ಬೆಂಗಳೂರು, ನ. 4: ಬೆಂಗಳೂರಿನ ವೈಟ್ಫೀಲ್ಡ್–ಸರ್ಜಾಪುರ ರಸ್ತೆ ಕಾರಿಡಾರ್ನಲ್ಲಿ 100ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದ ಸಮಗ್ರ ಟೌನ್ಶಿಪ್ ಅಭಿವೃದ್ಧಿಪಡಿಸುತ್ತಿರುವ ಮಾನಾ ಸ್ಕಂದಾ, ಇದೀಗ 17 ಎಕರೆ ಪ್ರದೇಶದಲ್ಲಿ ‘ಬೀಚ್ ಪ್ರಾವಿನ್ಸ್’ ಎಂಬ ಹೊಸ ವಸತಿ ಯೋಜನೆಯನ್ನು ಪ್ರಾರಂಭಿಸಿದೆ. ಸುಮಾರು ₹3,657 ಕೋಟಿ ಅಂದಾಜು ಅಭಿವೃದ್ಧಿ ಮೌಲ್ಯದ ಈ ಯೋಜನೆಯಲ್ಲಿ 3.5 ಎಕರೆ ವಿಸ್ತೀರ್ಣದ ಕೃತಕ ಬೀಚ್ ಮತ್ತು ಲಗೂನ್ ಪ್ರಮುಖ ಆಕರ್ಷಣೆಯಾಗಿವೆ.
ಈ ವಸತಿ ಯೋಜನೆಯಲ್ಲಿ 1, 2 ಮತ್ತು 3 ಬಿಎಚ್ಕೆ ಮನೆಗಳು, ಶೇ.80ಕ್ಕೂ ಅಧಿಕ ತೆರೆದ ಪ್ರದೇಶಗಳು ಹಾಗೂ 50,000 ಚದರ ಅಡಿ ವಿಸ್ತೀರ್ಣದ ಕ್ಲಬ್ಹೌಸ್ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ನಿವಾಸಿಗಳಿಗೆ ಮನೆಯಲ್ಲಿಯೇ ರಜಾದಿನಗಳ ಅನುಭವ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈ ಕುರಿತು ಮಾತನಾಡಿದ ಮಾನಾ ಪ್ರಾಜೆಕ್ಟ್ಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ. ಕಿಶೋರ್ ರೆಡ್ಡಿ, ನಗರ ಜೀವನದ ಒತ್ತಡದ ನಡುವೆ ಮನೆ ವಿಶ್ರಾಂತಿ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವ ಪ್ರಮುಖ ತಾಣವಾಗಿದೆ. ಬೀಚ್ ಪ್ರಾವಿನ್ಸ್ ಮೂಲಕ ರಜಾದಿನಗಳ ಅನುಭವವನ್ನು ದೈನಂದಿನ ಜೀವನದಲ್ಲೇ ಒದಗಿಸಲು ಉದ್ದೇಶಿಸಲಾಗಿದೆ. ಬೀಚ್, ಲಗೂನ್, ವಿಶಾಲ ತೆರೆದ ಪ್ರದೇಶಗಳು ಹಾಗೂ ಮನರಂಜನಾ ಸೌಲಭ್ಯಗಳು ನಿವಾಸಿಗಳಿಗೆ ಉತ್ತಮ ಜೀವನಶೈಲಿಯ ಅನುಭವ ನೀಡಲಿವೆ ಎಂದರು.
ನಿಯೋಬಿಲ್ಡ್ ವೆಂಚರ್ಸ್ ನಿರ್ದೇಶಕ ಸಂದೀಪ್ ರಾಮನೊಲ್ಲಾ ಮಾತನಾಡಿ, ಮನೆ ಎಂದರೆ ಕೇವಲ ವಾಸಿಸುವ ಸ್ಥಳವಲ್ಲ, ಅದು ಒದಗಿಸುವ ಅನುಭವಗಳೂ ಮುಖ್ಯ. ಬೀಚ್, ಲಗೂನ್, ಉದ್ಯಾನವನಗಳು ಹಾಗೂ ಮನರಂಜನಾ ಸೌಲಭ್ಯಗಳ ಮೂಲಕ ಎಲ್ಲ ವಯೋಮಾನದವರಿಗೂ ಅನುಕೂಲವಾಗುವ ಸಮುದಾಯ ನಿರ್ಮಿಸುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಬೀಚ್ ಮತ್ತು ಲಗೂನ್ ವಿಶೇಷ ಆಕರ್ಷಣೆ
ಯೋಜನೆಯ 3.5 ಎಕರೆ ಬೀಚ್ ಮತ್ತು ಲಗೂನ್ನಲ್ಲಿ ಚಿನ್ನದ ಬಣ್ಣದ ಮರಳು, ನೀಲಿ ನೀರು, ಈಜು ಮತ್ತು ಆಟಕ್ಕಾಗಿ ಪ್ರತ್ಯೇಕ ಆಳವಿಲ್ಲದ ಹಾಗೂ ಆಳವಾದ ನೀರಿನ ಪ್ರದೇಶಗಳನ್ನು ನಿರ್ಮಿಸಲಾಗುತ್ತದೆ. ಬೀಚ್ ವಾಲಿಬಾಲ್ ಕೋರ್ಟ್ಗಳು, ಕ್ಯಾಬಾನಾಗಳು, ಲೌಂಜ್ಗಳು ಮತ್ತು ಗೋವಾ ಶೈಲಿಯ ಬೀಚ್ ಶ್ಯಾಕ್ ಕೂಡ ಇರಲಿವೆ.
