ಹಾಸನದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ದಿನಾಂಕ 15.08.2026ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 79 ವರ್ಷ ತುಂಬಿದ ಸಂದರ್ಭದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿದ ಮುಖ್ಯ ಅತಿಥಿಗಳಾದ ನಗರದ ಶಿವಪ್ರಸಾದ್ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶಿವಪ್ರಸಾದ್ ಸಿ. ರವರು ಮಾತನಾಡಿ, ಪ್ರತಿಯೊಬ್ಬ ನಾಗರಿಕನೂ ಸುಶಿಕ್ಷಿತ, ಸಬಲ ಮತ್ತು ಅಭಿವೃದ್ಧಿ ಹೊಂದಿದ ದೇಶವನ್ನು ಕಟ್ಟೋಣ. ಮಕ್ಕಳು ದೊಡ್ಡ ಕನಸು, ದೂರದೃಷ್ಟಿ ಕೋನ, ಚಿಂತನಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. 2047ರ ಹೊತ್ತಿಗೆ ನಾವೆಲ್ಲ ಸೇರಿ ನಮ್ಮ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡೋಣ ಎಂದು ರಾಷ್ಟ್ರನಾಯಕರನ್ನು ಸ್ಮರಿಸಿದರು.
ಕೆ.ಸಿ.ಪಿ. ಗ್ರೂಪ್ನ ಮಾಲೀಕರು ಹಾಗೂ ಶಾಲೆಯ ಸಂಸ್ಥಾಪಕರಾದ ಶ್ರೀಯುತ ಕೆ.ಸಿ. ಪುಟ್ಟಸ್ವಾಮಿ ಗೌಡರವರು ಮಾತನಾಡಿ ಮಕ್ಕಳು ದೇಶದ ಸಂಪತ್ತು. ದೇಶವನ್ನು ಕಟ್ಟಲು ಸದ್ಗುಣಗಳು, ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ನೆನೆದರು.
ಶಾಲಾ ಶಿಕ್ಷಕರಾದ ಶ್ರೀ ರಮೇಶ್ ಎನ್. ರವರು ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ರ್ಯಾ ನಂತರದ ದಿನಗಳನ್ನು ಬ್ರಿಟಿಷರ ಆಡಳಿತ, ಕಾನೂನುಗಳನ್ನು ಸಂಕ್ಷಿಪ್ತವಾದ ಇತಿಹಾಸವನ್ನು ಕಣ್ಮುಂದೆ ಕಂಡಂತೆ ವಿವರಿಸಿದರು. ಕೆಲವು ವಿದ್ಯಾರ್ಥಿಗಳು ತಮ್ಮ ಭಾಷಣದ ಮೂಲಕ ದೇಶಭಕ್ತಿ ಮತ್ತು ಏಕತೆಯನ್ನು ಸಾರಿದರು.
ಸ್ವಾತಂತ್ರೋತ್ಸವದ ಸಲುವಾಗಿ ಶಾಲೆಯಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾತ ವಿತರಿಸಲಾಯಿತು. ಸ್ವಾತಂತ್ರ ಹೋರಾಟಗಾರರ ಛದ್ಮವೇಷವನ್ನು ಧರಿಸಿ, ವಿವಿಧ ಹಾಡು, ದೇಶಭಕ್ತಿಗೀತೆಗಳು, ನೃತ್ಯಗಳನ್ನು ಮಾಡಿ ಶಾಲೆಯ ಮಕ್ಕಳು ದೇಶಕ್ಕೆ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ನಾಗರಾಜು .໖໐. ರವರು, ಪ್ರಾಂಶುಪಾಲರಾದ ಶ್ರೀಮತಿ ಕ್ರಿಸ್ಟೀನಾ ಎಸ್. ರವರು, ಬೋಧಕ/ಬೋಧಕೇತರ ವರ್ಗದವರು, ಪೋಷಕರು ಮತ್ತು ವಿದ್ಯಾರ್ಥಿಗಳೆಲ್ಲರೂ ಪಾಲ್ಗೊಂಡು ದೇಶಕ್ಕೆ ಗೌರವ ಸಮರ್ಪಿಸಿದರು.
