ಹಾಸನ : ದೇಶಾಭಿಮಾನ ಹಾಗೂ ರಾಷ್ಟ್ರ ಭಕ್ತಿ ಮುಂತಾದ ಮಹತ್ತರ ಗುಣಗಳುಳ್ಳ ಸಾವಿರಾರು ದೇಶಭಕ್ತರ ಹೋರಾಟದ ಪ್ರತಿಫಲವಾಗಿ ಭಾರತ ಸ್ವತಂತ್ರವಾಯಿತು ಎಂದು ಎನ್.ಸಿ.ಸಿ ಮೇಜರ್ ಕಮಾಂಡರ್ ಶಂಕರ್ ಭೋರ್ಗವಿ ಅಭಿಪ್ರಾಯಪಟ್ಟರು.
ಅವರು ಹಾಸನದ ವಿದ್ಯಾನಗರದ ಕ್ರೈಸ್ಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ ಯ “ದೇಶಾಭಿಮಾನ ಹಾಗೂ ರಾಷ್ಟ್ರ ಭಕ್ತಿ ಇದ್ದಂತಹ ಅನೇಕ ಮಹನೀಯರ ಹೋರಾಟ, ತ್ಯಾಗ ಬಲಿದಾನ ರಿಂದ ಇಂದು ನಾವು ಸ್ವತಂತ್ರ ಭಾರತದ ಲ್ಲಿದ್ದೇವೆ.ಸ್ವಾತಂತ್ಯ ಹೋರಾಟಗಾರ ರಾದ ಭಗತ್ ಸಿಂಗ್ ಚಂದ್ರ ಶೇಖರ್ ಆಜಾದ್, ಸರ್ದಾರ್ ವಲ್ಲಭಭಾಯ್ ಪಟೇಲ್ , ಮಹಾತ್ಮ ಗಾಂಧೀಜಿ,ಲಾಲ್ ಬಹದ್ದೂರ್ ಶಾಸ್ತ್ರಿ, ಜವಾಹರ್ ಲಾಲ್ ನೆಹರು, ಸರೋಜಿನಿ ನಾಯ್ಡು ಮುಂತಾದ ವರು ಸ್ವತಂತ್ರ ಕಟ್ಟಾಗಿ ಹೋರಾಟ ನಡೆಸಿದ್ದಾರೆ ಭಾರತೀಯ ರಾದ ನಾವೆಲ್ಲರೂ ಹೆಮ್ಮೆ ಪಡುವಂತಹ ಸುದಿನ ಈ ಸ್ವಾತಂತ್ರ್ಯದ ದಿನ. ಮಕ್ಕಳಲ್ಲಿ ಇರುವ ಕ್ರೀಡೆ , ಚಿತ್ರ ಕಲೆ ,ಕರಾಟೆ, ನೃತ್ಯ, ಹಾಡುಗಾರಿಕೆ ಮುಂತಾದ ಸುಪ್ತ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಕೋಟೆ ನಾಡನ್ನು ರಕ್ಷಿಸಿದ ಒನಕೆ ಓಬವ್ವ ಳ ನೃತ್ಯ ರೂಪಕ ವನ್ನು ಪ್ರದರ್ಶಿಸಿ ದರು. ಸಾಮೂಹಿಕ ಗಾಯನ , ರಾಷ್ಟ್ರ ಪ್ರೇಮ ನನ್ನು ಬಿಂಬಿಸುವ ನರ್ತನವು ನೋಡುಗರ ಕಣ್ಮನ ಸೆಳೆಯುವಂತಿತ್ತು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ರಾದ ರೆವೆರೆಂಡ್ ಫಾದರ್ ಅನುಮೋನ್ ಜೋಸೆಫ್ ಹಾಗೂ ಆಡಳಿತಾಧಿಕಾರಿ ಗಳಾದ ರೆವೆರೆಂಡ್ ಫಾದರ್ ರಿಜೋ ಥಾಮಸ್ ಉಪಸ್ಥಿತರಿದ್ದರು.
