ಚನ್ನರಾಯಪಟ್ಟಣ: ಭೀಮ್ ಆರ್ಮಿ ಸಂಘಟನೆಯ ಕರ್ನಾಟಕ ರಾಜ್ಯದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಡಿಕೆ ಹೊಸೂರು ಪ್ರಸನ್ನ ಅವರನ್ನು ಚನ್ನರಾಯಪಟ್ಟಣ ತಾಲೂಕು ಭೀಮ್ ಆರ್ಮಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ನೂರಾರು ಭೀಮ್ ಆರ್ಮಿ ಕಾರ್ಯಕರ್ತರು ಭಾಗವಹಿಸಿ, ನೂತನ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಆಶಯಗಳ ರಕ್ಷಣೆಗೆ ಸಂಘಟಿತವಾಗಿ ಕೆಲಸ ಮಾಡುವ ಅಗತ್ಯದ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಪ್ರಸನ್ನ ಹೊಸೂರು, ರಾಜ್ಯ ಉಪಾಧ್ಯಕ್ಷ ಎಸ್.ಎಲ್. ದೊರೆರಾಜು, ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಬಿ.ಪಿ. ಧರ್ಮರಾಜ್, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಗೋವಿಂದಸ್ವಾಮಿ ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭೀಮ್ ಆರ್ಮಿ ಮುಖಂಡರಾದ ಸಿ.ಪಿ. ಮಂಜುನಾಥ್, ಕುಂಬಾರಹಳ್ಳಿ ರವಿ, ಮುಜೀರ್ ಪಾಷಾ, ಕೃಷ್ಣ ಎ.ಕೆ. ಕಾಲೋನಿ, ಮಿಮಿಕ್ರಿ ಗೋವಿಂದ, ಮಾಲೀಕ್, ಮನೋಹರ್ ಸಾಗತವಳ್ಳಿ, ಗುತ್ತಿಗೆದಾರರಾದ ಎನ್.ಆರ್. ಸಂತೋಷ್, ನವೀನ್ ರಂಗಸ್ವಾಮಿ, ಮಾರೇನಹಳ್ಳಿ ರಂಜಿತಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ.
