ಚನ್ನರಾಯಪಟ್ಟಣ: ನವೋದಯ ವಿದ್ಯಾ ಸಂಸ್ಥೆಗೆ ನೂತನವಾಗಿ ಅಧ್ಯಕ್ಷರಾಗಿ ಸಿ ಜೆ ಮಂಜುನಾಥ್ ( ಮುರಾರ್ಜಿ ಮಂಜಣ್ಣ)ರವರು ಅವಿರೋಧವಾಗಿ ಆಯ್ಕೆಗೊಂಡರು.
ಪಟ್ಟಣದ ಸ್ವಾತಂತ್ರ್ಯ ಪೂರ್ವ ವಿದ್ಯಾಸಂಸ್ಥೆ ಎಂಬ ಕೀರ್ತಿ ಹೊಂದಿರುವ ನವೋದಯ ವಿದ್ಯಾ ಮಂದಿರಕ್ಕೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನಿಕಟ ಪೂರ್ವ ಅಧ್ಯಕ್ಷರಾದ ರಂಗೇಗೌಡ ರವರ ರಾಜಿ ರಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ದಿನ ಚುನಾವಣೆ ನಿಗದಿಯಾಗಿದ್ದು. ಮುರರ್ಜಿ ಮಂಜಣ್ಣ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಸಿ ಜೆ ಮಂಜುನಾಥ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಕಾಳೆನಹಳ್ಳಿ ಆನಂದ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿ ಮಾತನಾಡಿ ನೂತನ ಅಧ್ಯಕ್ಷರು ಎಲ್ಲಾ ನಿರ್ದೇಶಕರ ಸಲಹೆ ಸಹಕಾರ ಪಡೆದುಕೊಂಡು ಮಾದರಿ ವಿದ್ಯಾ ಸಂಸ್ ನವೋದಯ ವಿದ್ಯಾ ಸಂಸ್ಥೆಯ ಗತವೈಭವವನ್ನು ಮರಳುವಂತೆ ಮಾಡಲಿ ಎಂದು ಶುಭ ಹಾರೈಸಿದರು. ನೂತನ ಅಧ್ಯಕ್ಷರಾದ ಮುರಾರ್ಜಿ ಮಂಜಣ್ಣ ಮಾತನಾಡಿ ನವೋದಯ ವಿದ್ಯಾ ಸಂಸ್ಥೆಯ ಅಭಿವೃದ್ಧಿಗೆ ಕಾಯ ವಾಚ ಮನಸ ದುಡಿಯುತ್ತೇನೆ, ಸಂಸ್ಥೆಯ ಎಲ್ಲಾ ಸದಸ್ಯರ ಸಲಹೆ ಸಹಕಾರ ಪಡೆದು ನವೋದಯ ವಿದ್ಯಾ ಸಂಸ್ಥೆಯ ನವವೈಭವವನ್ನೂ ಸೃಷ್ಟಿ ಮಾಡಲು ಶ್ರಮಿಸುತ್ತೇನೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ನವೋದಯ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಸಿ ಜೆ ಮಂಜುನಾಥ್, ಶೇಷಶಯನ, ರಂಗೇಗೌಡ,ಆನಂದ್ ಕಾಳೆನಹಳ್ಳಿ, ಶಿವಕುಮಾರ್, ಶರತ್, ಸಂತೋಷ, ಜಲೇಂದ್ರ,ಗಿರೀಶ್,ಆದರ್ಶ, ಕುಮಾರಸ್ವಾಮಿ, ರಾಘವೇಂದ್ರ, ಸೇರಿದಂತೆ ಇತರರು ಹಾಜರಿದ್ದರು.
