ಬಸ್ ನಲ್ಲಿ ಒಬ್ಬಳು
ಭಿಕ್ಷುಕಿ ಸಿಕ್ಕಳು
ನನ್ನ ನೋಡಿ ನಕ್ಕಳು
ಹೆಸರು ಕೇಳಿದೆ
ಧನಲಕ್ಷ್ಮೀ ಎಂದಳು
ನಿರ್ವಾಹಕ ರೈಟ್ ಎಂದನು
ಇದು ಸರಿಯೇ…?
ನನ್ನ ಕನಸಿನ ಲೋಕಕ್ಕೆ
ಬಂದಿದ್ದ ಲೋಕ ಸುಂದರಿ
ಐಶ್ವರ್ಯ
ಮಗ್ಗುಲಲ್ಲಿ ಮಲಗಿದ್ದ
ನನ್ನಾಕೆ ನೋಡಿ
ಓಡಿ ಹೋದಳು
ಇದು ಸರಿಯೇ..?
ಮದ್ಯ ಕುಡಿದು ಅರ್ಧ
ರಾತ್ರಿ ಮನೆಗೆ ಹೋದೆ
ಮಡದಿ ದಮಯಂತಿ
ದಮ್ಮಯ್ಯ ಎಂದರೂ
ಬಾಗಿಲು ತೆರೆಯಲಿಲ್ಲ
ಅದಕ್ಕೆ ನಾನು
ರಾತ್ರಿ ಕುಡಿಯುತ್ತಿಲ್ಲ
ಹಗಲು ಬಿಟ್ಟಿಲ್ಲ
ಇದು ಸರಿಯೇ..?
ಸರ್ಕಾರ ನಿದ್ದೆ ಮಾಡುತ್ತಿದೆ
ಎಂದು ಪ್ರತಿಪಕ್ಷ ನಾಯಕರು
ಆರೋಪಿಸುತ್ತಿದ್ದರು
ಸಾಕ್ಷಿಗಾಗಿ ಮಂತ್ರಿಯೋರ್ವರು
ಸದನದಲ್ಲೇ ನಿದ್ದೆ ಮಾಡುತ್ತಿದ್ದರು
ಇದು ಸರಿಯೆ..?
____
ಗೊರೂರು ಅನಂತರಾಜು,
9449462879.
ವಿಳಾಸ:
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್,
ಹಾಸನ – 573201
