ಬೆಂಗಳೂರು: ಎಸ್ಎಸ್ಎಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಯುವಜನರಿಗಾಗಿ ಉಡುಪಿ ಜಿಲ್ಲೆಯ ಕುಂದಾಪುರದ ಎಸ್ಕೆಎಫ್ ಇಂಡಸ್ಟ್ರಿಯಲ್ ಟ್ರೇನಿಂಗ್ ಸೆಂಟರ್ ನಲ್ಲಿ ಉಚಿತ ಐಟಿಐ ಶಿಕ್ಷಣ ಮತ್ತು ತಾಂತ್ರಿಕ ತರಬೇತಿ ಹಮ್ಮಿಕೊಳ್ಳಲಾಗಿದೆ.
ಮೂಡುಬಿದ್ರೆಯ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಜಂಟಿ ಆಶ್ರಯದಲ್ಲಿ ಈ ಯೋಜನೆ ರೂಪಿಸಲಾಗಿದೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಫಿಟ್ಟಿಂಗ್ ಮತ್ತು ವೆಲ್ಡಿಂಗ್ ಹಾಗೂ ಮೆಕ್ಯಾನಿಕ್ (ಇವಿ, ಏಸಿ ಮತ್ತು ಪ್ಲಂಬಿಂಗ್) ಕೋರ್ಸ್ ಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಕೋರ್ಸ್ನ ಅವಧಿಯಲ್ಲಿ 3 ತಿಂಗಳ ಇಂಟರ್ನ್ ಶಿಪ್ ಇರಲಿದ್ದು, ತರಬೇತಿ ಬಳಿಕ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ. ಇದಲ್ಲದೆ ಮಹಿಳೆಯರಿಗಾಗಿ 6 ತಿಂಗಳ ಉಚಿತ ಫ್ಯಾಷನ್ ಡಿಸೈನ್ ಕೋರ್ಸ್ ಕೂಡ ಲಭ್ಯವಿದೆ.
“ಪ್ರಸ್ತುತ ಎಐ ಯುಗದಲ್ಲಿ ಕೌಶಲ್ಯಾಧಾರಿತ ಬ್ಲೂ-ಕಾಲರ್ ಉದ್ಯೋಗಗಳಿಗೆ ಜಾಗತಿಕವಾಗಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಈ ಬದಲಾವಣೆಯ ಲಾಭವನ್ನು ಗ್ರಾಮೀಣ ಯುವಜನರು ಪಡೆದುಕೊಳ್ಳಬೇಕು. ನಮ್ಮ ಸಂಸ್ಥೆಯಲ್ಲೇ ವರ್ಷಕ್ಕೆ 100 ಮಂದಿಗೆ ನೇರ ಉದ್ಯೋಗ ನೀಡಲಿದ್ದೇವೆ” ಎಂದು ಎಸ್ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರಾದ ಡಾ. ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 7204570741, 7204563475, 7204567476 ಅಥವಾ www.skftrainingcentre.com ಸಂಪರ್ಕಿಸಬಹುದು.
