ಬೆಂಗಳೂರು, ಸೆ. 22: ಭಾರ್ತಿ ಏರ್ಟೆಲ್ ತನ್ನ ₹999 ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಫ್ಯಾಮಿಲಿ ಪೋಸ್ಟ್ಪೇಯ್ಡ್ ಯೋಜನೆಗಳನ್ನು ಮತ್ತಷ್ಟು ಆಕರ್ಷಕಗೊಳಿಸಿದ್ದು, ಇದೀಗ ಆ್ಯಪಲ್ನ ಐಕ್ಲೌಡ್+, ಆ್ಯಪಲ್ ಟಿವಿ ಹಾಗೂ ಆ್ಯಪಲ್ ಆರ್ಕೇಡ್ ಸೌಲಭ್ಯಗಳನ್ನು ಒಳಗೊಂಡಿದೆ.
ಹೊಸ ಕೊಡುಗೆಯಡಿ ಅರ್ಹ ಏರ್ಟೆಲ್ ಪೋಸ್ಟ್ಪೇಯ್ಡ್ ಗ್ರಾಹಕರು ಐಕ್ಲೌಡ್+ ಮೂಲಕ ಫೋಟೋಗಳು, ಫೈಲ್ಗಳು, ಪಾಸ್ವರ್ಡ್ಗಳು, ಸಂಪರ್ಕ ಸಂಖ್ಯೆಗಳು ಸೇರಿದಂತೆ ಪ್ರಮುಖ ಡಿಜಿಟಲ್ ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಲು, ಸಿಂಕ್ ಮಾಡಲು ಹಾಗೂ ಬ್ಯಾಕಪ್ ಮಾಡಿಕೊಳ್ಳಲು ಸಾಧ್ಯವಾಗಲಿದೆ.
ಇದರೊಂದಿಗೆ ಆ್ಯಪಲ್ ಟಿವಿ ಮೂಲಕ ವಿವಿಧ ಒರಿಜಿನಲ್ ಸರಣಿಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ. ಆ್ಯಪಲ್ ಆರ್ಕೇಡ್ ಮೂಲಕ ಜಾಹೀರಾತುಗಳು ಹಾಗೂ ಹೆಚ್ಚುವರಿ ಇನ್-ಆ್ಯಪ್ ಖರೀದಿಗಳಿಲ್ಲದೆ ನೂರಾರು ಗೇಮ್ಗಳನ್ನು ಆಡುವ ಸೌಲಭ್ಯವೂ ಸಿಗಲಿದೆ.
ಏರ್ಟೆಲ್ನ ₹999ರ ಫ್ಯಾಮಿಲಿ ಪೋಸ್ಟ್ಪೇಯ್ಡ್ ಯೋಜನೆಯು ಮೂವರು ಸದಸ್ಯರ ಕುಟುಂಬಕ್ಕೆ ಅನಿಯಮಿತ ಡೇಟಾ, ಸ್ಪ್ಯಾಮ್ ಕರೆಗಳಿಂದ ರಕ್ಷಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ. ಇದೀಗ ಆ್ಯಪಲ್ನ ಈ ಮೂರು ಸೇವೆಗಳ ಸೇರ್ಪಡೆಯಿಂದ ಸಂಪರ್ಕ, ಮನರಂಜನೆ, ಗೇಮಿಂಗ್ ಮತ್ತು ಕ್ಲೌಡ್ ಸ್ಟೋರೇಜ್ ಸೌಲಭ್ಯಗಳು ಒಂದೇ ಯೋಜನೆಯಡಿ ದೊರೆಯಲಿವೆ.
ಅರ್ಹ ಗ್ರಾಹಕರು ಏರ್ಟೆಲ್ ಆ್ಯಪ್ ಅಥವಾ ಸಮೀಪದ ಏರ್ಟೆಲ್ ಮಳಿಗೆಗೆ ಭೇಟಿ ನೀಡಿ ಯೋಜನೆಯನ್ನು ಅಪ್ಗ್ರೇಡ್ ಮಾಡಿಕೊಳ್ಳಬಹುದಾಗಿದೆ.
ಈ ಕುರಿತು ಮಾತನಾಡಿದ ಭಾರ್ತಿ ಏರ್ಟೆಲ್ನ ಮಾರ್ಕೆಟ್ ಆಪರೇಷನ್ಸ್ ನಿರ್ದೇಶಕ ಅಮಿತ್ ತ್ರಿಪಾಠಿ, ಸಂಪರ್ಕ, ಮನರಂಜನೆ ಹಾಗೂ ಕುಟುಂಬಕ್ಕೆ ಅಗತ್ಯವಿರುವ ಡಿಜಿಟಲ್ ಸೇವೆಗಳನ್ನು ಒಂದೇ ಯೋಜನೆಯಡಿ ಒದಗಿಸುವ ಉದ್ದೇಶದಿಂದ ಫ್ಯಾಮಿಲಿ ಪೋಸ್ಟ್ಪೇಯ್ಡ್ ಯೋಜನೆಗಳನ್ನು ರೂಪಿಸಲಾಗಿದೆ. ಆ್ಯಪಲ್ನ ಐಕ್ಲೌಡ್+, ಆ್ಯಪಲ್ ಟಿವಿ ಮತ್ತು ಆ್ಯಪಲ್ ಆರ್ಕೇಡ್ ಸೇರ್ಪಡೆಯಿಂದ ಗ್ರಾಹಕರಿಗೆ ಮತ್ತಷ್ಟು ಮೌಲ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.
