ತುಮಕೂರು: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರ 84ನೇ ಹಾಗೂ ಮಾಜಿ ಮುಖ್ಯಮಂತ್ರಿದೇವರಾಜು ಅರಸು ಅವರ 111ನೇ ಜನ್ಮ ದಿನಾಚರಣೆಯನ್ನು ಸದ್ಭಾವನಾ ದಿನವನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರುಗಳು ಮಾಜಿ ಪ್ರಧಾನಿ ರಾಜೀವ್ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಸದ್ಭಾವನಾ ದಿನದ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಇರ್ವರು ನಾಯಕರ ಹುಟ್ಟು ಹಬ್ಬವನ್ನು ಆಚರಿಸಿದರು.
ಓಬಿಸಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ ಮಾತನಾಡಿ,ದೇವರಾಜಅರಸು ಅವರ ಕಾಲ ಬಡವರು, ದಲಿತರು, ಹಿಂದುಳಿದ ವರ್ಗಗಳ ಪಾಲಿಗೆ ಸುವರ್ಣಕಾಲ,ರಾಜೀವ್ಗಾಂಧಿ ಅವರ ಆಡಳಿತ ಯುವಜನರ ಕನಸುಗಳಿಗೆ ರೆಕ್ಕೆಕಟ್ಟಿದ ಕಾಲ.ಈರ್ವರ ಕಾಲದಲ್ಲಿ ಧ್ವನಿಯಿಲ್ಲದ ಸಮುದಾಯಗಳಿಗೆ ಶಕ್ತಿ ತುಂಬಿದವರು.ಇಂದು ಕೆಪಿಸಿಸಿ ಆಗಿರಬಹುದು, ಡಿಸಿಸಿ ಆಗಿಬಹುದು, ಹೊಸದಾಗಿ ಹುದ್ದೆಗೆ ನೇಮಕವಾಗುವ ಮುಖಂಡರು ಮುಕ್ತವಾಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕೆಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ,ಮಾಜಿ ಪ್ರಧಾನಿ ರಾಜೀವ್ಗಾಂಧಿ ಮತ್ತು ದೇವರಾಜಅರಸು ಅವರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ,ಬಡವರು,ದೀನ ದಲಿತರು, ಆಶಕ್ತರ ಬಗ್ಗೆ ಆಲೋಚಿಸಿ, ಅವರ ಏಳಿಗೆಗೆ ದುಡಿದ ಮಹನೀಯರು.ಬಂಗಾರಪ್ಪ, ಖರ್ಗೆ, ಧರ್ಮಸಿಂಗ್,ನಿಜಲಿಂಗಪ್ಪರಂತಹ ಹಿರಿಯ ನಾಯಕರು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವರು ಅರಸು,ದಮನಿತ ಸಮುದಾಯಗಳ ಏಳಿಗೆಗೆ ದುಡಿದವರನ್ನು ಇಂದು ಸಮಾಜ ಮತ್ತು ಸರಕಾರಗಳು ಮರೆತಿವೆ.ಇದು ವಿಪರ್ಯಾಸ. ತಂತ್ರಜ್ಞಾನದಿಂದ ದೇಶದ ಅಭಿವೃದ್ದಿ ಬಯಸಿದ್ದ ರಾಜೀವ್ಗಾಂಧಿ,ತಂತ್ರಜ್ಞಾನದ ಹೊಸ ಅವಿಷ್ಕಾರವಾದ ಮಾನವ ಬಾಂಬ್ಗೆ ಬಲಿಯಾಗಿದ್ದು ದುರಂತವೇ ಸರಿ.ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಈ ಇರ್ವರು ನಾಯಕರನ್ನು ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ನರಸೀಯಪ್ಪ, ಕೆಪಿಸಿಸಿ ಉಪಾಧ್ಯಕ್ಷರು ಮತ್ತು ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡರಾದ ಮುರುಳೀಧರಹಾಲಪ್ಪ, ಜಿಲ್ಲಾ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತ, ಮೆಹಬೂಬ್ ಪಾಷ, ಹೆಬ್ಬೂರು ಶ್ರೀನಿವಾಸಮೂರ್ತಿ,ಹಿರಿಯ ವಕೀಲರೂ ಮತ್ತು ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎನ್.ಹರೀಶ್ಕಂಬತ್ತನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
