ಹಾಸನ, ಜೂನ್ 17: ವೀರಶೈವ-ಲಿಂಗಾಯತ ಧರ್ಮದ ತತ್ವಗಳು, ಶಿವಾಚಾರದ ಆಚರಣೆ ಹಾಗೂ ಲಿಂಗಧಾರಣೆಯ ಮಹತ್ವವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬಹುದು ಎಂದು ಮುಕ್ಕುಂದೂರು ಮಲ್ಲದೇವರಪುರ ವಿರಕ್ತ ಮಠದ ಡಾ. ಶ್ರೀ ಪ್ರಭುಮಹಾಂತ ಮಹಾಸ್ವಾಮೀಜಿಯವರು ಹೇಳಿದರು.
ಹೊಳೆನರಸಿಪುರ ತಾಲ್ಲೂಕಿನ ಬೀಚೇನಹಳ್ಳಿ ಗ್ರಾಮದ ಶ್ರೀ ಚಂದ್ರಮೌಳೇಶ್ವರಸ್ವಾಮಿ ದೇವಾಲಯದಲ್ಲಿ ವಿಶ್ವ ವೀರಶೈವ-ಲಿಂಗಾಯತ ಮಹಾ ವೇದಿಕೆ ವತಿಯಿಂದ ಆಯೋಜಿಸಿದ್ದ ಉಚಿತ ಲಿಂಗಧಾರಣೆ ಕಾರ್ಯಕ್ರಮದಲ್ಲಿ 25 ವಟುಗಳಿಗೆ ಲಿಂಗದೀಕ್ಷೆ ನೀಡಿ ಆಶೀರ್ವಚನ ನೀಡಿದ ಅವರು, ಸಮಾಜದ ಅಭಿವೃದ್ಧಿಯ ಜೊತೆಗೆ ಎಲ್ಲರನ್ನು ಒಗ್ಗೂಡಿಸುವ ಕಾರ್ಯವನ್ನು ವಿಶ್ವ ವೀರಶೈವ-ಲಿಂಗಾಯತ ಮಹಾ ವೇದಿಕೆ ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಜನಜಾಗೃತಿ, ಧಾರ್ಮಿಕ ಮೌಲ್ಯಗಳ ಪ್ರಚಾರ ಹಾಗೂ ಸಂಘಟನೆಯ ಬಲವರ್ಧನೆಗೆ ವೇದಿಕೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವ ವೀರಶೈವ-ಲಿಂಗಾಯತ ಮಹಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ನಟರಾಜು, ರಾಜ್ಯಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಹಾಸನ ಜಿಲ್ಲಾ ಅಧ್ಯಕ್ಷ ಹಳ್ಳಿಮೈಸೂರು ಪ್ರಕಾಶ್, ಹೊಳೆನರಸಿಪುರ ತಾಲ್ಲೂಕು ಅಧ್ಯಕ್ಷ ಚನ್ನಾಪುರ ಸಿ.ಆರ್. ಮಹೇಶ್, ಅರಕಲಗೂಡು ತಾಲ್ಲೂಕು ಅಧ್ಯಕ್ಷ ಕೊಣನೂರು ಅಮೃತೇಶ್, ಮಹಾಸಭಾ ಅಧ್ಯಕ್ಷ ರಾಜಶೇಖರ್, ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಅರುಣ್ ಕುಮಾರ್, ಬಸಪ್ಪ, ನಂಜಪ್ಪ, ಬಸವರಾಜು, ಪುಟ್ಟಸೋಮಯ್ಯ, ಸೋಮಪ್ಪಾಜಿ, ವೀರಭದ್ರೇಶ್ವರ, ಚಂದ್ರಶೇಖರ್, ಬಸವಲಿಂಗಪ್ಪ ಹಾಗೂ ಬಾಗೇವಾಳು ಬಸವಶಾಸ್ತ್ರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
