ಚನ್ನರಾಯಪಟ್ಟಣ:ಶ್ರೀ ಶನೇಶ್ವರ ದೇವರ ವಿಶೇಷ ಪೂಜೆಗೆ ಅಖಿಲ ಕರ್ನಾಟಕ ಮಹಾಸಭಾದ ಮುಖ್ಯಸ್ಥ ಶ್ರೀ ಗೋವಿಂದ ಸ್ವಾಮೀಜಿ ಚಾಲನೆ ನೀಡಿದರು.
ಪಟ್ಟಣದ ಹೊಳೆನರಸೀಪುರ ರಸ್ತೆಯಲ್ಲಿರುವ ಶ್ರೀ ಶನೇಶ್ವರ ದೇವಾಲಯದಲ್ಲಿ ಅಮಾವಾಸ್ಯೆಯ ದಿನದಂದು ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತು. ಈ ಕಾರ್ಯಕ್ರಮವು ಶ್ರೀ ಗೋವಿಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವು ನಡೆಯಿತು. ಶ್ರೀ ಗೋವಿಂದ ಸ್ವಾಮೀಜಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಶನೇಶ್ವರ ದೇವರನ್ನು ಪೂಜೆ ಮಾಡುತ್ತ ಬಂದಿದ್ದೇವೆ, ಶನೇಶ್ವರ ದೇವರ ಪೂಜೆಗೆ ಸರ್ವ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು. ವಿಶೇಷ ಪೂಜೆಯ ನಂತರ ಶ್ರೀ ಶನೇಶ್ವರ ಸ್ವಾಮಿಗಳ ಕುರಿತು ಹರಿಕಥೆ ಕಾರ್ಯಕ್ರಮವನ್ನೂ ದೊಡ್ಡೇರಿ ಸಣ್ಣಪ್ಪನವರು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಶ್ರೀ ಗೋವಿಂದ ಸ್ವಾಮೀಜಿ, ಶ್ರೀ ಶನೇಶ್ವರ ಸ್ವಾಮಿಗಳ ಭಕ್ತರಾದ ಸಣ್ಣಪ್ಪ, ಮಂಜುನಾಥ, ಉಮೇಶ, ಜಯಂತಿ, ದೊಡ್ಡೇರಿ ಕಾವಲು ಮಂಜು ಸೇರಿದಂತೆ ಇತರರು ಹಾಜರಿದ್ದರು.
