೆಗಳನ್ನು ನಜೆಸಿ ಗೇಶದ ಜನತೆಗೆ ಅನ್ನ ಹಾಕುವ ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬಂಗಾರದ ಮೇಲೆ ನೀಡಿರುವ ಸಾಲದ ಬಡ್ಡಿ ಕಟ್ಟಿಸಿಕೊಂಡು ಮರು ಲಾಲ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅದ್ಯಕ್ಷ ಕುರುಬೂರು ಸಿದ್ದೇಶ್,ಮುಡುಕುನಪುರ ರೂಪ,ಕುರುಬೂರು ಎಂ.ಪ್ರದೀಪ್,ಕರೋಹಟ್ಟಿ ರಾಜಾಬುದ್ದಿ,ಬೆನಕನಹಳ್ಳಿ ಪರಶಿವಮೂರ್ತಿ,ನಿಂಗರಾಜು,ಯೋಗೇಶ್,ಸತೀಶ್,ಪ್ರಕಾಶ್,ಅಪ್ಪಣ್ಣ,ಶಿವಪ್ರಕಾಶ್,ರವಿ,ಪ್ರಕಾಶ್,ಬಸವಣ್ಣ,ಗುರುಮಲ್ಲಪ್ಪ,ಬಸವಯ್ಯ,ನಾಗರಾಜು,ಪ್ರದೀಪ್,ಮಂಟೇಸ್ವಾಮಿ ಸೇರಿದಂತೆ ಇತರೆ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
-ಎಂ. ನಾಗೇಂದ್ರ ಕುಮಾರ್ ವರದಿಗಾರರು
