ಚನ್ನರಾಯಪಟ್ಟಣ: ರಾಜ್ಯ ಸರ್ಕಾರವನ್ನು ಅವ್ಯಾಶ ಶಬ್ದದಿಂದ ನಿಂದಿಸಿದ ತಾಲ್ಲೂಕು ದಂಡಾಧಿಕಾರಿ ನವೀನ್ಕುಮಾರ್ ಅವರನ್ನು ರಾಜ್ಯ ಸರ್ಕಾರ ಗ್ರೇಡ್1 ತಹಸಿಲ್ದಾರ್ ಹುದ್ದೆ ಇಂದ ಹಿಂಪಡೆದಿದೆ ಎಂದು ಸಿಐಟಿಯು ಮುಖಂಡ ಮಂಜುನಾಥ್ ತಿಳಿಸಿದರು.
ಅವರು ಪಟ್ಟಣದ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾಲೂಕು ದಂಡಾಧಿಕಾರಿ ನವೀನ್ಕುಮಾರ್ ರವರ ವಿರುದ್ಧ 13 ದಿನಗಳ ಕಾಲ ನಿರಂತರ ಅಹೋರಾತ್ರಿ ಧರಣಿ ನಡೆಸಿ ತಾಲ್ಲೂಕು ದಂಡಾಧಿಕಾರಿ ಹಠಾವೋ ಚನ್ನರಾಯಪಟ್ಟಣ ತಾಲೂಕು ಜನತೆ ಬಚಾವೋ ಎಂಬ ಹೋರಾಟಕ್ಕೆ ಸರ್ಕಾರ ಮಣಿದು ತಾಲೂಕು ಕಛೇರಿಯಿಂದ ವರ್ಗಾವಣೆ ಮಾಡಿದೆ, ಇತ್ತೀಚೆಗೆ ತಾಲೂಕು ಕಛೇರಿಯಲ್ಲಿ ನಡೆಯುತ್ತಿದ್ದ ದೊಡ್ಡ ಭ್ರಷ್ಟಾಚಾರಕ್ಕೆ ತಾಲೂಕಿನ ಭ್ರಷ್ಟಾಚಾರ ನಿರ್ಮೂಲನ ವೇದಿಕೆ ವತಿಯಿಂದ ಭಾರಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಗೆ ಯಾವುದೇ ಉನ್ನದ ಮಟ್ಟದ ಅಧಿಕಾರಿಗಳಿಂದ ಪ್ರತಿಕ್ರಿಯೆ ದೊರಕಲಿಲ್ಲ. ಆ ಸಲುವಾಗಿ ಮೇ.27ರಂದು ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಯಪಡಿಸಲಾಯಿತು.
ಆ ಸಲುವಾಗಿ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಲಿಖಿತ ರೂಪದಲ್ಲಿ ಮತ್ತು ಆಡಿಯೋ ಒಂದಿಗೆ ರಾಜ್ಯ ಸರ್ಕಾರದ ಸಂಬoಧಪಟ್ಟ ಅಧಿಕಾರಿಗಳು ಮತ್ತು ಸಚಿವರಿಗೆ ದೂರು ಸಲ್ಲಿಸಿದ ಹಿನ್ನಲೆ ತಾಲೂಕು ದಂಡಾಧಿಕಾರಿ ನವೀನ್ಕುಮಾರ್ ಅವರನ್ನು ಶುಕ್ರವಾರ ರಂದು ಗ್ರೇಡ್1 ತಾಲೂಕು ದಂಡಾಧಿಕಾರಿ ಹುದ್ದೆಯಿಂದ ವರ್ಗಾವಣೆಗೊಳಿಸಿರುವ ಆದೇಶ ಪತ್ರವನ್ನು ಹೊರಡಿಸಿದ್ದಾರೆ. ಇದು ತಾಲೂಕಿನ ಜನತೆಗೆ ಸಂತೋಷದ ವಿಚಾರವಾಗಿದೆ.
ಮುಂದೆ ಬರುವ ತಾಲೂಕು ದಂಡಾಧಿಕಾರಿಗಳು ಸರಿಯಾದ ರೀತಿ ಕೆಲಸ ಮಾಡಬೇಕು ಈ ಬಗ್ಗೆ ಸರ್ಕಾರ ಉತ್ತಮ ಅಧಿಕಾರಿಯನ್ನು ನೇಮಿಸಿ ಜನರ ಕೆಲಸ ಮಾಡಲು ಸಹಕರಿಸಬೇಕು ಅದನ್ನು ಬಿಟ್ಟು ಪುನಹ ಭ್ರಷ್ಟಾಚಾರ ನಡೆಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸಿ. ಜಿ. ರವಿ ಮಾತನಾಡಿ ತಾಲೂಕು ಕಛೇರಿಯಲ್ಲಿ ಕಳೆದ 15 ವರ್ಷಗಳಿಂದ ಆಧಾರದ ಅನುಕಂಪದ ಹುದ್ದೆಗೆ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಈ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಯಾವುದೇ ರೀತಿಯ ವಿದ್ಯಾ ಅರ್ಹತೆ ಹೊಂದಿರುವುದಿಲ್ಲ ವಿದ್ಯಾಅರ್ಹತೆ ಹೊಂದಿರುವವರು ಇನ್ನು ಕೆಳ ಮಟ್ಟದ ಹುದ್ದೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ ಆದರೆ ಅಧಿಕಾರದ ಆಸೆಗೆ ಕೆಲ ವ್ಯಕ್ತಿಗಳು ಹಣ ನೀಡಿ ಮತ್ತು ರಾಜಕೀಯ ಬಲವನ್ನು ಉಪಯೋಗಿಸಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ ಇದು ಎಷ್ಟುರಮಟ್ಟಿಗೆ ಸರಿ. ಕೂಡಲೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಇಂತಹ ವ್ಯಕ್ತಿಗಳನ್ನು ಗುರುತಿಸಿ ಅಂತವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಂದ್ರುಉತ್ತೇನಹಳ್ಳಿ, ರಾಮಚಂದ್ರು, ಗುಲಸಿಂದಮಹೇಶ್, ಚಂದ್ರಹಾಸ್, ಶಂಕರ್ಬರಗೂರು, ತೇಜಸ್, ವಾಸುಕಲ್ಕೆರೆ, ಮಂಜೇಗೌಡ ಜೋಗಿಪುರ ಸೇರಿದಂತೆ ಇತರರು ಹಾಜರಿದ್ದರು.
