ಹಾಸನ, ಜೂ. 6: ಡಾ. ವಿ.ಎಸ್. ವೀರಭದ್ರಪ್ಪ ಅವರ ಜೀವನದ ಸಮಗ್ರ ಚರಿತ್ರೆಯನ್ನು ದಾಖಲಿಸಿರುವ ‘ಸೇವಾರತ್ನ’ ಕೃತಿಯ ಬಿಡುಗಡೆ ಸಮಾರಂಭವು ಜುಲೈ 12, 2026ರಂದು (ಭಾನುವಾರ) ಬೆಳಿಗ್ಗೆ 10.30ಕ್ಕೆ ಹಾಸನದ ಕಲಾಭವನದಲ್ಲಿ ನಡೆಯಲಿದೆ.
ಶಿಕ್ಷಕಿ ವನಜಾಕ್ಷಿ ಅವರು ರಚಿಸಿರುವ ಈ ಕೃತಿಯ ಬಿಡುಗಡೆ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಚರ್ಚಿಸಲು ಜೂನ್ 6ರಂದು ಸಂಜೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಕೃತಿ ಬಿಡುಗಡೆ ಸಮಾರಂಭದ ರೂಪುರೇಷೆಗಳು, ಆಹ್ವಾನಿತ ಅತಿಥಿಗಳು, ಕಾರ್ಯಕ್ರಮದ ಯಶಸ್ವಿ ಆಯೋಜನೆ ಹಾಗೂ ಅಗತ್ಯ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಯಿತು. ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ನಡೆಸಲು ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.
ಡಾ. ವಿ.ಎಸ್. ವೀರಭದ್ರಪ್ಪ ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಸೇವಾ ಕ್ಷೇತ್ರದ ಸಾಧನೆಗಳನ್ನು ಪರಿಚಯಿಸುವ ‘ಸೇವಾರತ್ನ’ ಕೃತಿಯು ಓದುಗರಿಗೆ ಪ್ರೇರಣೆಯಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಸಾಹಿತ್ಯಾಸಕ್ತರು, ಸಂಘಟಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
– ಶಿವಕುಮಾರ್, ಕಟ್ಟಾಯ.