ಇದರೊಂದಿಗೆ ಕರಾವಳಿ ಉದ್ಯಾನವನ, ಸುಗಂಧ ಹಾದಿ, ಪ್ರತಿಬಿಂಬ ಉದ್ಯಾನ, ಸಾಕುಪ್ರಾಣಿಗಳ ಉದ್ಯಾನ, ಮಕ್ಕಳ ಆಟದ ಪ್ರದೇಶ ಹಾಗೂ ಹಿರಿಯ ನಾಗರಿಕರಿಗಾಗಿ ವಿಶೇಷ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಆಧುನಿಕ ಜೀವನಶೈಲಿ ಸೌಲಭ್ಯಗಳು
50,000 ಚದರ ಅಡಿ ವಿಸ್ತೀರ್ಣದ ಕ್ಲಬ್ಹೌಸ್ನಲ್ಲಿ ಕೆಫೆ, ರೆಸ್ಟೋರೆಂಟ್, ಜಿಮ್, ಬ್ಯಾಡ್ಮಿಂಟನ್ ಮತ್ತು ಸ್ಕ್ವಾಷ್ ಕೋರ್ಟ್ಗಳು, ಯೋಗ ಮತ್ತು ನೃತ್ಯ ಕೊಠಡಿಗಳು, ಕಲಾ ಕೊಠಡಿ, ಟೇಬಲ್ ಟೆನಿಸ್, ಸಲೂನ್ ಹಾಗೂ ಸಹ-ಕಾರ್ಯನಿರ್ವಹಣಾ ಸ್ಥಳಗಳನ್ನು ಕಲ್ಪಿಸಲಾಗುತ್ತದೆ.
ಇಡೀ ಟೌನ್ಶಿಪ್ನಲ್ಲಿ ಮಕ್ಕಳಿಗಾಗಿ 40ಕ್ಕೂ ಹೆಚ್ಚು ವಿಶೇಷ ಅನುಭವಗಳು, 13 ಎಕರೆ ಸರೋವರ, 6.5 ಎಕರೆ ಕ್ರೀಡಾ ಸೌಲಭ್ಯಗಳು ಹಾಗೂ ಸುಮಾರು 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಕ್ಲಬ್ಹೌಸ್ ಸೌಲಭ್ಯಗಳಿವೆ. ಐದು ಮಹಡಿಗಳ ಪ್ರಮುಖ ಕ್ಲಬ್ಹೌಸ್ನಲ್ಲಿ ಮೈಕ್ರೋಬ್ರೂವರಿ, ಮಿನಿ ಥಿಯೇಟರ್ಗಳು, ಮಕ್ಕಳ ಆಟದ ಪ್ರದೇಶಗಳು, ಸಹ-ಕಾರ್ಯನಿರ್ವಹಣಾ ಸ್ಥಳಗಳು ಮತ್ತು ಪ್ರೀಮಿಯಂ ಅತಿಥಿ ಕೊಠಡಿಗಳಿರಲಿವೆ.
ಪ್ರಮುಖ ಪ್ರದೇಶಗಳಿಗೆ ಉತ್ತಮ ಸಂಪರ್ಕ
ವೈಟ್ಫೀಲ್ಡ್, ಸರ್ಜಾಪುರ ರಸ್ತೆ ಹಾಗೂ ಹೊರ ವರ್ತುಲ ರಸ್ತೆಗೆ ಸಂಪರ್ಕ ಹೊಂದಿರುವ ಈ ಯೋಜನೆಯಿಂದ ಮುಂಬರುವ ದೊಮ್ಮಸಂದ್ರ ಮೆಟ್ರೋ ನಿಲ್ದಾಣ ಸುಮಾರು 800 ಮೀಟರ್ ದೂರದಲ್ಲಿದೆ.
ಆರ್ಜಿಎ ಟೆಕ್ ಪಾರ್ಕ್, ಆರ್ಎಂಝಡ್ ಇಕೋಸ್ಪೇಸ್, ಆರ್ಎಂಝಡ್ ಇಕೋವರ್ಲ್ಡ್, ಎಂಬೆಸಿ ಟೆಕ್ ವಿಲೇಜ್ ಮತ್ತು ವಿಪ್ರೋ ಕಾರ್ಪೊರೇಟ್ ಕಚೇರಿಗಳಂತಹ ಪ್ರಮುಖ ಉದ್ಯೋಗ ಕೇಂದ್ರಗಳು ಸಮೀಪದಲ್ಲಿವೆ. ಇನ್ವೆಂಚರ್ ಅಕಾಡೆಮಿ, ಇಂಡಸ್ ಇಂಟರ್ನ್ಯಾಷನಲ್ ಸ್ಕೂಲ್, ಗ್ರೀನ್ವುಡ್ ಹೈ, ಮಣಿಪಾಲ್ ಆಸ್ಪತ್ರೆ, ಸಕ್ರಾ ವರ್ಲ್ಡ್ ಆಸ್ಪತ್ರೆ ಹಾಗೂ ಕ್ಲೌಡ್ನೈನ್ ಆಸ್ಪತ್ರೆಗಳಿಗೂ ಸುಲಭ ಸಂಪರ್ಕ ಹೊಂದಿದೆ.
