ನವದೆಹಲಿ, ಏ.25: ಗ್ರಾಮೀಣ ಸಂಪರ್ಕವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY-III) ಯನ್ನು ಮಾರ್ಚ್ 2028ರವರೆಗೆ ವಿಸ್ತರಿಸಿರುವ ನಿರ್ಧಾರವನ್ನು ಸ್ವಾಗತಿಸಿ ಶ್ಲಾಘಿಸಿದೆ.
ಈ ವಿಸ್ತರಣೆ ಗ್ರಾಮಗಳನ್ನು ಸೇವೆಗಳು ಹಾಗೂ ಅಭಿವೃದ್ಧಿಯ ಕೇಂದ್ರಗಳೊಂದಿಗೆ ಸಂಪರ್ಕಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ದೈನಂದಿನ ಜೀವನದಲ್ಲಿ ಸುಗಮತೆ ತರುವ ಜೊತೆಗೆ ಸ್ಥಳೀಯ ಆರ್ಥಿಕತೆಯನ್ನೂ ಬಲಪಡಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ. ಉತ್ತಮ ರಸ್ತೆ ಸಂಪರ್ಕದಿಂದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ಸುಲಭ ಪ್ರವೇಶ ಸಾಧ್ಯವಾಗುತ್ತದೆ.
ರೈತರಿಗೆ ಕೃಷಿ ಉತ್ಪನ್ನಗಳನ್ನು ಸುಲಭವಾಗಿ ಸಾಗಿಸಲು ಸಹಾಯವಾಗುವ ಮೂಲಕ ನಷ್ಟಗಳನ್ನು ಕಡಿಮೆ ಮಾಡುತ್ತದೆ. ಕುಟುಂಬಗಳಿಗೆ ತುರ್ತು ವೈದ್ಯಕೀಯ ಸೇವೆಗಳು ಸಮಯಕ್ಕೆ ತಲುಪಲು ನೆರವಾಗುತ್ತದೆ. ಈ ಮೂಲಕ ಗ್ರಾಮೀಣ ಜೀವನದ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಸಾಧ್ಯವೆಂದು ಜೆಸಿಬಿ ಅಭಿಪ್ರಾಯಪಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜೆಸಿಬಿ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ , “ಗ್ರಾಮೀಣ ರಸ್ತೆಗಳು ಜನರ ದೈನಂದಿನ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತವೆ. ತುರ್ತು ಪರಿಸ್ಥಿತಿಗಳಲ್ಲಿ ಸಹಾಯ ಎಷ್ಟು ಬೇಗ ತಲುಪುತ್ತದೆ ಎಂಬುದನ್ನು ಅವು ನಿರ್ಧರಿಸುತ್ತವೆ. ಪಿಎಂಜಿಎಸ್ವೈ ಯೋಜನೆಗಳು ಗ್ರಾಮೀಣ ಭಾರತದಲ್ಲಿ ನಿಜವಾದ ಬದಲಾವಣೆ ತರಲು ಸಹಕಾರಿಯಾಗಿದೆ. ಉತ್ತಮ ರಸ್ತೆ ಸಂಪರ್ಕವು ಹಳ್ಳಿಗಳು ಮತ್ತು ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಜನರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ” ಎಂದು ಹೇಳಿದರು.
ಗ್ರಾಮೀಣ ಮೂಲಸೌಕರ್ಯದಲ್ಲಿ ಹೂಡಿಕೆ ದೀರ್ಘಕಾಲೀನ ಸಾಮಾಜಿಕ ಹಾಗೂ ಆರ್ಥಿಕ ಲಾಭಗಳನ್ನು ನೀಡುತ್ತದೆ. ಇದು ಪೂರೈಕೆ ಸರಪಳಿಯನ್ನು ಬಲಪಡಿಸಿ ಸಮತೋಲಿತ ಹಾಗೂ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಜೆಸಿಬಿ ಇಂಡಿಯಾ ಬಗ್ಗೆ:
ಜೆಸಿಬಿ ಇಂಡಿಯಾ ದೇಶದ ಪ್ರಮುಖ ಭೂಮಿಕಾರ್ಯ ಹಾಗೂ ನಿರ್ಮಾಣ ಸಾಧನಗಳ ತಯಾರಕ ಸಂಸ್ಥೆಯಾಗಿದ್ದು, “ಮೇಕ್ ಇನ್ ಇಂಡಿಯಾ” ಅಭಿಯಾನದ ಪ್ರಮುಖ ಭಾಗವಾಗಿದೆ. ಭಾರತದಲ್ಲಿ ಆರು ಅತ್ಯಾಧುನಿಕ ಕಾರ್ಖಾನೆಗಳ ಮೂಲಕ 135ಕ್ಕೂ ಹೆಚ್ಚು ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.
ಕಂಪನಿಗೆ ದೇಶಾದ್ಯಂತ 64ಕ್ಕೂ ಹೆಚ್ಚು ಡೀಲರ್ಗಳು ಹಾಗೂ 700 ಔಟ್ಲೆಟ್ಗಳ ಜಾಲವಿದ್ದು, ಸುಮಾರು 8,000 ಪರಿಣಿತ ಸಿಬ್ಬಂದಿಯನ್ನು ಹೊಂದಿದೆ. ಗ್ರಾಮೀಣ ಹಾಗೂ ನಗರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತನ್ನ ಉತ್ಪನ್ನಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.
