ಬೆಂಗಳೂರು: ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಈದ್ ಮಿಲದ್ ಪ್ರಯುಕ್ತ ಬಂದೋಬಸ್ತ್ ಕರ್ತವ್ಯ ನಿರತ ಪೋಲಿಸ್ ಸಿಬ್ಬಂದಿಗೆ ಊಟ ವಿತರಣೆಯಲ್ಲಿ ಗಂಭೀರ ಅವ್ಯವಸ್ಥೆ ನಡೆದಿದೆ.
ಕರ್ತವ್ಯದಲ್ಲಿದ್ದ ಪೋಲಿಸ್ಗಳಿಗೆ ಸರಿಯಾದ ಊಟ ಸಿಗದೆ, ಕೇವಲ ಚಟ್ನಿಯೊಂದಿಗೆ ಅನ್ನ ನೀಡಿದ ಘಟನೆ ಸಿಬ್ಬಂದಿಯಲ್ಲಿ ಆಕ್ರೋಶಕ್ಕೆ ಕಾರಣವಾಯಿತು.
ಸರ್ಕಾರವು ಪ್ರತಿಯೊಬ್ಬ ಸಿಬ್ಬಂದಿಯ ಊಟಕ್ಕಾಗಿ ₹200-₹300 ವರೆಗೆ ಬಜೆಟ್ ಒದಗಿಸಿದ್ದರೂ, ಈ ರೀತಿಯ ನಿರ್ಲಕ್ಷ್ಯ ಕಂಡು ಬಂದಿರುವುದು ಇಲಾಖೆಯ ಆಡಳಿತದ ಮೇಲೆಯೇ ಪ್ರಶ್ನೆ ಎಬ್ಬಿಸಿದೆ.
ಇತ್ತೀಚೆಗೆ ಯಲಂಕಾದ ಏರ್ ಶೋ ಕಾರ್ಯಕ್ರಮದಲ್ಲೂ ಪೋಲಿಸ್ ಸಿಬ್ಬಂದಿಗೆ ಜೀರಿಗೆ ಇರುವ ತಿಂಡಿ ನೀಡಿದ ಘಟನೆ ಮಾಸುವ ಮುನ್ನವೇ, ಮತ್ತೊಮ್ಮೆ ಇದೇ ರೀತಿಯ ಅವ್ಯವಸ್ಥೆ ನಡೆದಿರುವುದು ಪೋಲಿಸ್ ಇಲಾಖೆಯ ಒಳಾಂಗಣ ನಿರ್ವಹಣೆಯ ಮೇಲೆ ಗಂಭೀರ ಚರ್ಚೆಗೆ ಕಾರಣವಾಗಿದೆ.
