ಬೆಂಗಳೂರು, ಅ.5: ವಾಣಿಜ್ಯ ಸಂಸ್ಥೆಗಳ ಗ್ರಾಹಕ ಸಂವಹನವನ್ನು ಮತ್ತಷ್ಟು ಸುರಕ್ಷಿತ ಹಾಗೂ ವಿಶ್ವಾಸಾರ್ಹಗೊಳಿಸುವ ಉದ್ದೇಶದಿಂದ ಏರ್ಟೆಲ್ ಬಿಸಿನೆಸ್ ದೇಶಾದ್ಯಂತ ‘ಏರ್ಟೆಲ್ ಐಕ್ಯೂ ಗೇಟ್ವೇ’ ಎಂಬ ಹೊಸ ಬಿಸಿನೆಸ್ ಕಮ್ಯುನಿಕೇಷನ್ಸ್ ಪ್ಲಾಟ್ಫಾರ್ಮ್ ಅನ್ನು ಬಿಡುಗಡೆ ಮಾಡಿದೆ.
ಟೆಲಿಕಾಂ ದರ್ಜೆಯ ನೆಟ್ವರ್ಕ್ ಇಂಟೆಲಿಜೆನ್ಸ್ ಹೊಂದಿರುವ ಈ ಏಕೀಕೃತ ವೇದಿಕೆ, ಏರ್ಟೆಲ್ನ ವಂಚನೆ ತಡೆ ವ್ಯವಸ್ಥೆಯನ್ನು ನೆಟ್ವರ್ಕ್ ಒಳನೋಟಗಳೊಂದಿಗೆ ಸಂಯೋಜಿಸುತ್ತದೆ. ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ (ಡಿಪಿಡಿಪಿ) ಕಾಯ್ದೆಗೆ ಅನುಗುಣವಾಗಿ ರೂಪಿಸಲಾಗಿರುವ ಈ ವೇದಿಕೆಯ ಮೂಲಕ ಸಂಸ್ಥೆಗಳು ಎಸ್ಎಂಎಸ್, ವಾಟ್ಸ್ಆಪ್,ಆರ್ಸಿಎಸ್ ಹಾಗೂ ಬಿಸಿನೆಸ್ ವಾಯ್ಸ್ ಸೇರಿದಂತೆ ವಿವಿಧ ಗ್ರಾಹಕ ಸಂವಹನ ಮಾಧ್ಯಮಗಳನ್ನು ಒಂದೇ ನಿಯಂತ್ರಣ ಕೇಂದ್ರದಿಂದ ನಿರ್ವಹಿಸಬಹುದಾಗಿದೆ.
ಪ್ರಸ್ತುತ ಸಂಸ್ಥೆಗಳು ಗ್ರಾಹಕರನ್ನು ತಲುಪಲು ಹಲವು ಸೇವಾದಾತರು ಹಾಗೂ ತಂತ್ರಜ್ಞಾನ ವ್ಯವಸ್ಥೆಗಳನ್ನು ಅವಲಂಬಿಸಿರುವುದರಿಂದ ಸಂದೇಶಗಳ ನೈಜ ಡೆಲಿವರಿ ಸ್ಥಿತಿ, ಸ್ಪ್ಯಾಮ್ ಅಪಾಯ ಹಾಗೂ ವಂಚನೆಯ ಎಸ್ಎಂಎಸ್ ಪಂಪಿಂಗ್ನಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಐಕ್ಯೂ ಗೇಟ್ವೇ ಏಕಗವಾಕ್ಷಿ ಪರಿಹಾರವಾಗಿ ಕಾರ್ಯನಿರ್ವಹಿಸಲಿದೆ.
ವೇದಿಕೆಯು ಸ್ವಯಂಚಾಲಿತ ವೆಂಡರ್ ಫೇಲ್ಓವರ್, ಮಲ್ಟಿ-ಚಾನೆಲ್ ಬುದ್ಧಿವಂತ ರೂಟಿಂಗ್, ಸ್ಥಳೀಯ ಡಿಎಲ್ಟಿ ಸಂಯೋಜನೆ ಹಾಗೂ ಪಾರದರ್ಶಕ ಡೆಲಿವರಿ ವರದಿ ವ್ಯವಸ್ಥೆಯನ್ನು ಹೊಂದಿದೆ. ಇದರಿಂದ ಸಂದೇಶ ಡೆಲಿವರಿ ವಿಫಲವಾದ ಸಂದರ್ಭದಲ್ಲಿ ಪರ್ಯಾಯ ಸೇವಾದಾತರಿಗೆ ಸ್ವಯಂಚಾಲಿತವಾಗಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗಲಿದೆ.
