ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ಚಟ್ಟಂಗೆರೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶಾಲೆಯ ಹಿರಿಯ ವಿದ್ಯಾರ್ಥಿ ಪ್ರದೀಪ್ ಎಂ.ಆರ್.ಅವರಿಂದ ವ್ಯಾಸಂಗ ಮಾಡುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 40,000 ವೆಚ್ಚದಲ್ಲಿ ಟ್ರ್ಯಾಕ್ ಶೂಟ್ ವಿತರಿಸಲಾಯಿತು
ಟ್ರ್ಯಾಕ್ ಶೂಟ್ ವಿತರಿಸಿ ಮಾತನಾಡಿದ ಹಿರಿಯ ವಿದ್ಯಾರ್ಥಿ ಪ್ರದೀಪ್ ಎಂ.ಆರ್.ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಬೇಕು.ಕ್ರೀಡೆ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಶಿಸ್ತು ಮತ್ತು ಆತ್ಮವಿಶ್ವಾಸ ಬೆಳೆಯಲಿ ಎಂಬ ಉದ್ದೇಶದಿಂದ ನನ್ನ ಶಾಲೆ ವಿದ್ಯಾರ್ಥಿಗಳಿಗೆ ಈ ಸುಟ್ಸ್ಗಳನ್ನು ನೀಡಿದ್ದೇನೆ.ವಿದ್ಯಾರ್ಥಿಗಳು ಶಿಸ್ತು, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದ ಅವರು ಇದೇ ವೇಳೆ ಶಾಲೆಯ ಶೈಕ್ಷಣಿಕ ಪ್ರಗತಿಗಾಗಿ ಪ್ರಸಕ್ತ ಸಾಲಿನಲ್ಲಿ 2 ಹೈಯರ್ ವರ್ಷನ್ ಕಂಪ್ಯೂಟರ್ ಡೆಸ್ಕ್ಟಾಪ್ ಗಳನ್ನು ನೀಡುವುದಾಗಿಯೂ ಭರವಸೆ ನೀಡಿದರು.ಶಾಲೆಯ ಯಾವುದೇ ಶೈಕ್ಷಣಿಕ ಚಟುವಟಿಕೆಗೆ ಪೂರಕ ಸಹಾಯ ಬೇಕಾದರೂ ನನ್ನ ಕೈಲಾದಷ್ಟು ನೆರವು ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ಬಳಿಕ ಮಾತನಾಡಿದ ಶಾಲಾ ಶಿಕ್ಷಕರಾದ ಜೆ. ಮಂಜುನಾಥ್ ತಾಲ್ಲೂಕಿನ ಗಡಿ ಗ್ರಾಮ ಮಾವಿನಕೆರೆಯಲ್ಲಿ ಜನಿಸಿ,ನಮ್ಮ ಶಾಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಪ್ರದೀಪ್ ಎಂ.ಆರ್ ಅವರು ಇಂದು ಉತ್ತರ ಅಮೆರಿಕಾದ ಟೊರಾಂಟೋ ನಗರದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಅವರು ಬಾಲ್ಯದಿಂದಲೇ ಪರಿಶ್ರಮ, ಶಿಸ್ತು ಮತ್ತು ಶಿಕ್ಷಣದ ಮಹತ್ವವನ್ನು ಅರಿತು ಬೆಳೆದ ಅವರು,ಉನ್ನತ ಸ್ಥಾನಕ್ಕೆ ಏರಿದ ನಂತರವೂ ತಮ್ಮ ಮೂಲ ಬೇರನ್ನು ಮರೆತಿಲ್ಲ ನನ್ನ ಹಳೆಯ ವಿದ್ಯಾರ್ಥಿ ಪ್ರದೀಪ್ ಇಷ್ಟು ಎತ್ತರಕ್ಕೆ ಬೆಳೆದು, ಮತ್ತೆ ಶಾಲೆಗೆ ಬಂದು ಸಹಾಯ ಮಾಡುತ್ತಿರುವುದು ನನಗೆ ಹೆಮ್ಮೆ ತಂದಿದೆ. ವಿದ್ಯಾರ್ಥಿಗಳ ಪ್ರಗತಿಗೆ ಇಂತಹ ಸಮಾಜಮುಖಿ ಕಾರ್ಯಗಳು ಪ್ರೇರಣೆಯಾಗಿವೆ. ಪ್ರದೀಪ್ ಮತ್ತು ಅವರ ಕುಟುಂಬಕ್ಕೆ ಆಯುರಾರೋಗ್ಯ, ಸಮೃದ್ಧಿ ದೊರೆಯಲಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮಹೇಶ್ ಆರ್.ಜೆ ಶಾಲಾ ಶಿಕ್ಷಕರು, ಪೋಷಕರು ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
