ಬೆಂಗಳೂರು, ಆ.14: UPI ಪಾವತಿ, ಸಾಲ ಮತ್ತು ಆನ್ಲೈನ್ ಶಾಪಿಂಗ್ ಅನ್ನು ಒಂದೇ ಅನುಭವದಲ್ಲಿ ಸಂಯೋಜಿಸುವ ಉದ್ದೇಶದಿಂದ super.money ತನ್ನ ಹೊಸ ‘splitStore’ ಸೇವೆಯನ್ನು ಬಿಡುಗಡೆ ಮಾಡಿದೆ.
ಜನರೇಷನ್ Z ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ splitStore ಮೂಲಕ Apple, Nothing, Mokobara, Nike, Marshall, Adidas ಮತ್ತು Snitch ಸೇರಿದಂತೆ ಪ್ರಮುಖ ಬ್ರ್ಯಾಂಡ್ಗಳ ಉತ್ಪನ್ನಗಳನ್ನು ಖರೀದಿಸಿ, ಖರೀದಿ ಮೊತ್ತವನ್ನು ಯಾವುದೇ ಬಡ್ಡಿ ಮತ್ತು ಹೆಚ್ಚುವರಿ ಶುಲ್ಕವಿಲ್ಲದೆ ಹಲವು ಕಂತುಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ.
ನಿಯಂತ್ರಿತ ಸಾಲದಾತರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ ಈ ಸೇವೆಯಲ್ಲಿ, ಸಂಪೂರ್ಣ ಪಾವತಿ ಮುಗಿಯುವ ಮೊದಲೇ ಉತ್ಪನ್ನವನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ. ಮೊಬೈಲ್, ಫ್ಯಾಷನ್, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಸೌಂದರ್ಯ ಉತ್ಪನ್ನಗಳು, ಫಿಟ್ನೆಸ್, ಆಹಾರ ಹಾಗೂ ಪೀಠೋಪಕರಣ ಸೇರಿದಂತೆ ವಿವಿಧ ವಿಭಾಗಗಳ 60 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯವಿವೆ ಎಂದು ಕಂಪನಿ ತಿಳಿಸಿದೆ.
ಸರಳ KYC ಪರಿಶೀಲನೆಯ ಬಳಿಕ ಗ್ರಾಹಕರು ಕ್ರೆಡಿಟ್ ಕಾರ್ಡ್ ಅಥವಾ ಪ್ರೊಸೆಸಿಂಗ್ ಶುಲ್ಕವಿಲ್ಲದೆ ಕಂತುಗಳಲ್ಲಿ ಪಾವತಿಸುವ ಸೌಲಭ್ಯ ಪಡೆಯಬಹುದು. Flipkartನ ವಿತರಣಾ ಮೂಲಸೌಕರ್ಯದ ಬೆಂಬಲವೂ splitStoreಗೆ ಇದೆ.
super.money ಸಂಸ್ಥಾಪಕ ಮತ್ತು CEO ಪ್ರಕಾಶ್ ಸಿಕಾರಿಯಾ ಮಾತನಾಡಿ, UPI ಭಾರತದಲ್ಲಿ ಪಾವತಿ ವಿಧಾನವನ್ನು ಬದಲಿಸಿದಂತೆ, ಮುಂದಿನ ಹಂತದಲ್ಲಿ ಜನರು ಶಾಪಿಂಗ್ ಮಾಡುವ ವಿಧಾನವನ್ನು ಪರಿವರ್ತಿಸುವ ಅವಕಾಶವಿದೆ. UPIಯ ವೇಗ ಮತ್ತು ವಿಶ್ವಾಸಾರ್ಹತೆಯನ್ನು ಜವಾಬ್ದಾರಿಯುತ ಸಾಲ ಸೌಲಭ್ಯದೊಂದಿಗೆ ಸಂಯೋಜಿಸಿ, ಕೈಗೆಟುಕುವ ಖರೀದಿಯನ್ನು ಚೆಕ್ಔಟ್ ಅನುಭವದ ಭಾಗವಾಗಿಸುವುದು splitStoreನ ಉದ್ದೇಶವಾಗಿದೆ ಎಂದು ಹೇಳಿದರು.
ಸಾಂಪ್ರದಾಯಿಕ BNPL ಮಾದರಿಗಿಂತ ವಿಭಿನ್ನವಾಗಿ splitStoreನಲ್ಲಿ ರಿವಾಲ್ವಿಂಗ್ ಕ್ರೆಡಿಟ್ ಲೈನ್, ಗುಪ್ತ ಶುಲ್ಕ ಹಾಗೂ ತಡ ಪಾವತಿಯಿಂದ ಲಾಭ ಪಡೆಯುವ ಮಾದರಿ ಇಲ್ಲ ಎಂದು ಕಂಪನಿ ತಿಳಿಸಿದೆ. ನಿಗದಿತ ವೇಳಾಪಟ್ಟಿಯಂತೆ ಜವಾಬ್ದಾರಿಯುತ ಮರುಪಾವತಿಗೆ ಒತ್ತು ನೀಡಲಾಗಿದೆ.
ಪ್ರಸ್ತುತ splitStore ಸೇವೆ super.money ಆ್ಯಪ್ನ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಹಂತ ಹಂತವಾಗಿ ಎಲ್ಲ ಬಳಕೆದಾರರಿಗೂ ವಿಸ್ತರಿಸಲಾಗುವುದು ಎಂದು ಕಂಪನಿ ತಿಳಿಸಿದೆ.
Flipkart Groupನ ಬೆಂಬಲ ಹೊಂದಿರುವ super.money, UPI ಪಾವತಿ, ಕ್ಯಾಶ್ಬ್ಯಾಕ್, RuPay ಕಾರ್ಡ್ಗಳು, ಚೆಕ್ಔಟ್ ಸಾಲ ಹಾಗೂ ವೈಯಕ್ತಿಕ ಸಾಲ ಸೇರಿದಂತೆ ವಿವಿಧ ಹಣಕಾಸು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತಿದೆ.
