ಹಾಸನ: ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ದರ್ಪಣ ಸಮೂಹ ಸಂಸ್ಥೆ ಹಾಗೂ ಬಡಾವಣೆಯ ನಾಗರಿಕರಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಡಾ. ನಾಯಕರಹಳ್ಳಿ ಮಂಜೇಗೌಡ ಮಾತನಾಡುತ್ತಾ ವಿಶ್ವ ಪರಿಸರ ದಿನಾಚರಣೆ ಕೇವಲ ಆಚರಣೆಯಾಗಿ ಉಳಿಯದೆ ಅದು ಪರಿಸರ ರಕ್ಷಣೆಯಾಗಬೇಕು, ಪರಿಸರದ ಕಾಳಜಿ ಆರೋಗ್ಯ ದೃಷ್ಟಿಯಿಂದ ಇವತ್ತು ನಾವು ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ನಮ್ಮ ಪೂರ್ವಿಕರು ಪ್ರಕೃತಿಯನ್ನು ಪೂಜಿಸಿ ಆರಾಧಿಸುತ್ತಿದ್ದರು.
ಅವರ ಜೀವಿತಾವಧಿ ನೂರಾರು ವರ್ಷಗಳಾಗಿದ್ದವು. ಇಂದು ಶಿಕ್ಷಣ ಕಲಿತು ಪ್ರಜ್ಞಾವಂತರಾದ ನಾವು ಪ್ರಕೃತಿಯನ್ನು ನಾಶ ಮಾಡಲು ಹೊರಟಿದ್ದೇವೆ. ಪ್ರಕೃತಿ ಉಳಿದರೆ ನಾವು ಮಾತ್ರ ಉಳಿಯಲು ಸಾಧ್ಯ ಇಲ್ಲದೆಹೋದರೆ ಜಾಗತಿಕ ಮಟ್ಟದಲ್ಲಿ ಪ್ರಕೃತಿ ವಿಪತ್ತುಗಳು, ಜಾಗತಿಕ ತಾಪಮಾನ ಮುಂತಾದ ಅನಾಹುತಗಳನ್ನು ಎದುರಿಸುವ ಮೂಲಕ ಅನೇಕ ಸಮಸ್ಯೆಗಳಿಗೆ ಇಂದು ನಾವು ಕಾರಣರಾಗಿದ್ದೇವೆ. ಪ್ರಕೃತಿಯು ನಾವು ಉಸಿರಾಡಿದ ಆಮ್ಲಜನಕವನ್ನು ಸೇವಿಸಿ, ಇಂಗಾಲ ಡೈಯಾಕ್ಸೈಡ್
ಬಿಡುವುದನ್ನು ಮರಗಿಡಗಳು ಮತ್ತೆ ಸೇವಿಸಿ ಶುದ್ಧ ಆಮ್ಲಜನಕವನ್ನು ನೀಡುವ ಪ್ರಕೃತಿ ಮಾತೆ ನಮ್ಮೆಲ್ಲರ ಜೀವದಾತುವಾಗಿದೆ. ನಾವೇನಾದರೂ ಪ್ರಕೃತಿಯನ್ನು ಉಳಿಸದಿದ್ದರೆ ನಮ್ಮ ಅಸ್ತಿತ್ವ ಅಂತ್ಯವಾಗುವ ಕಾಲ ಸನಿಹದಲ್ಲಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಗೌರವಾಧ್ಯಕ್ಷರು ರವಿ ನಾಕಲಗೂಡು ಮಾತನಾಡುತ್ತಾ ಪ್ರಕೃತಿ ನಮ್ಮ ಜೀವನದ ಜೊತೆ ಹಾಸುಹೊಕ್ಕಾಗಿದೆ. ಪ್ರಕೃತಿಯನ್ನು ನಾವು ಉಳಿಸುವ ಕೆಲಸವಾಗಬೇಕಾಗಿದೆ. ಇಂದು ವಿದ್ಯಾವಂತರಾದ ನಾವು ಪ್ರಕೃತಿಯ ಮೇಲೆ ಸವಾರಿ ಮಾಡುತ್ತಿದ್ದೇವೆ. ಇವತ್ತೇನಾದರೂ ಪ್ರಕೃತಿ ಉಳಿದಿದೆ ಎಂದರೆ ಅದು ರೈತರಿಂದ ಮಾತ್ರ, ಅವರು ಕಾಡು ನಾಡನ್ನು ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅನ್ನದಾತರ ಸೇವೆ ಶ್ಲಾಘನೀಯ ಎಂದರು. ಜಿಲ್ಲಾ ತೋಟಗಾರಿಕಾ ಅಧಿಕಾರಿ ಯೋಗೀಶ್ ಮಾತನಾಡುತ್ತಾ ಇಂದು ಪರಿಸರ ದಿನಾಚರಣೆಯ ಸಂದರ್ಭ ಪ್ರಕೃತಿ ಉಳಿವು ಅಳಿವಿನ ಪ್ರಶ್ನೆಯಾಗಿದೆ. ಸರ್ಕಾರಗಳು ಪ್ರಕೃತಿಯನ್ನು ಉಳಿಸುವ ಕೆಲಸ ಮಾಡಿದರೆ ಅದನ್ನ ರಕ್ಷಿಸಿ ಕಾಪಾಡುವ ಕೆಲಸ ನಮ್ಮೆಲ್ಲರ ಮೇಲಿದೆ ಎಂದರು.

ಡಾ. ವೈ. ಎಸ್. ವೀರಭದ್ರಪ್ಪ ಮಾತನಾಡಿ ನಗರದ ಅನೇಕ ಉದ್ಯಾನವನಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದರ್ಪಣ ಗೋಪಾಲ್ ಅವರು ಮಾತನಾಡಿ ಈ ಬಡಾವಣೆಯ ಉದ್ಯಾನವನದಲ್ಲಿ ಇಂದು ಗಿಡ ನೆಡುವ ಕಾರ್ಯಕ್ರಮವನ್ನು ಈ ಭಾಗದ ನಾಗರಿಕರ ಸಹಭಾಗಿತ್ವದಲ್ಲಿ ಮಾಡಿದ್ದೇವೆ. ಮುಂದೆಯೂ ಈ ಭಾಗದಲ್ಲಿರುವ ಎಲ್ಲಾ ಉದ್ಯಾನವನಗಳಿಗೂ ಗಿಡ ನೆಡುವ ಕಾರ್ಯಕ್ರಮವನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವುದು ಎಂದರು.

ಜನಪ್ರಿಯ ಆಸ್ಪತ್ರೆಯ ಡಾಕ್ಟರ್ ಅಬ್ದುಲ್ ಬಶೀರ್, ಮಾಜಿ ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಬಿ .ಕೆ ಮಂಜುನಾಥ್, ವೀರಶೈವ ಸಮಾಜ ಮುಖಂಡರು ಕಟ್ಟಾಯ ಶಿವಕುಮಾರ್, ಸತ್ಯದ ಹೊನಲು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು ನಿಕಟಪೂರ್ವ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಕೆ.ಹೆಚ್. ವೇಣು ಕುಮಾರ್, ಪ್ರಕಾಶಮಾನ ಪತ್ರಿಕೆಯ ಸಂಪಾದಕರು, ಸ್ವಾಗತ್ ಭಾರತ್ ಸೇವಾ ದಳದ ವಲಯ ಸಂಘಟಕರು ರಾಣಿ ವಿ. ಎಸ್, ಸಮಾಜ ಸೇವಕರಾದ ಪ್ರಸಾದ್ ಗೌಡ , ಮಣಿ ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞರಾದ ಡಾಕ್ಟರ್ ದಿನೇಶ್ ಬೈರೇಗೌಡ, ಹಿರಿಯ ಪತ್ರಕರ್ತರಾದ ಆರ್.ಪಿ. ವೆಂಕಟೇಶಮೂರ್ತಿ, ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಬಡಾವಣೆಯ ಅನೇಕ ನಿವಾಸಿಗಳು ಉಪಸ್ಥಿತರಿದ್ದು ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಹಿರಿಯ ಸಾಹಿತಿ ಗೊರೂರು ಅನಂತರಾಜು ಮಾಡಿದರು.
