ರಾಮನಾಥಪುರ, ಮೇ 24 (ಆರ್ಎನ್ಪಿ): ಕರ್ನಾಟಕ ಶಾಸ್ತ್ರೀಯ ಸಂಗೀತವು ಜಗತ್ತಿನ ಐತಿಹಾಸಿಕ ಹಾಗೂ ಆತ್ಮೀಯ ಕಲಾ ಪರಂಪರೆಯಾಗಿದೆ ಎಂದು ಖ್ಯಾತ ವೈಯೋಲಿನ್ ವಿದ್ವಾಂಸ Mysore Manjunath ಹೇಳಿದರು.
ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ Rudrapatnaದಲ್ಲಿನ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ಐದು ದಿನಗಳ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ವಿದ್ವಾಂಸ R. K. Padmanabha ಅವರು ಕಳೆದ 23 ವರ್ಷಗಳಿಂದ ಸಂಗೀತ ಸೇವೆಯನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಡಾ. ಅರ್.ಕೆ. ಪದ್ಮನಾಭ ಅವರು ಕರ್ನಾಟಕದ ಅಮೂಲ್ಯ ಸಂಗೀತ ನಿಧಿಯಾಗಿದ್ದು, ವಾದಿರಾಜರ ಆರಾಧಕರಾಗಿರುವ ಅವರು ಅಧ್ಯಾತ್ಮಿಕತೆ, ಕಲೆ, ವ್ಯವಸಾಯ ಜೀವನದರ್ಶನ ಹಾಗೂ ಬದುಕಿನ ಮೌಲ್ಯಗಳನ್ನು ಸಂಗೀತದ ಮೂಲಕ ಜನರಿಗೆ ತಲುಪಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಸಂಗೀತವು ಜಗತ್ತಿನ ಮೂಲೆಮೂಲೆಗಳಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತು ಜನಮನ ಸೆಳೆಯಬಲ್ಲ ಶಕ್ತಿ ಹೊಂದಿದೆ. ಅಂಥ ಸಾಧನೆಯನ್ನು ಪದ್ಮನಾಭ ಅವರು ಯಶಸ್ವಿಯಾಗಿ ಮಾಡಿದ್ದಾರೆ. ಇಂತಹ ವಿದ್ವಾಂಸರು ನಮ್ಮನಾಡಿನಲ್ಲಿ ಇರುವುದೇ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾಂಸ ಡಾ. ಅರ್.ಕೆ. ಪದ್ಮನಾಭ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಫೋಟೋ ಶೀರ್ಷಿಕೆ:
ಸಂಗೀತ ಗ್ರಾಮ ರುದ್ರಪಟ್ಟಣದ ಶ್ರೀರಾಮ ಮಂದಿರದಲ್ಲಿ ನಡೆದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ. ಮೈಸೂರು ಮಂಜುನಾಥ್ ಮಾತನಾಡಿದರು.
