ಹಾಸನದ ಬ್ರಹ್ಮಕುಮಾರಿ ಸಮಾಜದ ವತಿಯಿಂದ ಶ್ರೀ ಕೃಷ್ಣಾ ಜನ್ಮಾಷ್ಠಮಿಯ ಅಂಗವಾಗಿ ಹಾಸನದ ವಿಜಯನಗರದ ಬ್ರಹ್ಮ ಕುಮಾರಿ ಸಮಾಜದ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾ ಆಚರಣೆ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದ ಉಧ್ಘಾಟನೆ ಯನ್ನು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ನೆರವೇರಿಸಿ ಮಾತಾನಾಡಿದ ಅವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾನಿಲಯವು 1930 ರಲ್ಲಿ ಸ್ಥಾಪನೆಗೊಂಡು ಹಲವು ವರ್ಷಗಳಿಂದ ಜ್ಞಾನ ನೀಡಿ ಧ್ಯಾನ ಕಳಿಸಿ ಸಂಸ್ಕಾರವನ್ನು ನೀಡುತ್ತಿದೆ ಜನರು ಪರಿವರ್ತನೆಯಿಂದ ಉತ್ತಮ ಸೇವೆ ಸಲ್ಲಿಸುವ ಮೂಲಕ ನಿರಂತರ ಸಮಾಜ ಸುಧಾರಣೆಗೆ ಕಾರ್ಯವನ್ನು ಕೈಗೊಂಡಿರುವುದು ಶ್ಲಾಘನೀಯವಾಗಿದೆ.

ಶಿವ ಪರಮಾತ್ಮ ದಿವ್ಯ ಅವತರನೆಯ ಅಜ್ಞಾನದ ಧರ್ಮದ ಅರಿವನ್ನು ಜ್ಞಾನದ ಮೂಲಕ ಬೆಳಕನ್ನು ತೋರುವ ಅಂತಹ ನಿಸ್ವಾರ್ಥ ಸಮಾಜ ಸೇವೆಯನ್ನು ಬ್ರಹ್ಮಕುಮಾರಿ ಸಮಾಜ ಮಾಡುತ್ತಿದೆ ಎಂದರು. ವಿಶ್ವ ಶಾಂತಿಗಾಗಿ ಕೆಲಸ ಮಾಡುವ ಸಂಘಟನೆಯಾಗಿದೆ.

ರಾಜಯೋಗ ಭಕ್ತರಿಗೆ ಭಕ್ತಿ ಫಲವನ್ನು ನೀಡುವ ಮೂಲಕ ಜೀವನವನ್ನು ಪರಮಾತ್ಮನಿಗೆ ಸಮರ್ಪಣೆ ಹಾಗೂ ಧ್ಯಾನದ ಮೂಲಕ ಆತ್ಮಪ್ರಜ್ಞೆಯನ್ನು ಕಲಿಸುತ್ತದೆ ಎಂದು ತಿಳಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ರಾಕಿ ಕಟ್ಟುವ ಮೂಲಕ ಸ್ನೇಹ ಸಂಬಂಧವನ್ನು ಪ್ರೀತಿಯ ಸಹೋದರತ್ವವನ್ನು ತೋರುವ ಕೆಲಸವನ್ನು ಬ್ರಹ್ಮ ಕುಮಾರಿ ರಾಜಯೋಗಿನಿಯರು ಮಾಡುತ್ತಿದ್ದಾರೆ ಇದು ಅಭಿನಂದನಾರ್ಯವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಸಮಾಜದ ರಾಜಯೋಗಿನಿಯು ಆದ ಸರಳಾ ಅಕ್ಕರವರು ಕಾರ್ಯಕ್ರಮದಲ್ಲಿ ಪಾಲುಗೊಂಡಿದ್ದರವರಿಗೆ ರಾಖಿ ಕಟ್ಟಿ ಹಣೆಗೆ ತೀಲಕ ಇಡುವ ಮೂಲಕ ಹಾಗೂ ಸಿಹಿನಿಡಿದರು. ಸಹಬಾಳ್ವೆ ಸಹೋದರತೆಯನ್ನು ನಮ್ಮ ಜೀವನದಲ್ಲಿ ಆಳವಡಿಸಿಕೋಳ್ಳುವುದು ಅತಿ ಮುಖ್ಯ ಎಂದರು ಧ್ಯಾನವು ನಮ್ಮನ್ನು ಶಾಂತಿ ಪ್ರೀಯರನ್ನಾಗಿ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ವೇಷ ಧರಿಸಿ ಮಕ್ಕಳು ನೃತ್ಯ ಮಾಡಿದರು. ಭಕ್ತ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲುಗೊಂಡಿದ್ದರು.
