ಬೆಂಗಳೂರು:ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ರವರ ತಾಯಿಯವರಾದ ಶ್ರೀಮತಿ ಜಯಶ್ರೀಬಾಯಿವಿಜಯಕುಮಾರಹಂಚಾಟೆ ರವರು ಇಳಕಲ್ಲಿನ ಶ್ರೀಕುಮಾರೇಶ್ವರ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಅ.14ರ ಬುಧವಾರ ರಾತ್ರಿ ಸುಮಾರು 10:30ರ ಹೊತ್ತಿಗೆ ನಿಧನರಾದರು.
ಅವರಿಗೆ 4ಜನ ಗಂಡು ಮಕ್ಕಳಿದ್ದು ಹಿರಿಯ ಪುತ್ರರಾದ ಹಂಚಾಟೆ ಸಂಜೀವಕುಮಾರ್ ರವರು ರಾಜ್ಯ ಉಚ್ಛನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ,2ನೇ ಮಗ ವ್ಯಾಪಾರಿಯಾಗಿದ್ದಾರೆ,3ನೇ ಮಗ ಚಾರ್ಟರ್ಡ್(ಸಿಎ)ಅಕೌಂಟೆಂಟ್, 4ನೇ ಪುತ್ರ ಮಲೇಶಿಯಾದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ, ಮೃತರ ಅಂತಿಮ ದರ್ಶನ ಇಳಕಲ್ಲಿನ ಜೋಶಿಗಲ್ಲಿ, ಬಿಜ್ಜಲ್ ಪೆಟ್ರೋಲ್ ಬಂಕ್ ಹಿಂಭಾಗದ ಸ್ವಗೃಹದಲ್ಲಿ ಪಡೆಯಬಹುದು ಅಂತಿಮ ವಿಧಿವಿಧಾನ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಶ್ರೀಮತಿ ಜಯಶ್ರೀಬಾಯಿವಿಜಯಕುಮಾರಹಂಚಾಟೆರವರು ಕೊಡುಗೈ ದಾನಿಗಳಾಗಿದ್ದರು,ಸದಾ ದೇವರ ಬಗ್ಗೆ ಅಪಾರ ನಂಬಿಕೆ ಉಳ್ಳವರಾಗಿದ್ದು,ಗುರು-ಹಿರಿಯರಿಗೆ ಬಹಳ ಗೌರವವನ್ನು ನೀಡುತ್ತಿದ್ದರು,ಬಡವರು,ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸೇವೆಯನ್ನು, ದಾನ-ಧರ್ಮವನ್ನು ನೀಡುತ್ತಾ ಸದಾ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರ ನಿಧನಕ್ಕೆ ಹಲವಾರು ಗಣ್ಯರು,ಸಾಧು-ಸಂತರು,ಸಮಾಜದ ಮುಖಂಡರು, ನ್ಯಾಯಾಧೀಶರು, ಪತ್ರಕರ್ತರು, ವಕೀಲರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
-ಕೆ.ಬಿ.ಚಂದ್ರಚೂಡ
