ಬೇಲೂರು : ತಾಲೂಕಿನ ಬಿಕ್ಕೋಡು ಹೋಬಳಿ ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಚಿಲ್ಲರೆ ಅಂಗಡಿ ಹಾಗೂ ಕೆಲವು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದರಿಂದ ಗ್ರಾಮದ ನೆಮ್ಮದಿ ಹಾಳಾಗುವುದಲ್ಲದೆ ಅನೇಕ ಸಾವು ನೋವುಗಳು ಸಂಭವಿಸಿದ್ದು ಮಧ್ಯ ಮಾರಾಟ ತಡೆಗಟ್ಟಲು ಮಂಗಳವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಕುಶಾವರ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಬಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಧ್ಯ ಮುಕ್ತ ಮಾಡಲು ತೀರ್ಮಾನಿಸಲಾಯಿತು
ಕುಡುಕರ ಹಾವಳಿಯಿಂದ ಕೆಲವು ಗ್ರಾಮಗಳಲ್ಲಿ ರಾತ್ರಿ ವೇಳೆ ಮಹಿಳೆಯರು ಮಕ್ಕಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ದುಡಿಯುವ ಅರ್ಧದಷ್ಟು ಹಣ ಎಣ್ಣೆ ಮಾರುವವರ ಕೈ ಸೇರುತ್ತದೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಡಿವಾಣ ಹಾಕಿ ಗ್ರಾಮದಲ್ಲಿ ಶಾಂತಿ ನೆಮ್ಮದಿಯಿಂದ ಜೀವಿಸಲು ಅವಕಾಶ ಮಾಡಿಕೊಡಬೇಕೆಂದು ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಒಕ್ಕೊರಲಿನಿಂದ ಆಗ್ರಹಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಕೌರಿ ರೇಣುಕುಮಾರ್ ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಯಾವುದೇ ಭಯವಿಲ್ಲದೆ ನಡೆಯುತ್ತಿದೆ ಯುವಕರು ಕುಡಿತಕ್ಕೆ ದಾಸರಾಗಿ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುವುದಲ್ಲದೆ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ ಅಬಕಾರಿ ಅಧಿಕಾರಿಗಳು ಮಾತ್ರ ಅಕ್ರಮ ಮದ್ಯ ಮಾರಾಟಗಾರರು ಯಾರೆಂದು ತಿಳಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು
ಅಕ್ರಮ ಮಾರಾಟಗಾರರ ಬಂಧನಕ್ಕೆ ಒತ್ತಾಯ
ಬೆಳಗ್ಗೆ ಸಂಜೆ ಎನ್ನದೆ ರಾಜ ರೋಷವಾಗಿ ಮಧ್ಯ ಮಾರಾಟ ಈಗಾಗಲೇ ಕುಶಾವರ. ಚೌಡನಹಳ್ಳಿ,ಕೌರಿ ಗ್ರಾಮಗಳಲ್ಲಿ ಮಿತಿಮೀರಿದ್ದು ಚಿಲ್ಲರೆ ಅಂಗಡಿ ನಡೆಸುತ್ತಿರುವವರು ರಾಜಾರೋಷವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಅಥವಾ ಮೌಖಿಕವಾಗಿ ಗ್ರಾಮಸ್ಥರು ದೂರು ನೀಡಿದರೆ ದೂರು ದಾರರ ಹೆಸರನ್ನು ಬಹಿರಂಗಪಡಿಸಿ ಗ್ರಾಮದಲ್ಲಿ ಅಶಾಂತಿ ಉಂಟಾಗಲು ಕಾರಣವಾಗಿದೆ ಕೊಡಲೇ ಅಂಥವರನ್ನು ಬಂಧಿಸಿ ಎಂದು ಸಭೆಯಲ್ಲಿ ಕೆಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು
ಪೋಲೀಸ್ ಇಲಾಖೆ ನಿರ್ಲಕ್ಷ
ರಾತ್ರಿ ವೇಳೆ ಬರುವ ಬೀಟ್ ಸಿಬ್ಬಂದಿಗಳು ಮಧ್ಯ ಮಾರಾಟ ಕಂಡರೂ ಸಹ ಯಾವುದೇ ರೀತಿ ಗಮನ ಹರಿಸದೆ ಗೊತ್ತಿದ್ದರೂ ಗೊತ್ತಿಲ್ಲದ ಹಾಗೆ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಕಾಟಾಚಾರದ ಸೇವೆ ನೀಡುತ್ತಿದ್ದಾರೆ ಮೊದಲು ಅಂತಹ ಸಿಬ್ಬಂದಿಗಳನ್ನು ವರ್ಗಾವಣೆ ಮಾಡದಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು
ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅಬಕಾರಿ ಡಿವೈಎಸ್ಪಿ ರಘು ಈ ಭಾಗದ ಹಳ್ಳಿಗಳಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಮಧ್ಯ ಮಾರಾಟವನ್ನು ತಡೆಗಟ್ಟಲು ಇಲಾಖೆ ಸನ್ನದ್ಧವಾಗಿದ್ದು ಇಂದಿನಿಂದಲೇ ಕಾರ್ಯಚರಣೆ ನಡೆಸಲಿದೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು
ಈ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳಾದ ಪರಮಶಿವಯ್ಯ ಪ್ರಮೀಳಾ ಬೇಲೂರು ಪಿಎಸ್ಐ ಪಾಟೀಲ್ ಪಿಡಿಒ ರಿಹಾನ್ ಪಾಷಾ ಬಿಜೆಪಿ ತಾಲೂಕು ಅಧ್ಯಕ್ಷ ಸಂಜು ಕೌರಿ. ಕೆ ಆರ್ಎಸ್ ಪಕ್ಷದ ಅಧ್ಯಕ್ಷ ಆದೇಶ. ಮಾಜಿ ಗ್ರಾ ಪಂ ಶೇಷಾದ್ರಿ . ಗ್ರಾಮಸ್ಥರಾದ ಕೌಶಿಕ್ ಹರ್ಷವರ್ಧನ್ . ವೀರೇಂದ್ರ. ಲೋಕೇಶ್. ರುದ್ರೇಶ್ .ಕಾವ್ಯ .ವೇದಾ. ಸೇರಿದಂತೆ ಇತರರು ಹಾಜರಿದ್ದರು