ಇದರೊಂದಿಗೆ ಏರ್ಟೆಲ್ ಐಕ್ಯೂ ವೆರಿಫೈ ಮೂಲಕ ನೆಟ್ವರ್ಕ್, ಮೊಬೈಲ್ ಸಾಧನ ಮತ್ತು ಬಳಕೆಯ ಸಂಕೇತಗಳನ್ನು ವಿಶ್ಲೇಷಿಸಿ ನಕಲಿ ಖಾತೆಗಳು ಹಾಗೂ ವಂಚನೆಯ ಪ್ರಯತ್ನಗಳನ್ನು ಪತ್ತೆಹಚ್ಚಲು ನೆರವಾಗಲಿದೆ. ಸೈಲೆಂಟ್ ಆಥೆಂಟಿಕೇಷನ್ ಸೌಲಭ್ಯವು ಒಟಿಪಿ ಎಸ್ಎಂಎಸ್ಗೆ ಪರ್ಯಾಯವಾಗಿ ನೆಟ್ವರ್ಕ್ ಮಟ್ಟದಲ್ಲೇ ಮೊಬೈಲ್ ಸಂಖ್ಯೆ ಮತ್ತು ಸಕ್ರಿಯ ಸಿಮ್ ನಡುವಿನ ಹೊಂದಾಣಿಕೆಯನ್ನು ಪರಿಶೀಲಿಸಲು ನೆರವಾಗುತ್ತದೆ.
ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಇ-ಕಾಮರ್ಸ್ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರಗಳಿಗೆ ಈ ವ್ಯವಸ್ಥೆ ವಿಶೇಷವಾಗಿ ಉಪಯುಕ್ತವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ವಂಚನೆಯ ಎಸ್ಎಂಎಸ್ ಪಂಪಿಂಗ್ನಿಂದ ಉಂಟಾಗುವ ಅನಗತ್ಯ ವೆಚ್ಚ ಹಾಗೂ ಬಿಲ್ಲಿಂಗ್ ಹೆಚ್ಚಳವನ್ನು ತಗ್ಗಿಸುವ ಜೊತೆಗೆ ಗ್ರಾಹಕರ ಸಂವಹನದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
ಈ ಕುರಿತು ಮಾತನಾಡಿದ ಏರ್ಟೆಲ್ ಬಿಸಿನೆಸ್ನ ಸಿಇಒ ಶರತ್ ಸಿನ್ಹಾ, ಡಿಜಿಟಲ್ ಆರ್ಥಿಕತೆ ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಂದು ಡಿಜಿಟಲ್ ಸಂವಹನಕ್ಕೂ ಭದ್ರತೆ ಮತ್ತು ವಿಶ್ವಾಸ ಅಗತ್ಯವಾಗಿದೆ. ಮೊಬೈಲ್ ಹಾಗೂ ಡಿಜಿಟಲ್ ಸೇವೆಗಳ ಮೂಲಕ ಗ್ರಾಹಕರನ್ನು ರಕ್ಷಿಸುವಲ್ಲಿ ಪಡೆದ ನೆಟ್ವರ್ಕ್ ದರ್ಜೆಯ ವಂಚನೆ ತಡೆ ಪರಿಣತಿಯನ್ನು ಇದೀಗ ಐಕ್ಯೂ ಗೇಟ್ವೇ ಮೂಲಕ ಉದ್ಯಮ ಸಂಸ್ಥೆಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.
ಆಯ್ದ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಹಾಗೂ ಪ್ರಮುಖ ಉದ್ಯಮ ಸಹಭಾಗಿತ್ವಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ ಐಕ್ಯೂ ಗೇಟ್ವೇಯನ್ನು ದೇಶಾದ್ಯಂತ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಈ ವೇದಿಕೆಯನ್ನು ಸಂಸ್ಥೆಯ ಆವರಣದಲ್ಲೇ ಅಳವಡಿಸಿಕೊಳ್ಳುವ ಅವಕಾಶದ ಜೊತೆಗೆ ಏರ್ಟೆಲ್ ಕ್ಲೌಡ್ನಲ್ಲಿ ಸಾಫ್ಟ್ವೇರ್ ಆ್ಯಸ್ ಎ ಸರ್ವೀಸ್ (SaaS) ರೂಪದಲ್ಲಿಯೂ ಬಳಸಬಹುದಾಗಿದೆ. ರಿಯಲ್ಟೈಮ್ ಅನಲಿಟಿಕ್ಸ್, ಸಮಗ್ರ ಡ್ಯಾಶ್ಬೋರ್ಡ್ ಹಾಗೂ ನೆಟ್ವರ್ಕ್ ಮಟ್ಟದ ಡೆಲಿವರಿ ವರದಿಗಳು ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.
ಐಕ್ಯೂ ಗೇಟ್ವೇಯ ಕಾರ್ಯವೈಖರಿಯ ನೇರ ಅನುಭವವನ್ನು ಅಕ್ಟೋಬರ್ 7ರಿಂದ 10ರವರೆಗೆ ನಡೆಯಲಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ 2026ರಲ್ಲಿ ಏರ್ಟೆಲ್ ಮಳಿಗೆಯಲ್ಲಿ ಪಡೆಯಬಹುದಾಗಿದೆ.
