ಕಾರವಾರ: ಕಾರವಾರ ಮೆಡಿಕಲ್ ಕಾಲೇಜು ಹಾಗೂ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಅಧೀನ ಸರ್ಕಾರಿ ಆಸ್ಪತ್ರೆಯ ಅಧೀಕ್ಷಕರಾಗಿದ್ದ ಹಿರಿಯ ಹೆರಿಗೆ ವೈದ್ಯ ಡಾ. ಶಿವಾನಂದ ಕುಡಲ್ತಕರ್ ಅವರನ್ನು ಲಂಚ ಸ್ವೀಕಾರದ ಆರೋಪದ ಮೇಲೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಕಮಿಷನರ್ ಕೆ.ಬಿ. ಶಿವಕುಮಾರ್ ಅವರು ಅಮಾನತಿಗೆ ಒಳಪಡಿಸಿದ್ದಾರೆ.
ಡಾ. ಕುಡಲ್ತಕರ್ ಜುಲೈ 10 ರಂದು ಆಸ್ಪತ್ರೆಗೆ ಹಾಸಿಗೆ ಸರಬರಾಜು ಮಾಡಿದ ಗುತ್ತಿಗೆದಾರನಿಂದ ರೂ.30,000 ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದರು. ಆರೋಪದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಕರಣದ ವರದಿ ಆರೋಗ್ಯ ಇಲಾಖೆ ಕಮಿಷನರ್ಗೇ ತಲುಪಿದ ತಕ್ಷಣ, ಆಧಾರದ ಮೇಲೆ ಗುರುವಾರ ಅಧಿಕೃತವಾಗಿ ಅಮಾನತ್ ಆದೇಶ ಹೊರಡಿಸಲಾಗಿದೆ.
ಈ ಆದೇಶವು ಈಗಾಗಲೇ ಕಾರವಾರ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗೆ ಹಾಗೂ ಸಂಸ್ಥೆಯ ನಿರ್ದೇಶಕರಿಗೆ ತಲುಪಿದ್ದು, ಮುಂದಿನ ಕ್ರಮಕ್ಕಾಗಿ ನಿರೀಕ್ಷೆಯಲ್ಲಿದೆ.

[…] […]