ಹಾಸನ:ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ 12 ಶತಮಾನದ ಶಿವಶರಣರ ಅಶಯದಂತೆ ಜಾತ್ಯತೀತ ತತ್ವದ ನೆಲೆಗಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿ ದೇಶ ಹಾಗೂ ವಿದೇಶಗಳಲ್ಲಿ ಹೆಮ್ಮರವಾಗಿ ಬೆಳೆದಿದೆ. ಇಂತಹ ಶ್ರೀ ಕ್ಷೇತ್ರ ಸುತ್ತೂರು ಮಠ ಮುನ್ನಡೆ ಪಡೆಯುವ ಮೂಲಕ ಈ ನಾಡಿನ ಕಲ್ಯಾಣ ಕಾರ್ಯಕ್ರಮಗಳಿಗೆ ಮೇಲ್ಫಂಕ್ತಿ ಹಾಕಿಕೊಟ್ಡಿದೆ ಎಂದು ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ ಅವರು ಬಣ್ಣಿಸಿದರು.

ಬೆಂಗಳೂರಿನ ಶ್ರೀ ಬಸವೇಶ್ವರ ಸುಜ್ಲಾನ ಕಲ್ಯಾಣ ಮಂಟಪದಲ್ಲಿ ಪ್ರಥಮ ದಿವಸದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಶ್ರೀಗಳು ಅಶಿರ್ವಚನ ನೀಡಿದ ಅವರು ಸುತ್ತೂರು ಮಠವು ಒಂದು ಜಾತಿಗೆ ಸೀಮಿತವಾಗಿದೆ ರಾಜ್ಯ ಹಾಗೂ ವಿದೇಶದಲ್ಲಿನ ನೊಂದವರ ಅಶಾಕಿರಣವಾಗಿದೆ ವಿವಿಧ ಜಾತಿಯ ಬಡವರ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಸಹಕಾರ ನೀಡುವ ಮೂಲಕ ಎಲ್ಲಾ ಸಮುದಾಯದವರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಸಿದ್ದಗಂಗಾ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುತ್ತಿರುವ ಸಮೇಳನದ ಸರ್ವಾಧ್ಯಕ್ಷರು ಗೊ.ರು. ಚನ್ನಬಸಪ್ಪ ಅವರು ಮಾತನಾಡಿ ಶರಣ ಸಾಹಿತ್ಯ ಪರಿಷತ್ತಿನ. 14 ನೇ ಸಂಮೇಳನ ಅಚ್ಚುಕಟ್ಟಾಗಿ ಅಯೋಜಿಸಿದ್ದು ನಾಡಿನ ಎಲ್ಲಾ ಶಿವಶರಣರನ್ನು ಕರೆಸಿ ಇಂತಹ ಕಾರ್ಯಕ್ರಮ ಅಯೋಜಿಸಿರುವುದಕ್ಕೆ ಕಾರ್ಯಕ್ರಮದ ಅಯೋಜಕರಿಗೆ ಅಭಿನಂದನೆ ಸಲ್ಲಿಸಿದ ಅವರು 12 ನೇ ಶತಮಾನದ ಶಿವ ಶರಣರ ತತ್ವಗಳನ್ನು ಶ್ರೀಮಠದ ಸೇವೆ ದಿನದಿಂದ ದಿನಕ್ಕೆ ಇಡೀ ಜಗತ್ತಿಗೆ ಅವರಿಸುತ್ತಿದೆ.
ಶಿವಶರಣರ ಅಶಯದಂತೆ ಜಾತ್ಯತೀತ ತತ್ವದ ನೆಲೆಗಟ್ಟಿನಲ್ಲಿ ಶ್ರೀ ಕ್ಷೇತ್ರ ಸುತ್ತೂರು ಮಠ ಮುನ್ನಡೆ ಪಡೆಯುವ ಮೂಲಕ ಈ ನಾಡಿನ ಕಲ್ಯಾಣ ಕಾರ್ಯಕ್ರಮಗಳಿಗೆ ಮೇಲ್ಫಂಕ್ತಿ ಹಾಕಿಕೊಟ್ಡಿದೆ ಸುತ್ತೂರು ಮಠವು ಒಂದು ಜಾತಿಗೆ ಸೀಮಿತವಾಗಿದೆ ರಾಜ್ಯ ಹಾಗೂ ವಿದೇಶದಲ್ಲಿನ ನೊಂದವರ ಅಶಾಕಿರಣವಾಗಿದೆ ವಿವಿಧ ಜಾತಿಯ ಬಡವರ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಸಹಕಾರ ನೀಡುವ ಮೂಲಕ ಎಲ್ಲಾ ಸಮುದಾಯದವರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಗೊ.ರು ಚನ್ನಬಸಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರಮಹಾಸ್ವಾಮೀಜಿಯವರು, ಶರಣ. ಎಂ ಬಿ ಪಾಟೀಲ್ ಬೃಹತ್ ಉದ್ದೀಮ ಕ್ಯೆಗಾರಿಕಾ ಸಚಿವರು, ಶಾಸಕರಾದ ಕೃಷ್ಣಪ್ಪ, ಮಾಜಿ ಪೌರರಾದ ಗಂಗಾಭಿಕೆ ಮಲ್ಲಿಕಾರ್ಜುನ. ಶರಣ ಸಿ ಎಸ್ ಪುಟ್ಟರಾಜು ಮಾಜಿ ಉಪ ಪೌರರು, ಸೋಮಶೇಖರ್, ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್, ಹಂಪಯ್ಯ ಖಜಾಂಚಿ, ನಾಗರಾಜ್ ಮೂರ್ತಿ, ಎಸ್ ಪಿ ದಯಾನಂದ ವ್ಯವಸ್ಥಾಪಕ ನಿರ್ಧೇಶಕರು ಡಿ ಎಸ್ ಮ್ಯಾಕ್ಸ್, ಹಾಸನ ಜಿಲ್ಲಾ ಶರಣಬಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮುಂತಾದವರು ಇದ್ದರು.
ವರದಿ. ಶರಣ. ಎಂ.ಎನ್. ಕುಮಾರಸ್ವಾಮಿ,
ರಾಮನಾಥಪುರ, ಮಾಜಿ ಅಧ್ಯಕ್ಷರು,
ಶರಣ ಸಾಹಿತ್ಯ ಪರಿಷತ್ತು, ಹಾಸನ ಜಿಲ್ಲೆ
