ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ಧಿ ಹೊಂದಿರುವ ಶಕ್ತಿ ದೇವತೆ ಕ್ಷೇತ್ರ ಪಾಲಕಿ ಶ್ರೀ ಕಾವಲಮ್ಮ ತಾಯಿಯ ದೇವಾಲಯಕ್ಕೆ ತುಮಕೂರು ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಮತ್ತು ಅಂತರ್ ರಾಜ್ಯಗಳಿಂದ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬರುತ್ತಾರೆ.
ದೇವಾಲಯಕ್ಕೆ ಬರುವ ಭಕ್ತರ ಸಂಚಾರ ಮಾರ್ಗವು ಸುಗಮವಾಗಿ ಇರಲೆಂದು ಸಾಮಾಜಿಕ ಚಿಂತನೆಯುಳ್ಳ ಶ್ರೀ ಅಮ್ಮಾಜಿ ಚಾರಿಟಬಲ್ ಟ್ರಸ್ಟ್ (ರಿ) ನಾ ಪದಾಧಿಕಾರಿಗಳು ದೇವಾಲಯದ ರಸ್ತೆ ಮಾರ್ಗ ಫಲಕವನ್ನು ಬಸವನ ಜಯಂತಿ ಹಬ್ಬದ ದಿನ ಸ್ಥಾಪಿಸಿ ಸಾರ್ವಜನಿಕರ ಅನುಕೂಲಕ್ಕೆ ನೆರವಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬಸವ ಜಯಂತಿ ಆಚರಣೆ
ಶ್ರೀ ಅಮ್ಮಾಜಿ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ಕ್ಷೇತ್ರ ಪಾಲಕಿ ಶ್ರೀ ಕಾವಲಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಾಲಯದ ಆವರಣದಲ್ಲಿರುವ ಬಸವಣ್ಣನ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ತಾಯಿಯ ದರ್ಶನಕ್ಕೆ ಬಂದಂತಹ ಎಲ್ಲ ಭಕ್ತರಿಗೆ ಬಸವ ಜಯಂತಿ ಪ್ರಯುಕ್ತ ಪಾನಕ ಮತ್ತು ಹೆಸರುಬೇಳೆ ವಿತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನಾ ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಶ್ರೀರಂಗಯ್ಯ, ಸುರೇಶ್ ಎನ್ ಎಸ್, ಶಿವಕುಮಾರ್, ಎನ್ ಎಸ್ ಸಿದ್ದೇಶ್, ನರಸಿಂಹರಾಜು ಎನ್ ಎಲ್, ಮಂಜುಸ್ವಾಮಿ ಎಂ ಎನ್, ಕಾಂತರಾಜ್ ಎಂ ಪಿ, ಎಸ್ ವೇದಮೂರ್ತಿ, ಮಧುಪ್ರಸಾದ್ ಯಾದವ್,ಕಾಮರಾಜ್ ಎನ್ ಆರ್,ಅಂಜನಾದ್ರಿ ವೀರಭದ್ರಯ್ಯ, ಇಂದ್ರಕುಮಾರ್, ಶಿವಾನಂದ್, ಉಮೇಶ್ ಆಚಾರ್, ಪುಟ್ಟರಾಜು, ಶ್ರೀನಿವಾಸ್,ಪುಟ್ಟಕಾಮಯ್ಯ ಸೇರಿದಂತೆ ಇತರರು ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
